ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನೀವು ಲವ್ವಲ್ಲಿ ಬಿದ್ದು ಒದ್ದಾಡುತ್ತಿದ್ದೀರಾ..? ದಯವಿಟ್ಟು ಗಮನವಿಟ್ಟು ಓದಿ!

ಲೈಫ್‌ ಸ್ಟೈಲ್‌ : Tulu Times | ಪ್ರೀತಿ ಎನ್ನುವುದು ಹೇಗೆ ಎಲ್ಲಿ ಶುರುವಾಗುತ್ತದೆ ಅಂತ ಹೇಳಲು ಅಸಾಧ್ಯ..!  ಪ್ರೀತಿ ಎಂಬ ಮಾಯೆಯಲ್ಲಿ ಬಿದ್ದು ಒದ್ದಾಡುವವರು ಸಾಕಷ್ಟು ಜನ ಇದ್ದಾರೆ. ಇನ್ನು ಪ್ರೀತಿಯನ್ನು ವ್ಯಕ್ತಪಡಿಸಲು ಆಗದೆ ಚಡಪಡಿಸುತ್ತಾ ಇರುವವರೂ ಕೂಡ ನಮ್ಮಲ್ಲಿ ಬಹುತೇಕ ಮಂದಿ ಇದ್ದಾರೆ. ಹಾಗಾದ್ರೆ ನೀವು ಪ್ರೀತಿ ಮಾಡುತ್ತಿದ್ದರೆ ಈ ವಿಚಾರಗಳನ್ನು ಗಂಭೀರವಾಗಿ ಅರ್ಥ ಮಾಡಿಕೊಳ್ಳಲೇಬೇಕು ಅದೇನು ಅಂತ ಈ ಸ್ಟೋರಿಯಲ್ಲಿ ಓದೋಣ…

ಜೀವನದಲ್ಲಿ ಪರಿಶುದ್ಧ ಪ್ರೀತಿ ಅನ್ನೋದು ಆಗೋದು ಒಂದೇ ಸಲ.. ಅದು ಮೊದಲ ಪ್ರೀತಿ! ಆ ಪ್ರೀತಿಯಲ್ಲಿ ಬಿದ್ದು ತೇಲಾಡುತ್ತಿರುವ ಹದಿಹರೆಯದ ಯುವಕ ಯುವತಿಯರು ಇಂದು ಅನೇಕರಿದ್ದಾರೆ. ಯುವಕ ಯುವತಿಯರು ಪ್ರೀತಿಯೆಂಬ ಮಾಯೆಯಲ್ಲಿ ಬಿದ್ದು ಜೀವನವನ್ನೇ ಹಾಳು ಮಾಡಿಕೊಂಡಿರುತ್ತಾರೆ. ಅದರಲ್ಲೂ, ತನ್ನ ಪ್ರೀತಿಗಾಗಿ ಜೀವವನ್ನೇ ತ್ಯಾಗ ಮಾಡುವುದು ಹದಿಹರೆಯದ ಪ್ರೀತಿ. ಈ ಸಮಯದಲ್ಲಿ ಯಾರು ಏನು ಹೇಳಿದರೂ ಕೂಡ ಪ್ರೀತಿ ಮಾಡುವ ಜೀವಗಳಿಗೆ ನಾಟುವುದೇ ಇಲ್ಲ. ಹಾಗಾಗಿ, ಪ್ರೀತಿ ಮಾಡುವವರು ಕೆಲವೊಂದು ವಿಚಾರಗಳನ್ನು ಮನಸ್ಸಲ್ಲಿ ಇಟ್ಟುಕೊಳ್ಳಬೇಕು. ಅದೆಷ್ಟೋ ಮಂದಿ ಯುವಕರು, ಯುವತಿಯರು ಪ್ರೀತಿ ಸಿಗಲಿಲ್ಲ ಅಂತ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ.

ಇದನ್ನೂ ಓದಿ: ಉಜಿರೆಯ ಸುರ್ಯ ಸದಾಶಿವ ರುದ್ರ ದೇವಸ್ಥಾನದ ಪವಾಡಗಳು ಅಚ್ಚರಿ ಮೂಡಿಸುತ್ತೆ..!

ಕೆಲವೊಬ್ಬರು ಸಂಗಾತಿ ಗೋಸ್ಕರ ತಮ್ಮ ಬ್ಯೂಟಿಫುಲ್ ಭವಿಷ್ಯವನ್ನೇ ಹಾಳು ಮಾಡಿಕೊಂಡಿರುತ್ತಾರೆ. ತಂದೆ ತಾಯಿ ತಮ್ಮ ಪ್ರೀತಿಗೆ ಒಪ್ಪಿಲ್ಲ ಅಂತ ತಮ್ಮ ಅತ್ಯಮೂಲ್ಯವಾದಂತಹ ಜೀವವನ್ನು ಕಳೆದುಕೊಳ್ಳುತ್ತಾರೆ. ಈ ಸಮಯದಲ್ಲಿ ಅಂತಹ ಹದಿಹರೆಯದ ಯುವಕ ಯುವತಿಯರಿಗೆ ಒಬ್ಬರು ಗುರುವಿನ ಅಗತ್ಯ ಇದ್ದೇ ಇರುತ್ತದೆ. ಹೀಗಾಗಿ, ಅವರಿಗೆ ತಿಳಿ ಹೇಳುವಂತಹ ಕೆಲಸವನ್ನು ಮಾಡಬೇಕು ಇಲ್ಲವಾದಲ್ಲಿ ಒಂದಲ್ಲಾ ಒಂದು ಸಮಸ್ಯೆ ಶುರುವಾಗುತ್ತದೆ.

ಹೆಚ್ಚಿನ ಯುವಕ ಯುವತಿಯರು ಪ್ರೀತಿಯಲ್ಲಿ ಬಿದ್ದ ನಂತರ ಸಮಯದ ಮಹತ್ತ್ವವನ್ನು ಅರಿತುಕೊಂಡಿರುವುದಿಲ್ಲ. ಚಿಕ್ಕ ಪುಟ್ಟ ವಿಚಾರಗಳಿಗೂ ಕೂಡ ನೊಂದಿಕೊಂಡಿರುತ್ತಾರೆ. ತನ್ನ ಪ್ರಿಯತಮನಿಗೋಸ್ಕರ ಪ್ರಿಯತಮೆ ತನ್ನ ಭವಿಷ್ಯವನ್ನು ದೂರ ತಳ್ಳುತ್ತಾ ಹೋಗುತ್ತಾಳೆ. ಹಾಗೆಯೇ ಹುಡುಗರು ಕೂಡ ತಮ್ಮ ಪ್ರಿಯತಮೆಗೋಸ್ಕರ ದುಡ್ಡು ಸಂಪಾದನೆ ಮಾಡದಿದ್ದರೂ ಕೂಡ ಆಕೆಯ ಚಿಕ್ಕಪುಟ್ಟ ಖುಷಿಯನ್ನೇ ಬಯಸುತ್ತಾರೆ.  ಇದರಿಂದ, ತಮ್ಮ ಜೀವನದ ಧ್ಯೇಯವನ್ನೇ ಮರೆತುಹೋಗಿರುತ್ತಾರೆ, ಇಂತಹ ಸಮಯದಲ್ಲಿ ಪ್ರೀತಿ ಮಾಡುತ್ತಿರುವಂತಹ ಇಬ್ಬರು ಜೀವಗಳಿಗೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಕಿಂಚಿತ್ತೂ ತಾಳ್ಮೆ ಹಾಗೂ ಯೋಚಿಸುವಂತಹ ಪರಿವೆಯೇ ಇರುವುದಿಲ್ಲ. ಹೀಗಾಗಿ ಇಂತಹ ಮನಸ್ಸು ಉಳ್ಳವರು ನೀವಾಗಿದ್ರೆ ಖಂಡಿತವಾಗಲೂ ಪ್ರೀತಿ ಎನ್ನುವಂತಹ ಮಾಯೆಯಲ್ಲಿ ಬೀಳುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಿ.

ಪ್ರೀತಿಯಲ್ಲಿ ಬಿದ್ದ ನಂತರ ಬಿಸಿ ರಕ್ತ ಇರುವಂತಹ ವಯಸ್ಸಿನ ಯುವಕ ಯುವತಿಯರು ವಿದ್ಯಾಭ್ಯಾಸ ಹಾಗೂ ಉದ್ಯೋಗಗಳ ಬಗ್ಗೆ ಯೋಚನೆಯೇ ಮಾಡುವುದಿಲ್ಲ. ಇದೇ ನಮ್ಮ ಜೀವನ ಇಷ್ಟೇ ನಮ್ಮ ಲೈಫ್ ಅಂತ ಅಂದುಕೊಂಡು ಸಮಾಜದಲ್ಲಿ ಒಂದಿಷ್ಟು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಾರೆ. ಇನ್ನು ತಂದೆ, ತಾಯಿ ತಮ್ಮ ಮಕ್ಕಳ ಕಡೆಗೆ ಯೋಚಿಸಿ, ಬುದ್ದಿಯನ್ನು ಹೇಳಬೇಕಾಗಿದೆ. ಕೆಲವೊಬ್ಬರು ತಂದೆ, ತಾಯಿ ತಮ್ಮ ಮಕ್ಕಳಿಗೆ ಕೋಪದಿಂದ ತಿಳಿ ಹೇಳುತ್ತಾರೆ. ಇದರಿಂದ ಮಕ್ಕಳ ಸೂಕ್ಷ್ಮ ಮನಸ್ಸು ಇನ್ನೂ ಕೂಡ ನೋವಿನಿಂದ ಬಳಲುತ್ತದೆ. ಇದರಿಂದ ಮಕ್ಕಳ ಮನಸ್ಸಿಗೆ ನೋವಾಗದ ರೀತಿ ಪ್ರೀತಿ ಎಂಬ ವಿಚಾರದಲ್ಲಿ ಆಗುವಂತಹ ಅಡೆತಡೆಗಳನ್ನು ತಂದೆ ತಾಯಿ ಮಕ್ಕಳಿಗೆ ನಿಧಾನವಾಗಿ ತಿಳಿ ಹೇಳಿದರೆ ಒಳ್ಳೆಯದು.

Are you struggling to fall in love? Please read carefully! – ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page