ಚಿತ್ರದುರ್ಗ : Tulu Times | ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಪ್ರಕರಣದ ವಾದ-ಪ್ರತಿವಾದವು ಪೂರ್ಣಗೊಂಡಿದೆ. ಇದೇ ನವೆಂಬರ್ 26ರಂದು ಮಹತ್ವದ ತೀರ್ಪು ಪ್ರಕಟಿಸಲು ದಿನಾಂಕ ನಿಗದಿಪಡಿಸಿ ಇಲ್ಲಿನ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಕಾಯ್ದಿರಿಸಿದ್ದು, ಇಂದು ಮುರುಗಶ್ರೀ ಕೋರ್ಟ್ ಗೆ ಹಾಜರಾಗಿರುತ್ತಾರೆ.
ಶರಣರ ವಿರುದ್ಧದ ಎರಡು ಫೋಕ್ಸೋ ಪ್ರಕರಣಗಳ ಪೈಕಿ ಮೊದಲ ಪ್ರಕರಣದ ಸಂಬಂಧ ಸುದೀರ್ಘ ವಿಚಾರಣೆ ನಡೆದಿದೆ. ವಿಚಾರಣೆ ವೇಳೆ ಸಂತ್ರಸ್ತೆಯ ಪರ ಅಂತಿಮ ವಾದ ಮಂಡಿಸಲಾಗಿದ್ದು, ವಾದ ಆಲಿಸಿದ ನ್ಯಾಯಾಲಯ ಇಂದು ಪ್ರಕರಣದ ತೀರ್ಪನ್ನು ಪ್ರಕಟಿಸುವುದಾಗಿ ತಿಳಿಸಿದೆ.
A 1 ಮುರಿಘಾಶ್ರೀ, A 2 ವಾರ್ಡನ್ ರಶ್ಮಿ, A 4 ಪರಮಶಿವಯ್ಯ ಕೋರ್ಟ್ ಗೆ ಹಾಜರಾಗಿದ್ದು, ಇದೀಗ ಫೋಕ್ಸೋ ಕೇಸ್ ನಲ್ಲಿ ಮುರುಘಾಶ್ರೀ ಗೆ ರಿಲೀಫ್ ಸಿಕ್ಕಿದೆ, ಈ ಕೇಸ್ ನಿಂದ ಖುಲಾಸೆಯಾಗಿದ್ದು, ಮೊದಲ ಕೇಸ್ ನಲ್ಲಿ ನಿರ್ದೋಷಿ ಆಗಿದ್ದಾರೆ ಎಂದು ಕೋರ್ಟ್ ತೀರ್ಪು ನೀಡಿದೆ. ಇನ್ನೂ ಒಂದು ಎಫ್ ಐಆರ್ ನಲ್ಲಿ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ. ಮುರುಘಾಶ್ರೀಗಳ ವಿರುದ್ಧ ಷಡ್ಯಂತ್ರ ಮಾಡಲಾಗಿತ್ತು ಎಂದು ಅಲ್ಲಿನ ಅವರ ಭಕ್ತರು ಹೇಳಿಕೆಯನ್ನು ನೀಡಿದ್ದರು. ಜೊತೆಗೆ, ಪರ ವಕೀಲರು ಶರಣರ ವಿರುದ್ಧದ ಕೇಸ್ ನಲ್ಲಿ ಜಯ ಗಳಿಸಿರುವುದು ಖುಷಿಯಾಗಿದ್ದು ವಾದ ಪ್ರತಿವಾದಕ್ಕೆ ಕೋರ್ಟ್ ನೀಡಿದ ತೀರ್ಪಿಗೆ ಎಲ್ಲರೂ ರಿಲೀಫ್ ಆಗಿರುವುದು ವರದಿಯಾಗಿದೆ. Murughashree refugees get relief in first case – ತುಳು ಟೈಮ್ಸ್
ಇದನ್ನೂ ಓದಿ :ವಿಪರೀತ ಚಳಿ ಅಂತ ಅನಿಸ್ತಿದ್ಯಾ..? ಹಾಗಾದ್ರೆ ನಿಮ್ಮ ದಿನಚರಿ ಹೀಗಿರಲಿ..!
========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/fsDB1Bql7n8?si=beZF1Mj-FLeZj6uF











