Bigboss ಶೋಗೆ ನಿನ್ನೆ ಬೀಗ ಬಿದ್ದಿದೆ.ಭರ್ಜರಿಯಾಗಿ ಲಾಂಚ್ ಪ್ರದರ್ಶನ ಕಾಣ್ತಿದ್ದ ಬಿಗ್ ಬಾಸ್ ಶೋ ಗೆ ಬೀಗ ಬಿದ್ದಿರೋದು ಟಿ.ವಿ ವೀಕ್ಷಕರಿಗೆ ಶಾಕ್ ಕೊಟ್ಟಿದೆ.ನೆಚ್ಚಿನ ಸ್ಪರ್ಧಿಗಳು ನಿನ್ನೆ ಮನೆಯಿಂದ ಬೇರೆಡೆ ಹೋಗ್ತಿರೋ ವೀಡಿಯೋ ನೋಡಿರೋ ಬಿಗ್ ಬಾಸ್ ವೀಕ್ಷಕರು ಒಂದು ಕ್ಷಣ ಶಾಕ್ ಆಗಿದ್ರು..ಗಲೀಜು ನೀರು ಸಂಸ್ಕರಣೆಯ ಕೊರತೆ ನಿಯಮಕ್ಕೆ ವಿರುದ್ದವಾಗಿ ಚರಂಡಿಗೆ ನೀರು ಬಿಟ್ಟ ಕಾರಣಕ್ಕೆ ಜಾಲಿವುಡ್ ಸ್ಟುಡಿಯೋಗೆ ನಿನ್ನೆ ಬೀಗ ಹಾಕಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಕೀಯ ತಿರುವು ಕೂಡ ಸಿಗ್ತಿದೆ.ಜೆಡಿಎಸ್ ಬಿಗ್ ಬಾಸ್ ಗೆ ಬೀಗ ಬೀಳೋದಿಕ್ಕೆ ಡಿ.ಕೆ ಶಿವಕುಮಾರ್ ಕಾರಣ ಎಂದು ನೇರ ಆರೋಪ ಮಾಡಿದೆ.ನಟ್ ಬೋಲ್ಟ್ ಪ್ರಕರಣ ನಂತರದ ಸಿನಿಮಾರಂಗದ ಮೇಲೆ ಮುನಿಸಿಕೊಂಡಿರುವ ಡಿಕೆ ಈ ರೀತಿಯಾಗಿ ಸೇಡು ತೀರಿಸಿಕೊಂಡಿದ್ದಾರೆ.ಎಂದು ಜೆಡಿ ಎಸ್ ಆರೋಪಿಸಿದೆ.
ಸಿನಿಮಾರಂಗದ ನಟ್ ಬೋಲ್ಟ್ ಟೈಟ್ ಮಾಡೋದು ಗೊತ್ತು ಎಂಬುದಾಗಿ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ರು.ಇದಕ್ಕೆ ಪ್ರತಿಯಾಗಿ ಸುದೀಪ್ ಕೂಡ ಪ್ರತಿಕ್ರಯಿಸಿದ್ರು.ಈ ಕಾರಣಕ್ಕೆ ಸುದೀಪ್ ಶೋ ವನ್ನು ತನ್ನ ಅಧಿಕಾರ ಬಳಸಿ ಡಿಕೆ ಬಂದ್ ಮಾಡಿಸಿದ್ದಾರೆ. ಎಂಬ ಆರೋಪ ಕೇಳಿ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ನನಗೂ ಬಿಗ್ ಬಾಸ್ ಪ್ರಕರಣಕ್ಕೂ ಸಂಬಂಧವಿಲ್ಲ.ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ.ಮನರಂಜನೆ ಎಲ್ಲರಿಗೂ ಬೇಕು ಆದರೆ ಕಾನೂನು ಬಾಹಿರವಾಗಿ ವರ್ತಿಸಿದಾಗ ಕಾನೂನು ಕ್ರಮವನ್ನು ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ.ಎಂದಿದ್ದಾರೆ.
ಇನ್ನೂ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ ರಾಮನಗರ ಜಿಲ್ಲಾಡಳಿತದ ಕ್ರಮವನ್ನು ಬಿಗ್ ಬಾಸ್ ಜಾಲಿವುಡ್ ಸ್ಟುಡಿಯೋಸ್ ಕೋರ್ಟ್ ನಲ್ಲಿ ಪ್ರಶ್ನಿಸಿದೆ.ತುರ್ತಾಗಿ ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸಲಾಗಿದೆ.ಇಂದು ಮದ್ಯಾಹ್ನ ಎರಡುವರೆ ಗಂಟೆಗೆ ವಿಚಾರಣೆ ನಡೆದು ತೀರ್ಪು ಹೊರಬರುವ ಸಾಧ್ಯತೆ ಇದೆ.
ಇದನ್ನೂ ಓದಿ:BPL CARD:ರಾಜ್ಯ ಸರ್ಕಾರದಿಂದ ಅನರ್ಹ ರೇಷನ್ ಕಾರ್ಡ್‌ಗಳು ರದ್ದು.
………………………………………………………………………………………………………………………………………………………………………………………………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಲಿಂಕ್ ಓಪನ್ ಮಾಡಿ
https://www.youtube.com/@tulutimess
ತುಳುಟೈಮ್ಸ್ ನ್ನೂ Facebook,instagram ಫಾಲೋ ಮಾಡಲು ಕೆಳಗಿನ ಲಿಂಕ್ ಒತ್ತಿ.
https://www.facebook.com/people/Tulu-Times/61580251323047/?rdid=pZry8cIfU2F0AwLS&share_url=https%3A%2F%2Fwww.facebook.com%2Fshare%2F19ftinpnp5%2F
instagram:https://www.instagram.com/tulutimes/?igsh=bXUxM3NnNjBlc3lq#











