ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕರ್ನಾಟಕದ ಉಬರ್ ಚಾಲಕರಿಗೆ ಅವಕಾಶ ನೀಡದೆ ಬೇರೆ ರಾಜ್ಯದವರಿಗೆ ಡ್ಯೂಟಿ…!

ಬೆಂಗಳೂರು : Tulu Times | ಉಬರ್ ಒಂದು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯಾಗಿದ್ದು, ಉಬರ್‌ನಲ್ಲಿ ಗಾಡಿ ಚಲಾಯಿಸುವವರು ಉಬರ್ ಚಾಲಕರು ಅಂತ ಕರೆಯಲ್ಪಡುತ್ತಾರೆ. ಇವರು ಉಬರ್ ಕಂಪನಿಯ ನೌಕರರಲ್ಲ, ಆದರೆ ತಮ್ಮ ವಾಹನದ ಮೂಲಕ ಸಹಭಾಗಿಯಾಗಿ ಕಾರ್ಯನಿರ್ವಹಿಸುತ್ತಾರೆ. ಆದ್ರೆ ಬೊಮ್ಮನಹಳ್ಳಿ ಹೊಸೂರು ರಸ್ತೆಯ ಉಬರ್ ಹೆಡ್‌ ಆಫೀಸ್‌ ಮುಂದೆ ಸಾವಿರಾರು ಕ್ಯಾಬ್ ಚಾಲಕರು ಮುತ್ತಿಗೆ ಹಾಕಿ ಪ್ರತಿಭಟಿಸಿರುವುದು ವರದಿಯಾಗಿದೆ. ಉಬರ್ ಅಧಿಕಾರಿಗಳು ಕರ್ನಾಟಕದ ಚಾಲಕರಿಗೆ ಡ್ಯೂಟಿ ನೀಡದೆ, ಬೇರೆ ರಾಜ್ಯದವರಿಗೆ ಅವಕಾಶ ನೀಡುತ್ತಿದ್ದಾರೆ.

ಸ್ವಂತ ಕಾರುಗಳಿಗೆ ಮಾತ್ರ ಬಾಡಿಗೆ ಬುಕ್ಕಿಂಗ್ ;

ಬಾಂಗ್ಲಾದೇಶ ಮೂಲದ ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೂ ಕೆಲಸ ನೀಡುತ್ತಿದ್ದಾರೆ ಎಂದು ಚಾಲಕರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಸ್ವಂತ ಕಾರುಗಳಿಗೆ ಮಾತ್ರ ಬಾಡಿಗೆ ಬುಕ್ಕಿಂಗ್ ನೀಡಿ, ಅಟ್ಯಾಚ್ ಮಾಡಿದ ವಾಹನಗಳಿಗೆ ಡ್ಯೂಟಿ ನೀಡುತ್ತಿಲ್ಲವೆಂದು ಚಾಲಕರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಚಾಲಕರು ಕಬ್ಬಿಣದ ರಾಡ್ ನಿಂದ ಉಬರ್ ಕಂಪನಿ ಬಾಗಿಲು ತರೆಯಲು ಮುಂದಾಗಿದ್ದು, ಉಬರ್ ಕಂಪನಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಿಂದಿನ ಬಾಗಿಲಿನಿಂದ ಹೊರ ಹೋಗಿದ್ದಾರೆ.

ಪ್ರಯಾಣಿಕರಿಂದ ಅನಧಿಕೃತವಾಗಿ ದುಪ್ಪಟ್ಟು ದರ ;

ಉಬರ್ ಚಾಲಕರ ಧ್ವನಿ ತಾರಕಕ್ಕೇರಿದ್ದು, ಅವರ ಅಸಹಾಯಕತೆಯನ್ನು ದುರ್ಬಳಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಇತ್ತ ಬಾಡಿಗೆಯು ಇಲ್ಲ, ಅತ್ತ ಮಾಡಿರುವ ಸಾಲ ತೀರಿಸಲು ಆಗದೆ ಪರದಾಡುವಂತಾಗಿದೆ. ಒನ್ ಸಿಟಿ ಒನ್ ಫೇರ್ ಜಾರಿಯಾಲ್ಲಿದ್ದರೂ ಉಬರ್ ಕಂಪನಿ ಮಾತ್ರ ಪ್ರಯಾಣಿಕರಿಂದ ಅನಧಿಕೃತವಾಗಿ ದುಪ್ಪಟ್ಟು ದರ ಪಡೆಯುತ್ತಿದೆ. ಮಳೆ ಬಂದಾಗ ಒಂದು ರೀತಿ, ಮನ ಬಂದಂತೆ ಹಣ ಪಡೆದುಕೊಳ್ತಾ ಇದ್ದಾರೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪರಪ್ಪನ ಅಗ್ರಹಾರ ಸ್ಟೇಷನ್ ಪೋಲಿಸರು, ಆಗಿರುವ ಅನ್ಯಾಯದ ವಿರುದ್ಧ ದೂರು ನೀಡುವಂತೆ ಚಾಲಕರಿಗೆ ಹೇಳಿದಾಗ, ಈ ಹಿಂದೆ ಸಾಕಷ್ಟು ಬಾರಿ ದೂರು ನೀಡಿದ್ದೇವೆ ಆದರೆ ಪೋಲಿಸರು ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚಾಲಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಉಬರ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವಂತೆ ಚಾಲಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ. Uber drivers from Karnataka will not be allowed to work in other states – ತುಳು ಟೈಮ್ಸ್

ಇದನ್ನೂ ಓದಿ :ವಿಟ್ಲ: ಸೊಸೈಟಿ ಆವರಣದಲ್ಲಿದ್ದ ನಾಲ್ಕು ಗೋವು ಕಳವುಗೈದ ಮುಸುಕುಧಾರಿಗಳು

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=ObNSLQyYyGZeCQlp

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page