Shivamogga : ಎಲ್ಲಾ ಕಡೆ ಜೈಲಿನ ಖೈದಿಗಳು ಆರಾಮವಾಗಿರೋ ಹಾಗೂ ಯಾವುದೇ ಶಿಕ್ಷೆಗೂ ತಲೆಕೆಡಿಸಿಕೊಳ್ಳದಂತೆ ಬಿಂದಾಸ್ ಆಗಿ ಜೀವನ ನಡೆಸ್ತಾ ಇರೋದು ಈಗ ಭಾರೀ ಪ್ರಚಲಿತದಲ್ಲಿರುವ ಸುದ್ದಿ. ಹೀಗಿರುವಾಗಲೇ, ಶಿವಮೊಗ್ಗ ಜೈಲಿಗೆ ಗಾಂಜಾ ಸಪ್ಲೈ ಆಗುತ್ತಿದ್ದು ಅಲ್ಲಿನ ಅಧಿಕಾರಿಗಳನ್ನು ಕಣ್ತಪ್ಪಿಸಿ ಬಾಳೆಗೊನೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವವರನ್ನು ಹಿಡಿಯಲಾಗಿದೆ.
ಒಟ್ಟು 120 ಗ್ರಾಂ ಗಾಂಜಾ ಹಾಗೂ 40 ಸಿಗರೇಟ್ ;
ಇಲ್ಲಿ ಕದೀಮರು ಬಾಳೆಗೊನೆಯನ್ನು ಜೈಲಿಗೆ ತಲುಪಿಸುವ ಉದ್ದೇಶದಿಂದ ಬಾಳೆಗೊನೆಯ ದಿಂಡನ್ನು ಕೊರೆದು ಅದರೊಳಗೆ ಗಾಂಜಾ ಹಾಗೂ ಸಿಗರೇಟ್ ಹಾಕಿ ಜೈಲಿನ ಒಳಗಡೆ ಕಳುಹಿಸುವ ಪ್ಲಾನ್ ನಡೆಯುತ್ತಿತ್ತು. ಕ್ರಿಮಿನಲ್ ಗಳು ಈ ಬಾಳೆಗೊನೆಯ ದಿಂಡಿನಲ್ಲಿ ಬಹಳ ನಾಜೂಕಿನಿಂದ ಗಾಂಜಾ ಮತ್ತು ಸಿಗರೇಟ್ ನ್ನು ಸುತ್ತಿ ಇಟ್ಟಿದ್ದರು. ಈ ಜೈಲಿಗೆ ಬಂದ ಬಾಳೆಗೊನೆಯನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಗಾಂಜಾ ಮತ್ತು ಸಿಗರೇಟ್ ಗಳು ಪತ್ತೆಯಾಗಿರುವುದು ವರದಿಯಾಗಿದೆ. ಇದರಲ್ಲಿ ಒಟ್ಟು 120 ಗ್ರಾಂ ಗಾಂಜಾ ಹಾಗೂ 40 ಸಿಗರೇಟ್ ಗಳನ್ನು ಈ ಬಾಳೆಗೊನೆಯಲ್ಲಿ ಯಾರಿಗೂ ತಿಳಿಯದಂತೆ ಇಡಲಾಗಿತ್ತು ಎಂದು ಮಾಧ್ಯಮದಲ್ಲಿ ತಿಳಿಸಲಾಗಿದೆ.
ಶಿವಮೊಗ್ಗದಲ್ಲಿರುವ ಕಾರಾಗೃಹಕ್ಕೆ ಆಟೋದಲ್ಲಿ ಒಟ್ಟು ಐದು ಬಾಳೆಗೊನೆಗಳು ತಲುಪಿಸಲಾಗಿತ್ತು. ಈಗ ಆಟೋ ಚಾಲಕನನ್ನು ವಿಚಾರಣೆ ನಡೆಸಲಾಗಿದೆ. ಸಿಸಿಟಿವಿಯಲ್ಲಿ ಆಟೋ ಚಾಲಕ ಬಾಳೆಗೊನೆಯನ್ನು ತಂದಿಡುವುದು ಪತ್ತೆಯಾಗಿವೆ. ಆದರೆ ಆತನ ಹೇಳಿಕೆಯಲ್ಲಿ ಕ್ಯಾಂಟೀನ್ ಮಾಲೀಕನ ಆದೇಶದ ಮೇರೆಗೆ ಈ ಬಾಳೆಗೊನೆಯನ್ನು ಇಡಲಾಯಿತು ಎಂದು ಹೇಳಲಾಗಿದೆ. ಆದ್ದರಿಂದ,ಆರೋಪಿಯ ಪತ್ತೆಗಾಗಿ ತುಂಗಾ ನಗರದ ಪೊಲೀಸರು ಈಗ ತನಿಖೆಯನ್ನು ನಡೆಸುತ್ತಿರುವುದು ವರದಿಯಾಗಿದೆ.
ಇದನ್ನೂ ಓದಿ :Bengaluru: ವಾಹನ ಸವಾರರಿಗೆ ಗುಡ್ ನ್ಯೂಸ್..! ಶೇ.50ರಷ್ಟು ಭಾರೀ ರಿಯಾಯಿತಿ ಯಾಕೆ..?
………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/PDFUjSkFTZA?si=JMH85nvF-1Ww-kiz











