ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

Heart attack: ಯಕ್ಷಗಾನ ಕಲಾವಿದರಿಗೆ ಹೃದಯಾಘಾತವಾಗಲು ಕಾರಣ ಏನು..?

Heart attack: ಮನುಷ್ಯನಿಗೆ ಮರಣ ಅನ್ನೋದು ಹೇಗೆ ಬರುತ್ತೆ ಅಂತ ಹೇಳೋಕೆ ಆಗಲ್ಲ. ಇವತ್ತು ಇದ್ದವರು ನಾಳೆ ಇರೋದಿಲ್ಲ. ಇತ್ತೀಚೆಗಂತೂ ಅಕಾಲಿಕವಾಗಿ ಹೃದಯಾಘಾತದಿಂದ ಸಾವನ್ನಪ್ಪುವ ಮಂದಿ ಬಹಳಷ್ಟು ಮಂದಿ ಇದ್ದಾರೆ. ಇದೀಗ, ಉಡುಪಿಯಲ್ಲಿ ಯಕ್ಷಗಾನ ಕಲಾವಿದರು ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ‘ಮಹಿಷಾಸುರ’ನ ವೇಷ ಕಳಚುತ್ತಿದ್ದಂತೆ ಯಕ್ಷಗಾನ ಕಲಾವಿದ ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ನಡೆದಿತ್ತು.

ದಕ್ಷಿಣಕನ್ನಡ, ಉಡುಪಿ ಭಾಗಗಳಲ್ಲಿ ಯಕ್ಷಗಾನ ಕಲಾವಿದರು ಹೃದಯಾಘಾತಕ್ಕೆ ಒಳಗಾಗುವುದು ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಯಕ್ಷಗಾನದಲ್ಲಿ ದೇಹಕ್ಕೆ ಒತ್ತಡ  ಕೊಟ್ಟು ವೇದಿಕೆಯ ಮೇಲೆ ಯಕ್ಷಗಾನ ಮಾಡುವುದು ಕಾರಣವಿರಬಹುದು. ಅಥವಾ ಹೆಚ್ಚಾಗಿ ವಯಸ್ಸಾದವರೇ ಯಕ್ಷಗಾನದಲ್ಲಿ ವೇಷ ಹಾಕಿ ನೃತ್ಯ ಮಾಡುವುದರಿಂದ ಹೃದಯಾಘಾತ ಹೆಚ್ಚಾಗಿ ಕಂಡುಬರುತ್ತಿದೆ.

ಯಕ್ಷಗಾನ ಕಲಾವಿದನ ದುರಂತ ಸಾವು!

ಉಡುಪಿಯ ಮಂದಾರ್ತಿ ಮೇಳದ ಕಲಾವಿದ ಈಶ್ವರ ಗೌಡ (51) ಮೃತಪಟ್ಟವರು. ದೇವಿ ಮಹಾತ್ಮೆ ಪ್ರಸಂಗದಲ್ಲಿ ಇವರು ಮಂದಾರ್ತಿ ಎರಡನೇ ಮೇಳದಲ್ಲಿ ಮಹಿಷಾಸುರನ ಪಾತ್ರ ಮಾಡುತ್ತಿದ್ದರು. ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆ ಅಸ್ವಸ್ಥಗೊಂಡಿದ್ದರು. ಬಳಿಕ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಿ ಈಶ್ವರ ಗೌಡ ನಿಧನರಾಗಿದ್ದಾರೆ.

ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ಈಶ್ವರ ಗೌಡ ಪಾತ್ರ ನಿರ್ವಹಿಸಿದ್ದರು. ಮಂದಾರ್ತಿ ಮೇಳದಲ್ಲಿ ಇವರ ತಂದೆಯೂ ವೇಷಧಾರಿಯಾಗಿದ್ದರು. ಶೃಂಗೇರಿ ಸಮೀಪದ ನೆಮ್ಮಾರು ಗ್ರಾಮದ ಬುಕ್ಡಿಬೖಲಿನಲ್ಲಿ ಅಂತ್ಯಕ್ರಿಯೆ ಜರುಗಲಿದ್ದು ಈಶ್ವರ ಗೌಡ ಅವರ ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಯಕ್ಷಗಾನ ಕಲಾವಿದರು ಮತ್ತು ಯಕ್ಷಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.

ಈ ಹಿಂದೆಯೂ ಬಹಳಷ್ಟು ಜನ ಯಕ್ಷಗಾನ ಕಲಾವಿದರು ವೇದಿಕೆಯ ಮೇಲೆಯೇ ಜೀವ ಕಳೆದುಕೊಂಡಿರುವ ಘಟನೆಗಳು ನಡೆದಿದೆ. ಕರಾವಳಿಯ ಗಂಡುಕಲೆ ಯಕ್ಷಗಾನ. ಅಲ್ಲಿನ ಜನರ ಜಾನಪದ, ಸಾಂಸ್ಕೃತಿಕ, ಮನೋರಂಜನಾ, ಧಾರ್ಮಿಕ ನಂಬಿಕೆಯ ಪ್ರತೀಕ. ಎಲ್ಲಾ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಯಕ್ಷಗಾನ ಮೇಳಗಳಿದ್ದು ಸಾವಿರಾರು ಜನ ಕಲಾವಿದರು ಯಕ್ಷಗಾನದಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.  ಸಾಕಷ್ಟು ಕಲಾವಿದರು ಯಕ್ಷಗಾನದ ರಂಗಸ್ಥಳದಲ್ಲೇ ವೇಷಧಾರಿಯಾಗಿ ಪ್ರದರ್ಶನ ನೀಡುತ್ತಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣ ಸರಸ್ವತಿ ಸದನದಲ್ಲಿ ನಡೆದ ತ್ರಿಜನ್ಮ ಮೋಕ್ಷ ಎನ್ನುವ ಯಕ್ಷಗಾನ ಪ್ರದರ್ಶನದ ವೇಳೆ ಇಹಲೋಕ ತ್ಯಜಿಸಿದ್ದರು.

ದಶಾವತಾರ ಯಕ್ಷಗಾನ ಮಂಡಳಿಯ ನಾಲ್ಕನೇ‌ ಮೇಳದ ತ್ರಿಜನ್ಮ ಮೋಕ್ಷ ಪ್ರಸಂಗದ ಕೊನೆಯ ಹಂತದ ಯಕ್ಷಗಾನ ನಡೆಯುತ್ತಿದ್ದಾಗ ಶಿಶುಪಾಲನ ಪಾತ್ರಧಾರಿಯಾಗಿದ್ದ ಹಿರಿಯ ಕಲಾವಿದ 58 ವರ್ಷದ ಗುರುವಪ್ಪ ಬಾಯಾರು ರಂಗಸ್ಥಳದಲ್ಲೇ ಇದ್ದು ಸಹ ಕಲಾವಿದರ ಜೊತೆಗಿದ್ದರು. ಇನ್ನೊಂದು ಪಾತ್ರಧಾರಿ ಯಕ್ಷಗಾನದ ರಂಗಸ್ಥಳದಲ್ಲಿ ಕುಣಿಯುತ್ತಿದ್ದಾಗ ಅಲ್ಲೇ ಇದ್ದ ಗುರುವಪ್ಪ ಬಾಯಾರು ಅವರಿಗೆ ಹೃದಯಾಘಾತವಾಗಿ ಏಕಾಏಕಿ ಕೆಳಗೆ ಕುಸಿದು ಬಿದ್ದುಕೊನೆಯುಸಿರೆಳೆದಿದ್ದರು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:  https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 168

You cannot copy content of this page