Technology: ಮಾನವರು 150 ವರ್ಷ ಬದುಕುವ ಮಾತ್ರೆಯನ್ನು ಚೀನಾ ಅಭಿವೃದ್ದಿಪಡಿಸಿದ್ದು, ಶೆನ್ಜೆನ್ ಮೂಲದ ಬಯೋಟೆಕ್ ಕಂಪನಿ ಭವಿಷ್ಯದಲ್ಲಿ ಮನುಷ್ಯರು 150 ವರ್ಷಗಳವರೆಗೆ ಬದುಕಲು ಸಾಧ್ಯ ಎಂದು ಹೇಳಿಕೊಂಡಿದೆ.
ಚೀನಾದಲ್ಲಿ ಇಂತಹ ಪ್ರಯೋಗ ನಡೆದಿದ್ದು, ‘ದೀರ್ಘಾಯುಷ್ಯ ಮಾತ್ರೆ’ ಸಂಚಲನ ಸೃಷ್ಟಿಸಿದೆ. ಚೀನಾದಲ್ಲಿ ಇಂತಹ ಪ್ರಯೋಗ ನಡೆದಿದ್ದು, ಇಡೀ ವಿಶ್ವದಾದ್ಯಂತ ಭಾರೀ ಕುತೂಹಲ ಮತ್ತು ಅನುಮಾನಗಳನ್ನೂ ಹುಟ್ಟುಹಾಕಿದೆ.
ಇದನ್ನೂ ಓದಿ: ಯುವನಿಧಿ ಫಲಾನುಭವಿಗಳಿಗೆ ಉಚಿತ ಕೌಶಲ್ಯ ತರಬೇತಿ : ನ.24 ರೊಳಗೆ ಸಂಪರ್ಕಿಸಿ
ಚೀನಾ ಕಂಪನಿಯ ಹೇಳಿಕೆ ಪ್ರಕಾರ, ಈ ಮಾತ್ರೆಯು ಮನುಷ್ಯರು ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೀವಿತಾವಧಿಯನ್ನೂ ಹೆಚ್ಚಿಸಿ, ದೇಹದಲ್ಲಿನ ಹಳೆಯ ಮತ್ತು ನಿಷ್ಕ್ರಿಯ ಕೋಶಗಳನ್ನು ಗುರಿಯಾಗಿಸಿ ಕೆಲಸ ಮಾಡುತ್ತದೆ. ಹೀಗಾಗಿ ವಿಜ್ಞಾನಿಗಳು zombie cells ಎಂದು ಕರೆಯುತ್ತಾರೆ. ಉರಿಯೂತ ಮತ್ತು ವಯಸ್ಸಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತಲೇ ಇರುತ್ತವೆ. ಮೊದಲು ಈ ಪ್ರಯೋಗವನ್ನು ಇಲಿಗಳ ಮೇಲೆ ಮಾಡಲಾಗಿದೆ. ಇಲಿಗಳ ಒಟ್ಟಾರೆ, ಜೀವಿತಾವಧಿಯಲ್ಲಿ 9.4% ಹೆಚ್ಚಳ ಕಂಡುಬಂದಿದೆ. ಚಿಕಿತ್ಸೆಯ ಬಳಿಕ ಇಲಿಗಳ ಜೀವಿತಾವಧಿ 64% ಕ್ಕಿಂತ ಹೆಚ್ಚಳವಾಗಿದೆ. ಕಂಪನಿಯ ಅಧಿಕಾರಿ ಲಿಯು ಕ್ವಿಂಗ್ಹುವಾ ಮಾಧ್ಯಮಗಳಿಗೆ ನೀಡಿದ ವರದಿಗಳ ಪ್ರಕಾರ, ಮನುಷ್ಯರು 150 ವರ್ಷಗಳವರೆಗೆ ಬದುಕೋದು ಇನ್ಮುಂದೆ ಸಾಧ್ಯ. ಮುಂಬರುವ ವರ್ಷಗಳಲ್ಲಿ ಗಮನಾರ್ಹ ಪ್ರಗತಿ ಕಾಣಲಿದ್ದೇವೆ ಎಂದಿದ್ದಾರೆ.
ಹಿಂದೆ, ಚೀನಾದಲ್ಲಿ ಯಾರೂ ದೀರ್ಘಾಯುಷ್ಯದ ಬಗ್ಗೆ ಮಾತನಾಡುತ್ತಿರಲಿಲ್ಲ. ಇದನ್ನು ಶ್ರೀಮಂತ ಅಮೆರಿಕನ್ನರ ಹವ್ಯಾಸವೆಂದು ಪರಿಗಣಿಸಲಾಗಿತ್ತು. ಚೀನಾದಲ್ಲಿ 2024ರಲ್ಲಿ ಸರಾಸರಿ ಜೀವಿತಾವಧಿ 79 ವರ್ಷಗಳನ್ನು ತಲುಪಿದೆ. ಇದು ಜಾಗತಿಕ ಸರಾಸರಿಗಿಂತ ಐದು ವರ್ಷಗಳು ಹೆಚ್ಚಾಗಿದೆ. ಹೀಗಾಗಿ ಚೀನಾ ದೀರ್ಘಾಯುಷ್ಯ ವಿಜ್ಞಾನದತ್ತ ಗಮನ ನೀಡುತ್ತಿದೆ. ಕಂಪನಿಯ ಹೇಳಿಕೆಗಳು ಹೊಸ ಭರವಸೆ ಹುಟ್ಟಿಸಿದೆ.ಆದರೆ ವೈಜ್ಞಾನ ಲೋಕ ಎಚ್ಚರಿಕೆಯಿಂದ ಇರಬೇಕೆಂದು ಒತ್ತಾಯಿಸುತ್ತಿದೆ. ಇಲಿಗಳ ಮೇಲಿನ ಯಶಸ್ವಿ ಪ್ರಯೋಗಗಳು ಕೇವಲ ಪ್ರಾಥಮಿಕ ಹಂತ ಮಾತ್ರ ಎಂದು ತಜ್ಞರು ಹೇಳುತ್ತಾರೆ. ಚೀನಾವು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದ್ದು, ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI), 5G, ಮತ್ತು ಹಸಿರು ತಂತ್ರಜ್ಞಾನಗಳಲ್ಲಿ ಮಹತ್ತರವಾದ ಪ್ರಗತಿ ಸಾಧಿಸುತ್ತಿದೆ. ಈ ವಲಯಗಳಲ್ಲಿ ಸರ್ಕಾರದ ಪ್ರೋತ್ಸಾಹ ಮತ್ತು ಹೂಡಿಕೆ ಗಣನೀಯವಾಗಿದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











