ಬ್ರೇಕಿಂಗ್ ನ್ಯೂಸ್
ಕರ್ನಾಟಕ

Parappana Agrahara : ಜೈಲಿನಲ್ಲಿ ತುಂಬಾ ಚಳಿ : ಕಂಬಳಿಗಾಗಿ ಮನವಿ ಮಾಡಿದ ಆರೋಪಿ‌ ನಟ ದರ್ಶನ್…!

Parappana Agrahara : ಜೈಲಿನಲ್ಲಿ ತುಂಬಾ ಚಳಿ ಇದೆ. ಮಲಗಿದ್ರೆ ನಿದ್ರೆಯೂ ಬರುತ್ತಿಲ್ಲ. ಈ ರೀತಿ ತುಂಬಾ ಚಳಿ ಇದ್ದರೂ ಹೆಚ್ಚುವರಿ ಕಂಬಳಿ ನೀಡುತ್ತಿಲ್ಲ ಎಂದು ದರ್ಶನ್ ಮನವಿ ಮಾಡಿಕೊಂಡಿರುತ್ತಾರೆ. ಇತ್ತೀಚೆಗಷ್ಟೇ ತಲೆದಿಂಬು, ಹಾಸಿಗೆ ಬೇಡಿಕೆಯನ್ನಿಟ್ಟಿದ್ದ ದರ್ಶನ್ ಗೆ ಕಂಬಳಿಯ ಅವಶ್ಯಕತೆಯೂ ಇದೆ ಎಂದು ವರದಿಯಾಗಿದೆ. 57 ನೇ ಸಿಸಿಹೆಚ್ ಕೋರ್ಟ್ ಗೆ ದರ್ಶನ್ ಮನವಿ ಮಾಡಿಕೊಂಡಿದ್ದು, We can’t sleep ನಿದ್ದೆ ಮಾಡ್ಲಿಕ್ಕೆ ಆಗ್ತಿಲ್ಲ… ಅಂತ ಕಂಬಳಿಗಾಗಿ ಮನವಿ ಮಾಡಿರುವುದು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಅಷ್ಟೇ ಅಲ್ಲದೇ ಮನೆಯವರು ತಂದ ಕಂಬಳಿಯನ್ನೂ ನೀಡುತ್ತಿಲ್ಲ ಎಂದು ಜೈಲಾಧಿಕಾರಿಗಳ ವಿರುದ್ಧ ಆರೋಪಿ‌ ನಟ ದರ್ಶನ್ ಕಂಪ್ಲೇಂಟ್ ಮಾಡಿರುತ್ತಾರೆ.

ವೀಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿ ದರ್ಶನ್ ವಿಚಾರಣೆಗೆ ಹಾಜರಾಗಿದ್ದು, ಸಿಆರ್ ಪಿಸಿ 294, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿಕೆ ನೀಡಿದ್ದು, ಆರೋಪಿಗಳ ಪರ ವಕೀಲರು ಅವಕಾಶಕ್ಕಾಗಿ ಕಾಲಾವಕಾಶ ಕೇಳಿದ್ದು, ಈ ಸಲುವಾಗಿ ವಿಚಾರಣೆಯನ್ನು ಡಿಸೆಂಬರ್ 3 ಕ್ಕೆ ಕೋರ್ಟ್ ಮುಂದೂಡಿದೆ.

ಒಂದೆಡೆ, ಈ ದರ್ಶನ್ ಈ ರೀತಿಯಲ್ಲಿ ಸಮಸ್ಯೆ ಅನುಭವಿಸುತ್ತಿದ್ದರೆ, ಇತ್ತ ಕಡೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ವೀಡಿಯೋ ವಿಚಾರವಾಗಿ ತಲೆಕೆಡಿಸಿಕೊಂಡಂತೆ ಮೂಲಗಳು ತಿಳಿಸಿವೆ. ನಟ ಧನ್ವೀರ್ ಹೇಳಿಕೆಯಂತೆ ಪರಪ್ಪನ‌ ಅಗ್ರಹಾರದಲ್ಲಿನ ವೀಡಿಯೋ ಸಮಸ್ಯೆಯು ವಿಜಯಲಕ್ಷ್ಮಿಗೆ ಸಂಕಷ್ಟ ತಂದೊಡ್ಡಿದ್ದು,
ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ನೋಟಿಸ್‌ ನೀಡಲು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ :Mantri Mall : ಮಂತ್ರಿಮಾಲ್ ಗೆ ಮತ್ತೊಮ್ಮೆ ಬೀಗ : ತೆರಿಗೆ ಕಟ್ಟಲು ಬಾಕಿ

……..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/hOy5CycSYqo?si=kN5HjWltTutQOZjM

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page