Cinema : ಯಶ್ ಅಮ್ಮ ಪುಷ್ಪಾ ಅರುಣ್ಕುಮಾರ್ ಅವರು ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ‘ಕೊತ್ತಲವಾಡಿ’ ಸಿನೆಮಾ ವಿಚಾರವಾಗಿ ಕೆಲವರ ಮೇಲೆ ಕೇಸ್ ಹಾಕಿದ್ದು, ಇದೀಗ ಠಾಣೆಯಲ್ಲಿ ದೂರು ದಾಖಲೆಯಾಗಿದೆ. ‘ಕೊತ್ತಲವಾಡಿ’ ಸಿನಿಮಾ ಪ್ರಮೋಟ್ ಮಾಡಲು ಹಣ ಪಡೆದು ಡೀ ಪ್ರಮೋಟ್ ಮಾಡಿದ ಆರೋಪವನ್ನು ಮಾಡಿ ದೂರು ದಾಖಲಿಸಿದ್ದಾರೆ. ಹಾಗಾಗಿ, ಆರೋಪಿಗಳಿಗೆ ಪೋಲಿಸರು ನೋಟಿಸ್ ನೀಡಿರುತ್ತಾರೆ.
ಹೆಚ್ಚಿನ ಹಣ ಕೊಡುವಂತೆಯೂ ಬೆದರಿಕೆ ಹಾಕಿದ್ರು, ಕೊತ್ತಲವಾಡಿ ಸಿನೆಮಾದ ಪ್ರಚಾರಕ್ಕೆಂದ ಹಣ ಪಡೆದ ಹರೀಶ್ ಅರಸು ಬಳಿಕ ಪ್ರಚಾರ ಮಾಡದೆ ವಂಚಿಸಿರುತ್ತಾರೆ. ಹಣ ಕೊಡದೇ ಇದ್ದರೆ ಅಪಪ್ರಚಾರ ಮಾಡುತ್ತೀವಿ ಅಂತ ಸಿನೆಮಾ ನಿರ್ದೇಶಕರ ಜೊತೆ ಹೇಳಿಕೆಯನ್ನು ನೀಡಿದ್ದು, ಮೊದಲು 23 ಲಕ್ಷಕ್ಕೆ ಮಾಡಿ ಕೊಡ್ತೀವಿ ಅಂತ ಹೇಳಿದ್ರು. ಆಮೇಲೆ ಅರ್ಜೆಂಟ್ ಅರ್ಜೆಂಟಾಗಿ ಬಂದು ಕಾಸಿಲ್ಲ ಅಂತ ಹಣ ಹಾಕಿಸಿಕೊಂಡಿದ್ರು.
ಸಿನೆಮಾ ಎಲ್ಲಾ ಮುಗಿದ ಮೇಲೆ ಲೆಕ್ಕ ಕೇಳಿದ್ವಿ ಎಲ್ಲಿ ಆದ್ರೂ ಸಿನೆಮಾ ಮುಗಿಯೋ ಮುಂಚೆನೇ ಸಿನೆಮಾ ಮೇಲೆ ನೆಗೆಟಿವ್ ಮಾಡಿದ್ರೆ ಅಂತ ಸುಮ್ಮನಿದ್ವಿ. ಹಾಗಾಗಿ ಅಷ್ಟೊಂದು ಹಣವನ್ನು ವಂಚಿಸಿದಕ್ಕಾಗಿ ಇದೀಗ ಪೋಲಿಸ್ ಮೊರೆ ಹೋಗಬೇಕಾಯಿತು ಎಂದು ತಮ್ಮ ಅಳಲನ್ನು ಪುಷ್ಪಾ ರವರು ಮಾಧ್ಯಮಗಳಲ್ಲಿ ಹೇಳಿಕೊಂಡಿರುತ್ತಾರೆ.
ಇದನ್ನೂ ಓದಿ :Actress Nayana: ಕಾಮಿಡಿ ಕಿಲಾಡಿಗಳು ನಟಿ ನಯನಾ ವಿರುದ್ಧ FIR ದಾಖಲು !
…..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/hqiJ72PldCg?si=XZWaH3m-eQSXIODa











