Actor Nayana: ಕಾಮಿಡಿ ಕಿಲಾಡಿ ಶೋ ಮೂಲಕ ಖ್ಯಾತಿ ಗಳಿಸಿದ ನಟಿ ನಯನಾ ವಿರುದ್ಧ ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಕಾಯ್ದೆ ಅಡಿ FIR ದೂರು ದಾಖಲಾಗಿದೆ.
ಇದನ್ನೂ ಓದಿ: ದೇಶದ ಮಹಿಳಾ ಶಕ್ತಿಯ ಚಿಹ್ನೆ ಇಂದಿರಾ ಗಾಂಧಿ..!
ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ನಟಿ ನಯನಾ ಮೇಲೆ ಕೇಸು ದಾಖಲಾಗಿದೆ. ಅಕ್ಟೋಬರ್ 29 ರಂದು ಮನಿಮಿತ್ರಾ ಕಂಪನಿಯ ಕಾರ್ಯಕ್ರಮದಲ್ಲಿಅವಹೇಳನಕಾರಿ ಮಾತನಾಡಿರುವ ಹಿನ್ನೆಲೆ ದಲಿತ ಸೇನೆ ಕಲಬುರಗಿ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ನೀಡಿದ ದೂರಿನಡಿ FIR ದಾಖಲಾಗಿದ್ದು, ದೌರ್ಜನ್ಯ ತಡೆ ಕಾಯ್ದೆ ಅನ್ವಯ ಕಠಿಣಕ್ರಮ ಜರುಗಿಸಬೇಕು ಎಂದು ಮಂಜುನಾಥ್ ಭಂಡಾರಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತ – ಕಡಬಾದ ಯುವತಿ ಮೃತ್ಯು
ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ನಯನಾ ಶೋಷಿತ ಸಮುದಾಯಕ್ಕೆ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿದ್ದಾರೆ. ನಟಿ ನಯನ ತಮ್ಮ ಕೊಳಕು ಬುದ್ದಿಯನ್ನು ಪ್ರದರ್ಶಿಸಿ ಜಾತಿಯತೆಯೇ ಮನಸ್ಥಿತಿಯನ್ನೂ ಬಹಿರಂಗ ಪಡಿಸಿದ್ದಾರೆ. ಇದು ಶೋಷಿತ ಸಮುದಾಯದ ಹೊಲೆಯ ಜಾತಿಗೆ ಅವಹೇಳನ ಮಾಡಿ ವಿಕೃತಿ ಮೆರೆದಿರುವುದಾಗಿದೆ. ಇಂತಹ ಮಾತುಗಳಿಂದ ಸಮಾಜದಲ್ಲಿರುವ ಶೋಷಿತ ವರ್ಗಕ್ಕೆ ಅತಿ ನೋವುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಸೆಟ್ಟೇರಿತು ಧ್ರುವ ಸರ್ಜಾ 7ನೇ ಸಿನಿಮಾ.. ಧ್ರುವಗೆ ರಚಿತಾ ರಾಮ್ ಜೋಡಿ!
ನಟಿ ನಯನಾ ನಾಗರಾಜ್ ಕನ್ನಡ ಕಿರುತೆರೆಯ ಜನಪ್ರಿಯ ನಟಿ. ‘ಗಿಣಿರಾಮ’ ಮತ್ತು ‘ಪಾಪ ಪಾಂಡು’ ಧಾರಾವಾಹಿಗಳಲ್ಲಿನ ತಮ್ಮ ಪಾತ್ರಗಳಿಂದ ಗುರುತಿಸಿಕೊಂಡಿದ್ದಾರೆ. ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿದ್ದಾರೆ. ನಂತರ ಧಾರಾವಾಹಿಗಳು ಮತ್ತು ಕೆಲವು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಇತ್ತೀಚೆಗೆ ಅವರು ವೃತ್ತಿಪರ ವಿವಾದವೊಂದರಿಂದಾಗಿ ಕನ್ನಡ ಕಿರುತೆರೆಯಿಂದ ಒಂದು ವರ್ಷದ ಮಟ್ಟಿಗೆ ಬ್ಯಾನ್ ಆಗಿದ್ದರು ಎಂಬ ವಿಷಯವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.ಇದೀಗ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣವೂ ದಾಖಲಾಗಿದೆ. ಇದೀಗ ಈ ಪ್ರಕರಣ ಸದ್ದು ಮಾಡುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ರಕ್ಷಿತಾನನ್ನು ನೇರವಾಗಿ ನಾಮಿನೇಟ್ ಮಾಡಿದ ರಘು..!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











