Nandhini Ghee : ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ಇದೀಗ ನಂದಿನಿ ತುಪ್ಪಕ್ಕೆ ಬೇಡಿಕೆಯನ್ನಿಟ್ಟಿದ್ದು, ಆಂಧ್ರಪ್ರದೇಶದ ತಿರುಪತಿಯಲ್ಲಿ ವಿತರಿಸುವ ಲಡ್ಡುವಿಗೆ ನಂದಿನಿ ತುಪ್ಪವನ್ನು ಬಳಕೆ ಮಾಡುವುದಾಗಿ ವರದಿಯಾಗಿದೆ. ಅದೆಷ್ಟೋ ಬಾರಿ ಈ ತಿರುಪತಿ ತಿಮ್ಮಪ್ಪ ದೇವರ ಪ್ರಸಾದವಾಗಿ ನೀಡುತ್ತಿದ್ದ ಲಡ್ಡುವಿಗೆ ಕಲಬೆರಕೆ ಹಾಕಲಾಗುತ್ತಿತ್ತು. ಹಿಂದಿನ ಸರ್ಕಾರವಿರುವ ಸಂದರ್ಭದಲ್ಲಿ ವಿವಾದಕ್ಕೆ ಗುರಿಯಾಗಿದ್ದ ಈ ಲಡ್ಡು ತಯಾರಿಕಾ ವಿಧಾನಕ್ಕೆ ಇದೀಗ ಪೂರ್ಣವಿರಾಮವನ್ನಿಟ್ಟು, ಹೊಸದಾಗಿ ಈ ಬಾರಿ ತಯಾರಾಗುವ ಲಡ್ಡುವಿಗೆ ನಂದಿನಿ ಬ್ರ್ಯಾಂಡ್ ನ್ನು ಇಟ್ಟುಕೊಂಡೇ ಇದರ ಉತ್ತಮ, ಪರಿಶುದ್ಧ ತುಪ್ಪವನ್ನೇ ಉಪಯೋಗಿಸಲಾಗುವುದು ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾಹಿತಿ ನೀಡಿದ್ದಾರೆ.
ತಿರುಪತಿ ಲಡ್ಡು ವಿವಾದದ ಬಳಿಕ ಕರ್ನಾಟಕದ ನಂದಿನಿ ತುಪ್ಪಕ್ಕೆ ಭಾರೀ ಬೇಡಿಕೆ ಹೆಚ್ಚಾಗಿದೆ. ಟಿಟಿಡಿ ಆಡಳಿತ ಮಂಡಳಿಯು ಕಳೆದ ಡಿಸೆಂಬರ್ನಲ್ಲೇ 4 ಸಾವಿರ ಮೆಟ್ರಿಕ್ ಟನ್ ನಂದಿನಿ ತುಪ್ಪವನ್ನು ಖರೀದಿಸಿತ್ತು. ಲಡ್ಡು ಪ್ರಸಾದದ ರುಚಿ ಬದಲಾದ ಬಗ್ಗೆ ಭಕ್ತರು ಅಸಮಾಧಾನ ಹೊರಹಾಕಿದ ನಂತರ ನಂದಿನಿ ತುಪ್ಪವನ್ನೇ ಲಡ್ಡುಗೆ ಬಳಸಲು ಟಿಟಿಡಿ ನಿರ್ಧರಿಸಿತ್ತು. ಹೀಗಾಗಿ ಆರಂಭದಲ್ಲಿ 350 ಮೆಟ್ರಿಕ್ ಟನ್ ತುಪ್ಪವನ್ನು ಕೆಎಂಎಫ್ ತಿರುಪತಿಗೆ ಪೂರೈಸಿತ್ತು. ಅಲ್ಲದೆ ಹೆಚ್ಚಿನ ಬೇಡಿಕೆ ಬಂದರೂ ನಾವು ಪೂರೈಸುತ್ತೇವೆ ಎಂದು ಭರವಸೆ ನೀಡಿತ್ತು.
ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ನಂದಿನಿ ಉತ್ಪನ್ನಗಳಿಗೆ ಸದ್ಯ ದೇಶದೆಲ್ಲೆಡೆ, ಅದರಲ್ಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಟಿಟಿಡಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ಪೂರೈಕೆ ಮಾಡುವಂತೆ ಕೇಳಿದೆ ಎಂದು ಸಚಿವ ಕೆ.ವೆಂಕಟೇಶ್ ಕೂಡ ಹೇಳಿದ್ದಾರೆ. ಈ ಹಿನ್ನೆಲೆ ಬೇಡಿಕೆಯನ್ನು ಪೂರೈಸಲು ತುಪ್ಪದ ಉತ್ಪಾದನೆಯನ್ನು ಸಹ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಈ ತಿಂಗಳ ಕೊನೆಯಲ್ಲಿ ಸಭೆ ಕೂಡ ಮಾಡಲಾಗುವುದು ಎಂದಿದ್ದಾರೆ. ಇದರಿಂದ ನಂದಿನಿ ತುಪ್ಪದ ಏರಿಕೆಯಾದ ಬೆಲೆಯ ಜೊತೆ ಬೇಡಿಕೆಯೂ ಅಷ್ಟೇ ಹೆಚ್ಚಿರುವುದು ಗಮನಾರ್ಹ.
ಇದನ್ನೂ ಓದಿ :Devotional : ಕುಂತಿ ದೇವಿಗೆ ವಿಶೇಷ ಪೂಜೆ : ತಲೆಮಾರುಗಳಿಂದ ಮುಂದುವರಿದ ಪ್ರಾರ್ಥನೆ
……….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vXhwD33EPDk?si=X_2dbBQ9nQskoiXO











