Belthangady: ತಾಲೂಕು ಉರುವಾಲು ಗ್ರಾಮದ ಕಾರಿಂಜ ಎಂಬಲ್ಲಿ ಶ್ರೀ ವನ ಶಾಸ್ತಾರ ವೀರಭದ್ರ ದೇವಸ್ಥಾನ ನಿರ್ಮಾಣಗೊಳ್ಳುತ್ತಿದೆ. ಇದರ ಮುಂದಿನ ಜೀರ್ಣೋದ್ದಾರ ಕಾರ್ಯಗಳು ನಡೆಯಲಿದ್ದು, ಶ್ರೀ ಕ್ಷೇತ್ರಕ್ಕೆ ಎರಡುವರೆ ಲಕ್ಷ ಮೌಲ್ಯದ ಗ್ರಾನೈಟ್ ನೀಡುವುದಾಗಿ ಕಿರಣ್ ಚಂದ್ರ ಪುಷ್ಪಗಿರಿ ಭರವಸೆ ನೀಡಿದರು.
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಮುಖರು, ಧಾರ್ಮಿಕ ಮುಖಂಡರು ಹಾಗೂ ವನಶಾಸ್ತಾರ ವೀರಭದ್ರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರಾಗಿರುವ ಕಿರಣ್ ಚಂದ್ರ ಪುಷ್ಪಗಿರಿ ಯವರ ನಿವಾಸಕ್ಕೆ ಭೇಟಿ ನೀಡಿ, ಜೀರ್ಣೋದ್ಧಾರದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ದೇವಸ್ಥಾನದ ಆವರಣಕ್ಕೆ ಎರಡುವರೆಲಕ್ಷ ಮೌಲ್ಯದ ಗ್ರಾನೈಟ್ ನೀಡುವ ಭರವಸೆಯನ್ನು ಕಿರಣ್ ಚಂದ್ರ ಪುಷ್ಪಗಿರಿ ನೀಡಿದ್ದಾರೆ.
ಇತ್ತೀಚಿಗೆ ಶ್ರೀ ಕ್ಷೇತ್ರದಲ್ಲಿ ಸಮಾಲೋಚನಾ ಸಭೆ ನಡೆದಿತ್ತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಧಾರ್ಮಿಕ ಮುಂದಾಳು ಕಿರಣ್ ಪುಷ್ಪಗಿರಿ,ಯೋಗೀಶ್ ಕಡ್ತಿಲ ಸುನಿಲ್ ಅನವು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ರು.
ಸ್ಥಳ ಪುರಾಣವೇನು?
ಹಿಂದೆ ಇಲ್ಲಿ ವೀರಭದ್ರ ದೈವಸ್ಥಾನವಿತ್ತು. ನಂತರದಲ್ಲಿ ಪ್ರಶ್ನಾಚಿಂತನೆಯಲ್ಲಿ ಶ್ರೀ ವನ ಶಾಸ್ತಾರ ವೀರಭದ್ರ ದೇವರ ಸಾನಿಧ್ಯವಿರುವುದು ಪತ್ತೆಯಾಯಿತು, ತಿಷಿಗಳ ಮಾರ್ಗದರ್ಶನದಂತೆ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು.ಕೆಲಸ ಕಾರ್ಯಗಳು ನಡೆಯುತ್ತಿದೆ.ಸಂಪೂರ್ಣ ಕಲ್ಲಿನಿಂದ ಈ ದೇವಸ್ಥಾನವನ್ನು ನಿರ್ಮಿಸಲಾಗ್ತಿದೆ.
ಇದನ್ನೂ ಓದಿ: Karinja:ಶ್ರೀ ವನ ಶಾಸ್ತಾರ ವೀರಭದ್ರ ದೇವಸ್ಥಾನ ಸಮಾಲೋಚನಾ ಸಭೆ
================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











