Kicha Sudeep: ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ನಡೆಸಿ ಕೊಡುವ ರೀತಿ ಜನರಿಗೆ ಬಹಳ ಲೈಕ್ ಆಗುತ್ತಿತ್ತು, ಆದ್ರೆ ಈಗೀಗ ಜನ ಕಿಚ್ಚನ ಕೋಪದ ರೀತಿ ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ, ಸುದೀಪ್ ವರ್ತನೆಯನ್ನು ಗಮನಿಸಿದ ಜನ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಕ್ಷಿತಾ ಅವರಂತಹ ಸ್ಪರ್ಧಿಗಳ ಮೇಲೆ ಕಠಿಣವಾಗಿ ನಡೆದುಕೊಳ್ಳುವ ಸುದೀಪ್, ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರ ವಿಷಯದಲ್ಲಿ ಮೃದು ಧೋರಣೆ ತೋರುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ. ಕಿಚ್ಚ ಸುದೀಪ್ ಈ ಹಿಂದೆ ನಾನು ಈ ಬಾರಿ ಶೋ ನಡೆಸಿಕೊಡಲ್ಲ ಅಂತ ಮಾಧ್ಯಮಗಳ ಜೊತೆ ಹೇಳಿಕೊಂಡಿದ್ದರು, ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದರು. ಮುಂದಿನ ನಾಲ್ಕು ವರ್ಷ ಬಿಗ್ಬಾಸ್ ಜೊತೆ ಒಪ್ಪಂದ ಮಾಡಿಕೊಂಡು ಅಭಿಮಾನಿಗಳನ್ನು ಫುಲ್ ಖುಷ್ ನೀಡಿದ್ದರು. ಈ ಸೀಸನ್ ನಲ್ಲಂತೂ ಹೊಸ ಲುಕ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ಧಾರೆ.
ರಕ್ಷಿತಾ ಮೇಲೆ ಕೋಪಕೊಂಡ ಕಿಚ್ಚ.. ಅಶ್ವಿನಿ ಜಾಹ್ನವಿ ಮೇಲೆ ಸಾಫ್ಟ್ ಕಾರ್ನರ್ ..?
ಇದೀಗ, ಕಿಚ್ಚ ಸುದೀಪ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗುತ್ತಿದ್ದು, ಈ ಬಾರಿ ನಿಮ್ಮ ನಡವಳಿಗೆ ನಮಗೆ ಇಷ್ಟವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಾನು ನಿಮ್ಮ ದೊಡ್ಡ ಅಭಿಮಾನಿ, ಬಿಗ್ಬಾಸ್ ನಡೆಸಿಕೊಡುವ ರೀತಿಗೂ ಸಾಟಿಯಿಲ್ಲ. ಆದರೆ ಈ ಸಲ ಮಾತ್ರ ನೀವು… ಎನ್ನುತ್ತಲೇ ನೆಟ್ಟಿಗರು ಬೇಸರವನ್ನು ಹೊರಹಾಕುತ್ತಿದ್ದಾರೆ. ಇದಕ್ಕೆ ಕಾರಣ, ಸುದೀಪ್ ಅವರು ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬ ಮಾತುಗಳು.
ಗಿಲ್ಲಿ ನಟ, ರಕ್ಷಿತಾ ಅವರಂಥ ಬಡವರ ಮೇಲೆ ನೀವು ಕೋಪ ತೋರಿಸುತ್ತೀರಿ, ಎಷ್ಟೋ ಸಲ ರಕ್ಷಿತಾಳ ತಪ್ಪೇ ಇರಲ್ಲ, ಮೊನ್ನೆ ಕೂಡ ನೀವು ಆಕೆಯ ವಿರುದ್ಧ ತುಂಬಾ ಅಸಹನೀಯವಾಗಿ ನಡೆದುಕೊಂಡ್ರಿ. ಆದರೆ ಸದಾ ಜಗಳವಾಡ್ತಿರೋ ಅಶ್ವಿನಿ ಗೌಡ ಆಗಲೀ, ಜಾಹ್ನವಿ ಬಗ್ಗೆಯಾಗಲಿ ಸಾಫ್ಟ್ ಕಾರ್ನರ್ ಆಗಿರುತ್ತೀರಿ ಎಂದು ಹೇಳುತ್ತಿದ್ದಾರೆ.
ಪ್ರಸಾರವದ ಎಪಿಸೋಡ್ ನಲ್ಲಿ ಸುದೀಪ್, ರಕ್ಷಿತಾರನ್ನು ಕುರಿತು ನಿಮ್ಮ ಸ್ವಂತ ಟೀಮ್ ಅನ್ನು ನೀವ್ಯಾಕೆ ಇರಿಟೇಟ್ ಮಾಡಿದ್ದು ಎಂದು ಸುದೀಪ್ ಪ್ರಶ್ನಿಸಿದ್ದರು. ಅದಕ್ಕೆ ರಕ್ಷಿತಾ, ನಿಮಗೆ ಯಾವಾಗ ಅನ್ನಿಸ್ತು ನಾನು ಇರಿಟೇಟ್ ಮಾಡಿದ್ದೇನೆ ಎಂದು ಮರು ಪ್ರಶ್ನೆ ಹಾಕಿದ್ದರು. ಇದರಿಂದ ಸುದೀಪ್ ಕೆಂಡವಾಗಿದ್ದರು. ಅದೇ ಈಗ ನನ್ನ ಪಿತ್ತ ನೆತ್ತಿಗೇರಿತಲ್ಲ, ಅದಕ್ಕಿಂತ ಸ್ವಲ್ಪ ಮೊದಲು ಪಿತ್ತ ನೆತ್ತಿಗೇರಿದ್ದು ಎಂದರು. ರಕ್ಷಿತಾ, ನಾನು ಎರಡು ಸಲ ನಗ್ತೀನಮ್ಮ. ಒಂದು ತುಂಬಾ ನಗು ಬಂದಾಗ, ಇನ್ನೊಂದು ಏರಿದಾಗ ಎಂದು ನಗುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಏನೇನು ಕಾಮೆಂಟ್ಸ್ ಬರುತ್ತಿದೆ..?
ಹೀಗಾಗಿ ಇಂತಹ ವರ್ತನೆಯಿಂದ ನೆಟ್ಟಿಗರು, ರಕ್ಷಿತಾ ತಪ್ಪೇ ಇರಲಿಲ್ಲ. ಆಕೆ ನಿಮಗೆ ಯಾವಾಗ ಅನ್ನಿಸ್ತು ಎಂದು ಕೇಳಿದಾಗ ಪಿತ್ತ ನೆತ್ತಿಗೇರಿತು ಎನ್ನುತ್ತೀರಿ. ಆದರೆ ಇದೇ ಪಿತ್ತವನ್ನು ಅಶ್ವಿನಿ ಗೌಡ ಮತ್ತು ಜಾಹ್ನವಿ ವಿರುದ್ಧ ಯಾಕೆ ನೆತ್ತಿಗೇರಿಸಿಕೊಳ್ಳುವುದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಒಬ್ಬರು ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯನಾ ಎಂದು ಪ್ರಶ್ನಿಸಿದ್ರೆ, ಇದು ಕಿಚ್ಚನ ಪಂಚಾಯಿತಿ ಅಲ್ಲ ಶ್ರೀಮಂತರ ಪಂಚಾಯಿತಿ ರೀತಿ ಕಾಣಿಸುತ್ತಿದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಶ್ವಿನಿ ಮತ್ತು ಜಾನ್ವಿ ಬಗ್ಗೆ ಮಾತಾಡೋವಾಗು ಇದೆ ಸಿಟ್ಟು ಇರಬೇಕಲ್ಲ ಸಾರ್… ಯಾಕೆ ಅಂದರೆ ನೋಡೋ ಜನಕ್ಕೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ತರ ಕಾಣಬಾರದು ಅಲ್ವಾ ಸಾರ್ ಎಂದು ಒಬ್ಬರು ಪ್ರಶ್ನಿಸಿದ್ದಾರೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











