ಬ್ರೇಕಿಂಗ್ ನ್ಯೂಸ್
ರಾಜಕೀಯ

CM Siddaramaiah ಬದಲಾವಣೆ?ಕಾಂಗ್ರೆಸ್ ನಲ್ಲಿ ದಿನಕ್ಕೊಂದು ಟ್ವಿಸ್ಟ್!

CM Siddaramaiah ಬದಲಾವಣೆ ಬಗ್ಗೆ ಕಾಂಗ್ರೆಸ್ ನಲ್ಲಿ ಚರ್ಚೆ ಜೋರಾಗ್ತಾನೆ ಇದೆ.ವಿಜಯದಶಮಿ ಮುಗಿದ ತಕ್ಷಣ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಕಸರತ್ತು ಶುರುವಾಗಿದೆ.ಹೇಗಾದ್ರೂ ಮಾಡಿ ಸಿಎಂ ಪಟ್ಟ ಅಲಂಕರಿಸ್ಬೇಕು ಅನ್ನೋ ಇರಾದೆಯಲ್ಲಿರೋ ಡಿ.ಕೆ ಶಿವಕುಮಾರ್ ತಮ್ಮ ಅಪ್ತರ ಮೂಲಕ ಚಾರ್ಜ್ ಶುರುಮಾಡಿದ್ದಾರೆ.ಒಂದು ಕಡೆಯಿಂದ ಡಿಕೆ ಶಿವಕುಮಾರ್ ಗುಂಪಿನಲ್ಲಿರೋ ಶಾಸಕರು ಸದ್ಯದಲ್ಲೇ ಸಿಎಂ ಬದಲಾವಣೆ ಆಗ್ತಾರೆ ಅಂತಿದ್ದಾರೆ.ಆದ್ರೆ ಇದ್ಯಾವುದಕ್ಕೂ ಕ್ಯಾರೇ ಅನ್ನದ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ.ಐದು ವರ್ಷ ನಾನೇ ಸಿಎಂ ಆಗಿ ಇರ್ತೀನಿ ಎಂದು ಧೈರ್ಯವಾಗಿ ಹೇಳಿದ್ದಾರೆ.ಸಿಎಂ ಸ್ಟೇಟ್ ಮೆಂಟ್ ನಿಂದ ರೊಚ್ಚಿಗೆದ್ದಿರುವ ಡಿಕೆಶಿ ಅಪ್ತರು ಸಿಎಂ ಬದಲಾವಣೆ ಆಗಬೇಕು ಅನ್ನೋ ಹಠಕ್ಕೆ ಬಿದ್ದಂತೆ ಕಂಡು ಬರುತ್ತಿದೆ.ತೆರೆಮರೆಯಲ್ಲಿ ಸಿಎಂ ಗಾದಿಗಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಮಧ್ಯೆ ಸಮರ ಶುರುವಾಗಿದೆ.ಸೈಲೆಂಟ್ ಆಗಿರೋ ವಾರ್ ವಿಜಯದಶಮಿ ನಂತರದ ಬೆಳವಣಿಗೆ ಕಂಡಾಗ ಬಹಿರಂಗವಾಗೋ ಸಾಧ್ಯತೆ ಕಂಡುಬರ್ತಿದೆ.
ಸಿಎಂ ಸಿದ್ದರಾಮಯ್ಯ ಧೈರ್ಯವಾಗಿ ಐದು ವರ್ಷ ನಾನೇ ಸಿಎಂ ಎಂದು ಹೇಳಿರೋದು ಡಿಕೆಶಿ ಬಣಕ್ಕೆ ಬೆಂಕಿಬಿದ್ದಂತಾಗಿದೆ.ಹೀಗಾಗಿಯೇ ತೆರೆಮರೆಯಲ್ಲಿ ಹೇಗಾದ್ರೂ ಮಾಡಿ ಟ್ರಬಲ್ ಶೂಟರ್ ಸಿಎಂ ಮಾಡಲೇ ಬೇಕು ಎಂದು ಒಂದಷ್ಟು ಕಾಂಗ್ರೆಸ್ ಶಾಸಕರು ಜಿದ್ದಿಗೆ ಬಿದ್ದಿದ್ದಾರೆ.
ಸಿದ್ಧರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರಿಯೋದು ಕನ್ಪರ್ಮ್ ಆನ್ನೋ ಮಾತನ್ನು ಸಿಎಂ ಅಪ್ತರು ಕೂಡ ಹೇಳಿಕೊಂಡು ಬರುತ್ತಿದ್ದಾರೆ.ಕಾಂಗ್ರೆಸ್ ಪಕ್ಷದೊಳಗೆ ಸಿಎಂ ಬದಲಾವಣೆಯ ವಿಚಾರದ ಚರ್ಚೆಗಳು ಜೋರಾಗಿ ನಡೀತಾನೆ ಇರೋದು ವಿರೋಧ ಪಕ್ಷದವರಿಗೆ ಒಳ್ಳೆ ಆಹಾರ ಸಿಕ್ಕಂತಾಗಿದೆ.
ಡಿಕೆಶಿ ಮತ್ತು ಸಿದ್ದರಾಮಯ್ಯ ಅಪ್ತರು ರಾಜ್ಯದ ಸಿಎಂ ಬದಲಾವಣೆಯ ಬಗ್ಗೆ ಮಾತಾಡ್ತಿರೋದು,ಕಾಂಗ್ರೆಸ್ ನಲ್ಲಿ ಏನೋ ನಡೀತಿದೆ ಅನ್ನೋ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
2023ರ ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು.ನಂತರದಲ್ಲಿ ಸಿಎಂ ಗೊಂದಲ ಇರಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯೆ ಅಧಿಕಾರ ಹಂಚಿಕೆಯ ಮಾತುಕತೆ ನಡೆದಿದೆ ಅನ್ನೋ ಮಾತುಗಳು ಸರ್ಕಾರ ರಚನೆಯಾದಂದಿನಿಂದಾನೂ ಕೇಳಿ ಬರ್ತಿತ್ತು.ಎರಡುವರೆ ಪರ್ಷ ನಂತರದಲ್ಲಿ ಡಿಕೆಶಿ ಶಿವಕುಮಾರ್ ಸಿಎಂ ಆಗ್ತಾರೆ ಅಂತಾನೆ ಕಾಂಗ್ರೆಸ್ ನಾಯಕರು ಹೇಳಿ ಬರ್ತಿದ್ರು ಆದ್ರೆ ಈಗ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎಂದು ಘಂಟಾಘೋಷವಾಗಿ ಹೇಳಿದ್ದು ಡಿಕೆಶಿ ಅಪ್ತರಿಗೆ ಸಿಟ್ಟು ತರ್ಸಿದೆ.ಈ ಬಗ್ಗೆ ಡಿಕೆಶಿ ಯಾವುದೇ ನಾಯಕರು ಸಿಎಂ ಬದಲಾವಣೆ ಕುರಿತಂತೆ ಸಾರ್ವಜನಿಕವಾಗಿ ಸ್ಟೇಟ್ ಮೆಂಟ್ ಕೊಡ್ಬಾರ್ದು ಅಂತಾ ತಮ್ಮ ಅಪ್ತರಿಗೆ ಹೇಳಿದ್ದಾರೆ.ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತಾಡಿದ ನಾಯಕರಿಗೆ ನೋಟೀಸ್ ಜಾರಿಗೊಳಿಸಲಾಗಿದೆ.ಮುಖ್ಯಮಂತ್ರಿ ಬದಲಾವಣೆಯ ತೀರ್ಮಾನ ಹೈಕಮಾಂಡ್ ಮಾಡುತ್ತೆ ಅನ್ನೋ ಶಾಸಕರು ಸೈಲೆಂಟಾಗಿದ್ದಾರೆ.ಸದ್ಯದ ಬೆಳವಣಿಗೆ ನೋಡ್ತಿದ್ರೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಸಿದ್ದರಾಮಯ್ಯ ಡಿಕೆಶಿ ಬಣದ ಗುದ್ದಾಟಕ್ಕೆ ಕಾರಣವಾಗ್ತಿರೋದು ಕಂಡು ಬರ್ತಿದೆ.ಇನ್ನೂ ಸಿಎಂ ಬದಲಾವಣೆ ಕುರಿತಂತೆ ಡಿಕೆ ಶಿವಕುಮಾರ್ ಜಾಣ ನಡೆಯನ್ನು ಅನುಸರಿಸುತ್ತಿದ್ದಾರೆ.ಹೈಕಮಾಂಡ್ ಹೇಳಿದಂತೆ ಎಲ್ಲಾ ನಡೆಯುತ್ತೆ.ನಾವೆಲ್ಲಾ ಕಾಂಗ್ರೆಸ್ ನಲ್ಲಿ ಒಗ್ಗಟ್ಟಾಗಿದ್ದೇವೆ.ಯಾರು ಕೂಡ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ,ಯಾವುದೇ ಸಿಎಂ ಕುರ್ಚಿಯ ಕುರಿತಂತ ಸ್ಟೇಟ್ ಮೆಂಟ್ ನೀಡುವ ನಾಯಕರಿಗೆ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಕ್ರಮ ಜರುಗಿಸುತ್ತೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲಾ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್ ನಿಂದ ಕೂಡ ಸಿಎಂ ಬದಲಾವಣೆ ಕುರಿತಂತೆ ಯಾವುದೇ ನಿರ್ಧಾರ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ.ಕಾಂಗ್ರೆಸ್ ನಿರ್ಧಾರಗಳ ವಿಷಯ ಏನೇ ಇದ್ದರೂ ಡಿಕೆಶಿವಕುಮಾರ್ ಆಪ್ತರು ಹೇಗಾದರೂ ಮಾಡಿ ತಮ್ಮ ನಾಯಕನನ್ನು ಸಿಎಂ ಮಾಡಲೇಬೇಕು ಎಂಬ ನಿರ್ಧಾರಕ್ಕೆ ಬಂದು ಕೆಲಸವನ್ನು ಮುಂದುವರಿಸುತ್ತಿದ್ದಾರೆ.ಆದ್ರೆ ಕುರ್ಚಿಗೆ ಅಂಟಿಕೊಂಡಿರುವ ಸಿದ್ದರಾಮಯ್ಯ ಪರವಾಗಿರುವ ಶಾಸಕರ ದೊಡ್ಡ ತಂಡವೇ ಇದೆ.ಹೀಗಿರುವಾಗ ಕರ್ನಾಟಕ ಸಿಎಂ ಚೇಂಜ್ ಕುರಿತಾದ ವಿಚಾರ ಮುನ್ನಲೆಗೆ ಬರ್ತಿರೋದ್ರ ಹಿಂದೆ ಕಾಂಗ್ರೆಸ್ ನಾಯಕರೇ ಇದ್ದಾರೆ ಅನ್ನೋದಂತೂ ಸತ್ಯ  https://en.wikipedia.org/wiki/Siddaramaiah

ಇದನ್ನೂ ಓದಿ:

PM-KISAN : ಪಿಎಂ ಕಿಸಾನ್‌ ಯೋಜನೆಗೆ ಅರ್ಜಿ ಸಲ್ಲಿಕೆ : ಇಲ್ಲಿದೆ ಸುಲಭ ವಿಧಾನ

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 16

You cannot copy content of this page