Madikeri Crime: ಹರಿಯಾಣ ಮೂಲದ ಮಹಿಳೆಯ ಶವ ಕೊಡಗಿನ ಗಡಿಭಾಗದ ಚಕ್ ಪೋಸ್ಟ್ ಬಳಿ ಕಾರಿನಲ್ಲಿ ಪತ್ತೆ ಶವ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ದಟ್ಟ ಅರಣ್ಯ ಪ್ರದೇಶವಾದ ಕೊಡಗು ಜಿಲ್ಲೆಯ ಗಡಿಭಾಗಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಅರಣ್ಯ ಪ್ರದೇಶಕ್ಕೆ ಒಳ ಬರುವ ವಾಹನಗಳನ್ನು ತಪಾಸಣೆ ಮಾಡುವುದು ವಾಡಿಕೆ ಅದರಂತೆ ನಿನ್ನೆ ರಾತ್ರಿಯ ರಾತ್ರಿ ಪಾಳಯದಲ್ಲಿ ಇದ್ದ ಅರಣ್ಯ ಸಿಬ್ಬಂದಿಗಳು ಅನುಮಾನಸ್ಪವಾಗಿ ಓಡಾಟ ನಡೆಸುತ್ತಿದ್ದ ಕಾರನ್ನು ತಡೆದು ಪರಿಶೀಲನೆ ಮಾಡುವ ಸಂದರ್ಭದಲ್ಲಿ ಮಹಿಳೆಯೋರ್ವಳು ನಿಗೂಢವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲೆ ಅಂದರೆ ಸಾಕು ಸಾದ ಹಚ್ಚಹಸಿರಿನಿಂದ ಕೂಡಿರುವ ಪ್ರದೇಶ .ಇಲ್ಲಿರುವ ದಟ್ಟ ಅರಣ್ಯ ಪ್ರದೇಶಗಳಲ್ಲಿ ಶವಗಳನ್ನು ತಂದು ಹಾಕಿದ್ರೆ ಯಾರಿಗೂ ಅನುಮಾನ ಬರೋಲ್ಲ ಅನ್ನೋ ರೀತಿಯಲ್ಲಿ ಕೆಲವರು ಯೋಚನೆ ಮಾಡಿ ಶವವನ್ನು ದಟ್ಟ ಅರಣ್ಯ ಪ್ರದೇಶಕ್ಕೆ ತಂದು ಹಾಕುವ ಪ್ಲಾನ್ ಮಾಡುತ್ತಾರೆ. ಅಂತಹದೇ ಒಂದು ಪ್ಲಾನ್ ಮಾಡಿಕೊಂಡು ಮೂವರು ಆರೋಪಿಗಳು ಮಹಿಳೆಯೋರ್ವಳ ಮೃತದೇಹವನ್ನು ಸಾಗಟ ಮಾಡುವ ಸಂದರ್ಭದಲ್ಲಿ ಅರಣ್ಯ ಪ್ರದೇಶ ಚಕ್ ಪೋಸ್ಟ್ ಬಳಿ ಸಿಕ್ಕಿ ಹಾಕಿಕೊಂಡ ಘಟನೆ ಕೊಡಗು ಹಾಗೂ ಪಿರಿಯಾಪಟ್ಟಣ ಗಡಿ ಪ್ರದೇಶದಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಲಿಂಗಪುರ ಎಂಬ ಅರಣ್ಯ ಪ್ರದೇಶ ಚಕ್ ಪೋಸ್ಟ್ ನ ಬಳಿ ನಿನ್ನೆ ರಾತ್ರಿ ಸುಮಾರು ಎರಡು ಗಂಟೆ ಆಸುಪಾಸಿನಲ್ಲಿ ಸಮಯದಲ್ಲಿ ಆಲ್ಟೋ 800 ಕಾರೊಂದು ಚಕ್ ಪೋಸ್ಟ್ ಬಳಿ ಅನುಮಾನಾಸ್ಪದವಾಗಿ ಓಡಾಟ ನಡೆಸಿದೆ. ಚೆಕ್ ಪೋಸ್ಟ್ ಸಿಬ್ಬಂದಿಗಳನ್ನು ಕಂಡು ಬೇರೆ ಕಡೆಗೆ ಕಾರನ್ನು ತಿರುಗಿಸಿದ್ದಾರೆ. ಅನುಮಾನಗೊಂಡ ರಾತ್ರಿ ಪಾಳಯದ ಸಿಬ್ಬಂದಿಗಳು ಕಾರನ್ನು ತಡೆದು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಮಹಿಳೆಯೋರ್ವಳು ಅನುಮಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.ತಕ್ಷಣವೇ ಅರಣ್ಯ ಸಿಬ್ಬಂದಿಗಳು ಕೊಡಗಿನ ಸಿದ್ದಾಪುರ ಪೊಲೀಸರಿಗೆ ಚಕ್ ಪೋಸ್ಟ್ ಬಳಿ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.ಈ ಹಿನ್ನಲೆಯಲ್ಲಿ ಸಿದ್ದಾಪುರ ಪೊಲೀಸರು ರಾತ್ರಿಯೇ ಘಟನಾ ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿ ಕಾರನ್ನು ಹಾಗೂ ಮೂವರು ಅರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ..?
ಮೂಲತಃ ಹರಿಯಾಣ ರಾಜ್ಯದ ನಿವಾಸಿಗಳಾದ ರಾಕೇಶ್ ಕುಮಾರ್ ಮತ್ತು ಆತನ ಪತ್ನಿ ನಾನ್ಕಿದೇವಿ(44) ಇವರಿಬ್ಬರೂ ಮತ್ತು ಇವರೊಂದಿಗೆ ಇನ್ನಿಬ್ಬರು ಸೇರಿ ಮೈಸೂರಿನ ಮೇಟಗಳ್ಳಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ನಾನ್ಕಿ ದೇವಿಯು ಶುಕ್ರವಾರದಂದು ರಾತ್ರಿ ಯಾರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಮನೆ ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ. ರಾತ್ರಿ ಕೆಲಸ ಬಿಟ್ಟು ಮನೆಗೆ ಬಂದು ನೋಡಿದಾಗ ನಾನಕ್ಕಿದೇವಿ ಬಾಗಿಲನ್ನು ಮುಚ್ಚಿ ಇರುವುದು ಕಂಡು ಬಂದಿದೆ ಎಷ್ಟೇ ಕರೆದರೂ ನಾನ್ಕಿದೇವಿ ಹೊರಬರದ ಕಾರಣ ಬಾಗಿಲನ್ನು ತೆಗೆದು ಒಳ ನುಗ್ಗಿದ ಆಕೆಯ ಗಂಡ ರಾಕೇಶ್ ಕುಮಾರ್ ಮತ್ತು ಇತರರು ಕೊಣೆಯಲ್ಲಿ ನೇಣು ಹಾಕಿಕೊಂಡು ಮಹಿಳೆಯನ್ನು ಕೂಡಲೆ ಆಸ್ಪತ್ರೆಗೆ ತರುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾಳೆ.
ಇದರಿಂದ ಗಾಬರಿಗೊಂಡ ಗಂಡ ಮತ್ತು ಅತನ ಸ್ನೇಹಿತರಾದ ವಿಕಾಸ್ (32) ಸತ್ ವೀರ್ (32) ಸೇರಿ ಮಹಿಳೆಯ ಮೃತದೇಹವನ್ನು ಮೈಸೂರಿನಿಂದ ಕಾರಿನಲ್ಲಿ ತಂದು ಪಿರಿಯಾಪಟ್ಟಣ ಮಾರ್ಗವಾಗಿ ಕೊಡಗಿನ ಮಾಲ್ದಾರೆ ಸಮೀಪದ ಲಿಂಗಪುರ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬರುತ್ತಿರುವ ವೇಳೆ ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುತ್ತಿದ್ದ ಅರಣ್ಯ ಸಿಬ್ಬಂದಿಗಳು ಕಾರನ್ನು ಸಂಶಯದಿಂದ ತಪಾಸಣೆ ಮಾಡಿದಾಗ ಕಾರಿನಲ್ಲಿ ಮಹಿಳೆಯ ಚಲನವಲನಗಳು ಕಂಡು ಬರದೇ ಇರುವುದು ಗೋಚರಿಸಿದು ಮಹಿಳೆ ಮೃತಪಟ್ಟರಿವುದು ಖಾತ್ರಿಯಾಗಿದೆ.ಮೂಲಗಳ ಪ್ರಕಾರ ನಾನ್ಕಿದೇವಿ ಮೂರ್ಛೆ ರೋಗದಿಂದ ಬಳಲುತ್ತಿದ್ರು ಹಲವಾರು ಬಾರಿ ಮೈಸೂರಿನ ಅಸ್ಪತ್ರೆಗೆ ಚಿಕಿತ್ಸೆಗೆ ಹೋಗುತ್ತಿದ್ರು ಎನ್ನಲಾಗಿದೆ. ಅದರೆ ಏಕಾಏಕಿ ಮನೆಯಲ್ಲಿ ಯಾರು ಇಲ್ಲದೇ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಅದರೆ ಆಕೆಯನ್ನು ಅಸ್ಪತ್ರೆ ಸಾಗಿಸಬೇಕಾದ ಪತಿ ಹಾಗೂ ಸ್ನೇಹಿತರು ಕೊಡಗಿನ ಅರಣ್ಯ ಪ್ರದೇಶಕ್ಕೆ ತಂದು ಶವವನ್ನು ಎಸೆಯಲು ಮುಂದಾಗಿದ್ರು ಅನ್ನೋ ಅನುಮಾನ ಸ್ಥಳೀಯರಿಗೆ ಕಾಡತೋಡಗಿದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











