Madikeri Protest: ದೆಹಲಿ ಬಾಂಬ್ ಬ್ಲಾಸ್ಟ್ ವಿರೋಧಿಸಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕೊಡಗಿನ ಮಡಿಕೇರಿಯಲ್ಲಿ ಹಿಂದೂ ಜಾಗರಣ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಣೆ ಮಾಡಿರೋದು ಸದ್ಯ ಹೊಸ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಲವ್ OTP ಸಿನಿಮಾ ಫ್ಲಾಪ್ ಆಯ್ತು ಅಂತ ಕಣ್ಣೀರಿಟ್ಟ ನಟ ಅನೀಶ್!
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪ್ರತಿಭಟನೆ ನಡೆಸಲು ಅನುಮತಿ ನೀಡುವಂತೆ ಹಿಂದೂ ಜಾಗರಣ ವೇದಿಕೆ ಮಡಿಕೇರಿ ನಗರ ಠಾಣೆಗೆ ಮನವಿ ಪತ್ರ ನೀಡಿತ್ತು. ಸಾಮಾನ್ಯವಾಗಿ ಅನುಮತಿ ಸಿಗುತ್ತದೆ ಅನ್ನೋ ಭಾವನೆಯಲ್ಲೇ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಬೆಳಗ್ಗೆ ಪ್ರತಿಭಟನೆ ನಡೆಸಲು ತಿಮ್ಮಯ್ಯ ವೃತ್ತಕ್ಕೂ ಬಂದರು. ಆದ್ರೆ ಆಗ ಶುರುವಾಗಿದ್ದೇ ದೊಡ್ಡ ಹೈಡ್ರಾಮ.. ಪ್ರತಿಭಟನೆಗೆ ಬಂದ ಕಾರ್ಯಕರ್ತರನ್ನು ತಡೆದ ಮಡಿಕೇರಿ ನಗರ ಪೊಲೀಸರು, ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ ಅನ್ನೋ ಆದೇಶವನ್ನು ಮೈಕ್ ಮೂಲಕ ಓದಿದರು.
ಇದನ್ನೂ ಓದಿ: ನಗ-ನಗದು ಕಳವು – ಇಬ್ಬರ ಬಂಧನ
ಇದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯ್ತು. ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವಿನ ಮಾತಿನ ಚಕಮಕಿಗೂ ಸಾಕ್ಷಿಯಾಯ್ತು. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ಮೂಲಕ ಪ್ರತಿಭಟಿಸುವ ಹಕ್ಕನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದುವರೆಗೂ ಇದೇ ತಿಮ್ಮಯ್ಯ ವೃತ್ತ ಅದೆಷ್ಟೋ ಪ್ರತಿಭಟನಗೆ ಸಾಕ್ಷಿಯಾಗಿದೆ. ಅಂತಹ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಲು ಪೊಲೀಸರು ಕೊಟ್ಟ ಕಾರಣ ನಿಜಕ್ಕೂ ಶಾಕಿಂಗ್ ಆಗಿತ್ತು. ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತೆ, ವೀಕೆಂಡ್ ಟ್ರಾಫಿಕ್ ಜಾಮ್ ಆಗುತ್ತೆ. ಹೀಗಾಗಿ ವೃತ್ತದಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ ಅಂತ ಮಡಿಕೇರಿ ನಗರ ಪೊಲೀಸರು ಪ್ರತಿಭಟನೆಗೆ ತಡೆಯೊಡ್ಡಿದರು. ಅನುಮತಿ ನಿರಾಕರಣೆ ನಡುವೆಯೂ ಪ್ರತಿಭಟನೆ ನಡೆಸಿದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಮತಾಂಧ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ರೀಲ್ಸ್ ಮಾಡುತ್ತಿದ್ದ ಮೈಥಿಲಿ ಠಾಕೂರ್ 25 ವರ್ಷಕ್ಕೆ ಶಾಸಕಿ ಆಗಿದ್ದೇಗೆ…?
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











