Mulleria: ಕೆಲಸ ವೇಳೆ ವಿದ್ಯುತ್ ಕಂಬ ತುಂಡಾಗಿ ಬಿದ್ದು KSEB ಗುತ್ತಿಗೆ ನೌಕರ ಮೃತಪಟ್ಟ ಘಟನೆ ನಡೆದಿದೆ. ಕೆಎಸ್‌ಇಬಿ ಮುಳ್ಳೇರಿಯ ಇಲೆಕ್ಟ್ರಿಕಲ್ ಸೆಕ್ಷನ್ ನೌಕರ ಕುಂಟಾರು ಹುಣಸೆಯಡ್ಕ ನಿವಾಸಿ ಎಚ್.ಯತೀಶ (41) ಮೃತಪಟ್ಟ ದುರ್ದೈವಿ.
ನ. 13ರ ಮಧ್ಯಾಹ್ನ 1.30ರ ವೇಳೆ ಕಾರಡ್ಕ ಬಳಿಯ ಮೂಡಾಂಕುಳ ಎಂಬಲ್ಲಿ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಕಂಬ ನಿಲ್ಲಿಸಿದ ಬಳಿಕ ಮತ್ತೊಂದು ಕಂಬದಿಂದ ತಂತಿ ಎಳೆದು ಕಟ್ಟುತ್ತಿದ್ದರು. ಈ ವೇಳೆ ಯತೀಶ ಕಂಬದ ಮೇಲಿದ್ದರು. ತಂತಿ ಎಳೆದು ಕಟ್ಟುತ್ತಿದ್ದಂತೆ ವಿದ್ಯುತ್ ಕಂಬ ಮುರಿದು ಬಿದ್ದು, ಯತೀಶ ಗಂಭೀರ ಗಾಯಗೊಂಡಿದ್ದರು.
ಗಂಭೀರ ಗಾಯಗೊಂಡ ಯತೀಶ್ ಅವರನ್ನು ತಕ್ಷಣವೇ ಚೆರ್ಕಳದ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ದಿ। ಸಂಜೀವ ರಾವ್- ಕೆ. ಲಲಿತ ದಂಪತಿಯ ಪುತ್ರ. ಇವರು ಪತ್ನಿ ನವನೀತ, 4 ತಿಂಗಳ ಪ್ರಾಯದ ಪುತ್ರಿ ಕುಟುಂಬಸ್ಥರನ್ನು ಅಗಲಿದ್ದಾರೆ.
ಇದನ್ನೂ ಓದಿ: Belthangady: SIT ವಿರುದ್ಧವೇ ದೂರು ನೀಡಿದ ಜಯಂತ್ – ದೂರಿನಲ್ಲೇನಿದೆ?
===============
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











