ಬ್ರೇಕಿಂಗ್ ನ್ಯೂಸ್
ಕರ್ನಾಟಕ

Life: ಲೈಫಲ್ಲಿ ಒಂಟಿಯಾಗಿದ್ದೀನಿ ಅಂತ ಅಂದುಕೊಂಡಿದ್ದೀರಾ..? ಹಾಗಾದ್ರೆ ಚಿಂತೆ ಬಿಡಿ..ಈ ಸ್ಟೋರಿ ನಿಮಗಾಗಿ!

Life: ಪ್ರತಿಯೊಬ್ಬರ ಜೀವನಶೈಲಿಯೂ ಕೂಡ ಬೇರೆ ಬೇರೆ ರೀತಿಯಾಗಿ ಇರುತ್ತದೆ. ಅದರಲ್ಲೂ ಕೆಲವೊಬ್ಬರು ಜೀವನದಲ್ಲಿ ಬಂದಂತಹ ಕಷ್ಟಗಳಿಗೆ ಸೋತು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಕೊನೆಗೆ ಒಬ್ಬಂಟಿ ಅನುಭವ ಮಾಡುತ್ತಾರೆ. ಹಾಗಾದರೆ, ಅಂತವರು ತಮ್ಮ ಜೀವನವನ್ನು ಹೇಗೆ ಸುಂದರಗೊಳಿಸಬಹುದು ನೋಡೋಣ ಈ ಸ್ಟೋರಿಯಲ್ಲಿ…

ಜೀವನ ಅನ್ನೋದು ಬರೀ ನಿಂತ ನೀರಲ್ಲ. ಕಷ್ಟಗಳು ಸುಖಗಳು ಬಂದೇ ಬರುತ್ತೆ. ಇಂತಹ ಸಂದರ್ಭದಲ್ಲಿ ಹಿಗ್ಗದೆ ಹಾಗೂ ಕುಗ್ಗದೇ ತಮ್ಮ ಜೀವನವನ್ನು ಬ್ಯೂಟಿಫುಲ್ ಆಗಿ ನಡೆಸಿಕೊಂಡು ಹೋಗುವುದು ಮನುಷ್ಯರಾದ ನಮ್ಮ ಕರ್ತವ್ಯ. ಇಂತಹ ಅನೇಕ ನೋವುಗಳಿಗೆ ಒಂದು ಕ್ಷಣ ನೀವು ಸೈಲೆಂಟ್ ಆಗಿ ಒಬ್ಬಂಟಿತನ ಅನುಭವಿಸುತ್ತಿದ್ದರೆ, ನಿಮ್ಮ ಜೀವನವು ಕೆಟ್ಟು ಹೋದ ಗಾಡಿಯಂತೆ ಆಗುತ್ತದೆ. ಹಾಗಾಗಿ ಜೀವನದಲ್ಲಿ ಒಬ್ಬಂಟಿತನವನ್ನು ಅನುಭವಿಸುವುದು ಬಹಳ ಡೇಂಜರ್.

ನಿಮ್ಮ ಆತ್ಮೀಯರ ಜೊತೆ ಮಾತನಾಡಿ..!

ಆದಷ್ಟು ಪ್ರತಿಬಾರಿ ಪ್ರತಿದಿನದ ಲೈಫ್ ನಲ್ಲಿ ನಮ್ಮ ಆತ್ಮೀಯರ ಜೊತೆಗೆ ಮಾತನಾಡುವುದನ್ನು ಬಿಟ್ಟು ಬಿಡುವಂತಹ ಸಂದರ್ಭಗಳು ಇರುತ್ತದೆ. ಮನಸ್ಸಿಗೆ ಬೇಸರವಾದಾಗ ನಿಮ್ಮ ಆತ್ಮೀಯರ ಜೊತೆಗೆ ಶೇರ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಮನಸ್ಸು ಹಗುರವಾಗುತ್ತದೆ. ಜೊತೆಗೆ ಒತ್ತಡ ಕಡಿಮೆಯಾಗುತ್ತದೆ. ಆರೋಗ್ಯ ಸಮಸ್ಯೆ ಕೂಡ ಸುಧಾರಿಸುತ್ತದೆ. ಹಾಗಂತ ಎಲ್ಲವನ್ನು ಕೂಡ ನಿಮ್ಮ ಸ್ನೇಹಿತರ ಬಳಿ ಹೇಳಿಕೊಳ್ಳುವುದು ಸೂಕ್ತವಲ್ಲ. ಅಂತಹ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ನಿಮ್ಮ ಸ್ನೇಹಿತರ ಜೊತೆ ಮಾತನಾಡಿ ನಿಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಂಡು ಅದಕ್ಕೆ ಸರಿಯಾದಂತಹ ಮಾರ್ಗವನ್ನು ಕಂಡುಕೊಳ್ಳಿ. ಇದರಿಂದ ನೀವು ಏಕಾಂತದಿಂದ ಆಚೆ ಬರಲು ಸಾಧ್ಯವಾಗುತ್ತದೆ. ಸ್ನೇಹಿತರ ಜೊತೆಗೆ ಮಾತನಾಡುವುದು ಯಾವುದೇ ಕೆಟ್ಟ ಹಾದಿಗಳಿಗೆ ದಾರಿ ಮಾಡಿಕೊಡದ ಹಾಗೆ ನೀವು ನಿರ್ಧಾರ ಮಾಡಿಕೊಳ್ಳಿ. ಕೆಲವೊಬ್ಬರು ನಿಮ್ಮ ಜೀವನವನ್ನು  ಅಥವಾ ಕೆರಿಯರನ್ನು ನಾಶಪಡಿಸುವಂತಹ ಮನಸ್ಥಿತಿಯವರು ಇರುತ್ತಾರೆ. ಅಂತವರನ್ನು ನೀವು ದೂರವಿಟ್ಟುಕೊಳ್ಳುವುದು ಒಳ್ಳೆಯದು. ಸ್ನೇಹಿತರು ಎಂದ ಕ್ಷಣ ಎಲ್ಲರೂ ಕೂಡ ಸ್ನೇಹಿತರು ಆಗಿರೋಕೆ ಸಾಧ್ಯವಿಲ್ಲ. ಅದರಲ್ಲಿ ಕೆಲವೊಬ್ಬರು ಮಾತ್ರ ನಿಮ್ಮ ನಿಜವಾದ ಸ್ನೇಹಿತರು ಆಗಿರುತ್ತಾರೆ. ಹಾಗಾಗಿ ನಿಮ್ಮ ಮನಸ್ಸಿನ ನೋವುಗಳಿಗೆ ಸ್ಪಂದಿಸುವಂತಹ ಗೆಳತಿ ಅಥವಾ ಗೆಳೆಯರನ್ನು ಮಾತ್ರ ನೀವು ಹತ್ತಿರ ಸೇರಿಸಿಕೊಳ್ಳಿ. ಜೊತೆಗೆ ನಿಮಗೆ ಮನಸ್ಸಿಗೆ ಬೇಸರವಾದಾಗ ಅಥವಾ ಏಕಾಂತ ಅನಿಸಿದಾಗ ನೀವು ನಿಮ್ಮ ಅಚ್ಚುಮೆಚ್ಚಿನ ಸ್ನೇಹಿತರನ್ನು ಮಾತನಾಡಿಸಿ ನಿಮ್ಮ ಮನಸ್ಸನ್ನು ಖುಷಿಯಾಗಿರಿಸಿ.

ಪುಸ್ತಕ ಓದಿ ರಿಲಾಕ್ಸ್ ಆಗಿ..!

ನಮ್ಮಲ್ಲಿ ಸಾಕಷ್ಟು ಜನ ಪುಸ್ತಕವನ್ನು ಶಾಲಾ ದಿನಗಳಲ್ಲಿ ಮಾತ್ರವಷ್ಟೇ ಓದಿರುತ್ತಾರೆ. ಅದರ ನಂತರ ನಮ್ಮ ಬುದ್ಧಿಮಟ್ಟವನ್ನು ಹೆಚ್ಚಿಸಿಕೊಳ್ಳಲು ಯಾರು ಕೂಡ ಟ್ರೈ ಮಾಡಲ್ಲ. ಕೆಲಸಕ್ಕೆ ಬಂದ ನಂತರ ಅಂತೂ ತಾವು ಆಯ್ತು ತಮ್ಮ ಕೆಲಸ ಆಯ್ತು ಅಂತ ಫುಲ್ ಬ್ಯುಸಿ ಆಗಿರುತ್ತಾರೆ. ಇಂಥವರು ಪುಸ್ತಕ ಓದುವಂತಹ ಹವ್ಯಾಸವನ್ನು ಇಟ್ಟುಕೊಂಡಿರಿ. ನಿಮ್ಮ ಜೀವನ ಸುಂದರವಾಗಿರುತ್ತದೆ. ನೀವು ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆ, ಪುಸ್ತಕದ ಪರಿಚಯ ಅಥವಾ ಪುಸ್ತಕವನ್ನು ಓದುವುದರಿಂದ ನಿಮ್ಮ ಮಾನಸಿಕ ಚಂಚಲತೆ ದೂರವಾಗುತ್ತದೆ. ಒಬ್ಬ ಗೆಳೆಯ ಅಥವಾ ಒಬ್ಬಳು ಗೆಳತಿಯನ್ನು ಪಡೆಯುವುದಕ್ಕಿಂತ ಒಂದು ಪುಸ್ತಕವನ್ನು ಓದಿ ನಿಮ್ಮ ಜೀವನವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯುವುದು ಬೆಸ್ಟ್.‌

ಟೆಂನ್ಶನ್‌ ಯಾಕೆ ಸಕ್ಸಸ್ ಗಾಗಿ ಸ್ವಲ್ಪ ಕಾಯಿರಿ..!

ಯಶಸ್ಸು ಅನ್ನುವುದು ಅಷ್ಟು ಬೇಗ ಸುಲಭವಾಗಿ ಸಿಗುವುದಿಲ್ಲ. ನೀವು ಯಶಸ್ಸಿನ ಹಾದಿಯನ್ನು ತುಳಿಯಬೇಕಾದರೆ ಕಷ್ಟ ಕಾರ್ಪಣ್ಯಗಳನ್ನು ದಾಟಿ ಮುಂದುವರಿಯಬೇಕು. ಕೆಲವರು ಇವತ್ತು ಅಂದುಕೊಂಡು ನಾಳೆಯೇ ನಮಗೆ ಸಕ್ಸಸ್ ಸಿಗಬೇಕು ಅಂತ ಅತಿಯಾದ ಆತ್ಮ ವಿಶ್ವಾಸವನ್ನು ಇಟ್ಟುಕೊಂಡಿರುವವರು ಬಹಳಷ್ಟು ಜನ ಇರುತ್ತಾರೆ. ಇದರಿಂದ ವ್ಯಥೆಪಟ್ಟುಕೊಂಡು ಪ್ರತಿದಿನ ಇರುತ್ತಾರೆ. ನೀವು ಸಕ್ಸಸ್‌ ಗೆ ಕಾಯಿರಿ. ಕೊಂಚ ತಡವಾದರೂ ನಿಮ್ಮ ಜೀವನದಲ್ಲಿ ಯಶಸ್ಸು ಅನ್ನುವುದು ಖಂಡಿತವಾಗಲೂ ಸಿಗುತ್ತದೆ.

ತೆರೆದ ಪುಸ್ತಕದಂತಿರಿ..! ಆದ್ರೆ ಕೇರ್‌ ಫುಲ್!

ನಾವು ಜೀವನದಲ್ಲಿ ತೆರೆದ ಪುಸ್ತಕದಂತೆ ಇರುವುದು ಒಳ್ಳೆಯದು. ಇನ್ನು ಕೆಲವೊಂದು ಬಾರಿ ಇದು ಹಿನ್ನಡೆಯಾಗುವಂತಹ ಸಾಧ್ಯತೆ ಕೂಡ ಇರುತ್ತದೆ. ನಿಮ್ಮ ಮನಸ್ಸಿನಲ್ಲಿರುವಂತಹ ನೋವುಗಳಿಗೆ ಪರಿಹಾರವನ್ನು ಹುಡುಕಬೇಕಾದರೆ ಒಬ್ಬರು ಒಳ್ಳೆಯ ವ್ಯಕ್ತಿಯನ್ನು ಭೇಟಿ ಮಾಡಿ ಮಾತನಾಡಿ ವಿಷಯಗಳನ್ನು ಹಂಚಿಕೊಳ್ಳಿ. ಎಲ್ಲರ ಜೊತೆಗೆ ನೀವು ನಿಮ್ಮ ವಿಚಾರಗಳನ್ನು ಹಂಚಿಕೊಳ್ಳುವುದು ಒಳ್ಳೆಯದಲ್ಲ ತೆರೆದ ಪುಸ್ತಕದಂತೆ ನಿಮ್ಮ ಲೈಫ್ ಸ್ಟೈಲ್ ಇದ್ದರೆ ನೀವು ಏಕಾಂಗಿತನವನ್ನು ಅನುಭವಿಸಲು ಸಾಧ್ಯವಿಲ್ಲ. ಒಂದೆಡೆ ತೆರೆದ ಪುಸ್ತಕದಂತೆ ಇರಬೇಕು. ಇನ್ನೊಂದೆಡೆ ಕೊಂಚ ನಮ್ಮನ್ನು ನಾವು ಕಂಟ್ರೋಲ್ ಮಾಡಿಕೊಂಡು ಇರಬೇಕು. ಕೆಲವೊಮ್ಮೆ ತೆರೆದ ಪುಸ್ತಕವೇ ನಿಮ್ಮ ಜೀವನವನ್ನು ಕಷ್ಟದ ಹಾದಿಗೆ ಕರೆದುಕೊಂಡು ಹೋಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳ್ಳೆಯದು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page