ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕದೇಶ

Delhi Blast: ದೆಹಲಿ ಬಾಂಬ್‌ ಸ್ಟೋಟ..ಕಾರವಾರದಲ್ಲಿ ಕಟ್ಟೆಚ್ಚರ!

Delhi Blast: ದೆಹಲಿಯಲ್ಲಿ ನಡೆದ ಭೀಕರ ಬಾಂಬ್‌ ಸ್ಟೋಟದ ಹಿನ್ನೆಲೆಯಲ್ಲಿ  ಉತ್ತರಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಪೊಲೀಸರು ತೀವ್ರ ಕಂಗಾವಲಿನಲ್ಲಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಪ್ಯಾಟ್ರೊಲಿಂಗ್‍ಗೆ ಎಸ್‌ಪಿ ದೀಪನ್ ಸೂಚನೆ ನೀಡಿದ್ದಾರೆ.

ಉಗ್ರರ ಭಯದಿಂದ ವಿವಿಧ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ..!

ಭಯೋತ್ಪಾದಕರ ಭಯದಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ಪೊಲೀಸರು ಹೈ ಅಲರ್ಟ್‌ ಮೂಲಕ ಕಣ್ಗಾವಲಿನಲ್ಲಿ ಇದ್ದಾರೆ. ಕಾರವಾರದ ಬಂದರು ಸೇರಿದಂತೆ ಜಿಲ್ಲೆಯ ವಿವಿಧ ಬಂದರು, ರೈಲ್ವೇ ಸ್ಟೇಷನ್, ಬಸ್ ಸ್ಟ್ಯಾಂಡ್ ಮುಂತಾದ ಪ್ರದೇಶಗಳನ್ನು  ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇಲ್ಲಿನ ಕ್ರಿಮ್ಸ್ ಆಸ್ಪತ್ರೆ ಆವರಣ, ಬಂದರು ಪ್ರದೇಶಗಳಲ್ಲಿ ಎಸ್‌ಪಿಯವರು ಬಂದು ಪರಿಶೀಲನೆ ನಡೆಸಿದ್ದಾರೆ. ಸೂಕ್ಷ್ಮ ಪ್ರದೇಶಗಳ ಪರಿಶೀಲನೆಗೆ ಬಾಂಬ್ ಹಾಗೂ ಡಾಗ್ ಸ್ಕ್ವಾಡ್ ತಂಡಕ್ಕೆ ಸೂಚನೆ ನೀಡಿದ್ದಾರೆ. ಗಡಿ ಭಾಗಗಳಾದ ಗೋವಾ ಭಾಗದ ಮಾಜಾಳಿ, ರಾಮನಗರ ತಾಲೂಕಿನ ಅನಮೋಡ್ ಭಾಗದಲ್ಲಿ ಜಿಲ್ಲೆಗೆ ಬರುವ ವಾಹನಗಳ ಪರಿಶೀಲನೆಗೆ ಸೂಚಿಸಲಾಗಿದೆ. ಕದಂಬ ನೌಕಾನೆಲೆ ಪ್ರದೇಶ, ಕೈಗಾ ಅಣು ವಿದ್ಯುತ್ ಸ್ಥಾವರ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.  ಇನ್ನು ಗೋವಾ, ಭಟ್ಕಳ, ರಾಮನಗರ ಗಡಿಯಿಂದ ಜಿಲ್ಲೆಗೆ ಬರುವ ವಾಹನಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಕೆಂಪುಕೋಟೆಯಲ್ಲಿ ಉಗ್ರರು ರಿಮೋಟ್‌ ಕಂಟ್ರೋಲ್‌ ಮೂಲಕ ಬಾಂಬ್‌ ಸ್ಟೋಟಿಸಿದ್ರಾ…?

ನವದೆಹಲಿಯ ಕೆಂಪುಕೋಟೆ  ಮೆಟ್ರೋ ನಿಲ್ದಾಣದ ಬಳಿ ನಿಗೂಢ ಕಾರು ಸ್ಫೋಟ ಸಂಭವಿಸಿರುವುದು ನಿಜಕ್ಕೂ ಭಯಾನಕವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಸಂಜೆ ಭೀಕರ ಸ್ಪೋಟ ಸಂಭವಿಸಿದ್ದು, ಈ ಸ್ಪೋಟದಲ್ಲಿ ಕನಿಷ್ಠ 10 ಜನರು ಸಾವಿಗೀಡಾಗಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ.  ಇದು ಭಯೋತ್ಪಾದಕ ಕೃತ್ಯವಿರಬಹುದು ಎಂದು ಶಂಕಿಸಿದ್ದಾರೆ. ಸ್ಫೋಟದ ಸ್ಥಳದಲ್ಲಿ ಅಮೋನಿಯಂ ನೈಟ್ರೇಟ್ನಂತಹ ಸ್ಫೋಟಕಗಳು ಪತ್ತೆಯಾಗಿದ್ದು, ಇದೀಗ ದೆಹಲಿ, ಬೆಂಗಳೂರು  ಹಲವು ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ದೆಹಲಿ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ. ಕೆಲವು ಮೂಲಗಳ ಪ್ರಕಾರ, ಇದು ಉಗ್ರ ದಾಳಿ ಎಂದು ಕನ್ಫರ್ಮ್ ಆಗಿದ್ದು, ಈ ದಾಳಿಗೆ ಉಗ್ರರರು ಸ್ಟಿಕಿ ಬಾಂಬ್ ಬಳಕೆ ಮಾಡಿದ್ದರು ಎಂದು ವರದಿಯಾಗಿದೆ. ಈ ಸ್ಪೋಟವನ್ನು ಹುಂಡೈ ಐ20 ವಾಹನದಲ್ಲಿ ಸ್ಟಿಕಿ ಬಾಂಬ್ ಇಟ್ಟು ಸ್ಪೋಟಮಾಡಲಾಗಿದ್ದು, ಆ ವಾಹನದಲ್ಲಿ 2-3 ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 188

You cannot copy content of this page