ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

Bengaluru:‌ ಇಂದು ಬೈಕ್ ಹಾಗೂ ಕಾರ್ ರ್ಯಾಲಿ ಮೂಲಕ ಯುವಕರು ಬಿಜೆಪಿಗೆ ಸೇರ್ಪಡೆ..!

Bengaluru: ಶಾಸಕರಾದ ಎಸ್.ಆರ್.ವಿಶ್ವನಾಥ್ ರವರ ಅಭಿವೃದ್ಧಿ ಕೆಲಸಗಳು, ಜನಪರ ಕಾಳಜಿ, ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರೊಂದಿಗಿನ ಒಡನಾಟಕ್ಕೆ ಮೆಚ್ಚಿ ವಿವಿಧ ಪಕ್ಷಗಳನ್ನು ತ್ಯಜಿಸಿ ಇಂದು ಹಲವು ಮುಖಂಡರು ತಮ್ಮ ಬೆಂಬಲಿಗರ ಜೊತೆ ಬಿಜೆಪಿ ಸೇರಿದರು.

ಇದನ್ನೂ ಓದಿ: ತೆಲುಗಿನ ಗುಮ್ಮಡಿ ನರಸಯ್ಯ ಪಾತ್ರದಲ್ಲಿ ಶಿವಣ್ಣನ ಆಯ್ಕೆಯೇ ಯಾಕೆ..?

ಸೋಣ್ಣೀನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್ ನಿಂದ ಚೆನ್ನಸಂದ್ರದ ಮೋಹನ್ ಮತ್ತು ವಿಜಯ್, ಅಂಚೆಪಾಳ್ಯದ ಅನಿಲ್, ಬ್ಯಾತ ಗ್ರಾಮದ ಮಂಜುನಾಥ್, ದಂದನಪಾಳ್ಯದ ರವಿ ಮತ್ತು ಸಂತೋಷ್  ಹಾಗೂ ನೂರಾರು ಕಾರ್ಯಕರ್ತರು , ಯುವಕರು ರಾಜಾನುಕುಂಟೆಯಿಂದ ಚನ್ನಸಂದ್ರ ವರೆಗೆ ಬೈಕ್ ಹಾಗೂ ಕಾರ್ ರ್ಯಾಲಿ ಮುಖಾಂತರ ಆಗಮಿಸಿ ಬಿಜೆಪಿಗೆ ಬೃಹತ್ ಸಂಖ್ಯೆಯಲ್ಲಿ ಸೇರ್ಪಡೆಗೊಂಡರು.

Ugram Manju: ಸರಳವಾಗಿ ಎಂಗೇಜ್‌ ಮೆಂಟ್‌ ಮಾಡಿಕೊಂಡ ನಟ ಉಗ್ರಂ ಮಂಜು..!

ವಿಶ್ವ ನಾಯಕ, ಭಾರತ ಮಾತೆಯ ಹೆಮ್ಮೆಯ ಪುತ್ರ, ದೇಶದ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು, ಅಭಿವೃದ್ಧಿ ಕಾರ್ಯಗಳಿಂದ ಆಕರ್ಷಿತರಾಗಿದ್ದೇವೆ. ನಮ್ಮ ಧರ್ಮರಕ್ಷಕ, ಹಿಂದು ಹುಲಿ, ಜನಪ್ರಿಯ ಶಾಸಕ ಎಸ್.ಆರ್.ವಿಶ್ವನಾಥ್ ರವರ ಅಭಿವೃದ್ಧಿ ಕೆಲಸಗಳು, ಜನಪರ ಕಾಳಜಿ, ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರೊಂದಿಗಿನ ಒಡನಾಟವನ್ನು ಮೆಚ್ಚಿ ಬಿಜೆಪಿ ಸೇರುವುದಾಗಿ ಈ ಮುಖಂಡರು ಹೇಳಿದರು.

ಇದನ್ನೂ ಓದಿ: ತಕ್ಷಣ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸಿ: ಪಿ.ರಾಜೀವ್

ಯುವ ನಾಯಕರಾದ ಅಲೋಕ್ ವಿಶ್ವನಾಥ್, ಪಕ್ಷದ ಹಿರಿಯ ಮುಖಂಡರಾದ ಡಿ.ಬಿ.ಎ ಮಾಜಿ ಅಧ್ಯಕ್ಷರಾದ ದಿಬ್ಬೂರು ಜಯಣ್ಣ, ಎಸ್.ಎನ್ ರಾಜಣ್ಣ, ಜಿಲ್ಲಾ ಸಹ ಪ್ರಭಾರಿ, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್, ಸೋಮಶೇಖರ್ , ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಕಡತನಮಲೆ ಸತೀಶ್, ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಶ್ರೀನಿವಾಸ್ (ಗ್ರಾಮಾಂತರ) , ಕೆ.ಎಂ ಮುರಳಿ (ನಗರ) , ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ ಮಹೀಂದ್ರ, ಕಸಗಟ್ಟಪುರ ಪಂಚಾಯಿತಿ ಅಧ್ಯಕ್ಷರಾದ ಸಂಧ್ಯಾ ದೇವರಾಜ್, ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುನಿರಾಜು ಹಾಗೂ ಇತರೆ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಮುಗಿದಿಲ್ಲ ಕೈದಿಗಳ ಆತಿಥ್ಯ…!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 156

You cannot copy content of this page