kanakadasa jayanti: ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಕನಕದಾಸರ ಜಯಂತಿಯನ್ನು ಆಯೋಜಿಸಲಾಗಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಶಾಸಕ ಭೈರತಿ ಬಸವರಾಜ್, ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಮಹಂತೇಶ ಕವಟಗಿಮಠ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಸೋಮಶೇಖರ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ಪಕ್ಷದ ಪ್ರಮುಖರು ಮತ್ತು ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು. ಕನಕದಾಸರ ಜೀವನಾದರ್ಶಗಳನ್ನು ಅಳವಡಿಸಿಕೊಳ್ಳುವ ಕುರಿತು ಗಣ್ಯರು ಮಾತನಾಡಿದರು. ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಇದನ್ನೂ ಓದಿ: ಮತ ಅಕ್ರಮದಲ್ಲಿ ಚುನಾವಣೆ ಆಯೋಗವೇ ಭಾಗಿ..!
ಕನಕದಾಸರು ಯಾರು ಗೊತ್ತಾ..?
ಕನಕದಾಸರ ಜನ್ಮ ದಿನವನ್ನೇ ನಾವು ಕನಕದಾಸ ಜಯಂತಿ ಎಂದು ಪ್ರತಿ ವರ್ಷ ಆಚರಿಸುತ್ತೇವೆ. ನವೆಂಬರ್ 8ರಂದು ಶನಿವಾರದ ದಿನ ಕನಕದಾಸ ಜಯಂತಿ ಆಚರಿಸಲಾಗುತ್ತೇವೆ. ಭಕ್ತಿ ಪಂಥವನ್ನು ತೆಗೆದುಕೊಂಡಾಗ ನಮಗೆ ಸಾಕಷ್ಟು ಕೀರ್ತನಾಕಾರರು ಸಿಗುತ್ತಾರೆ. ಅದರಲ್ಲಿ ಕನಕದಾಸರಿಗೆ ಅಗ್ರ ಸ್ಥಾನ. ನಮ್ಮ ಕರುನಾಡಿನ ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳ, ಸಾಧು-ಸಂತರ ನೆಲೆವೀಡು.
ಬಸವಾದಿ ಶರಣರು, ಕನಕದಾಸರು ಸಂತರು, ಹರಿದಾಸರು ಮತ್ತು ಕವಿಗಳು. ಈ ನಾಡಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಉನ್ನತಿಗೆ ಇವರ ಕೊಡುಗೆ ಅಪಾರ. ಇವರಲ್ಲಿ ಎದ್ದು ಕಾಣುವವರು ಕನಕದಾಸರು. ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದ ಬಚ್ಚಮ್ಮ ಮತ್ತು ಬೀರಪ್ಪನಾಯಕ ದಂಪತಿಯ ಮಗನಾಗಿ 1509ರಲ್ಲಿ ಜನಿಸಿದರು. ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ತಂದೆ, ತಾಯಿ ಪ್ರೀತಿಯ ಮಗನಾಗಿ, ಬಾಲ್ಯದ ಜೀವನ ಆನಂದದಿಂದ ಸಾಗಿಸಿ, ಬೆಳೆದು ದೊಡ್ಡವರಾಗಿ, ಅನೇಕ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು, ಸತ್ಯದ ಹಾದಿಯಲ್ಲಿ ನಡೆಯುವಂತ ಪ್ರಯತ್ನ ಮಾಡಿರುತ್ತಾರೆ. ಜಾತ್ಯತೀತತೆಯ ಭಾವನೆ ಸರ್ವರಲ್ಲಿಯೂ ಮೂಡಿಸಲು ಪ್ರಯತ್ನಿಸಿದರು.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











