ಬ್ರೇಕಿಂಗ್ ನ್ಯೂಸ್
ಕರ್ನಾಟಕ

Farmers Protest : ರೈತರ ಹೋರಾಟಕ್ಕೆ ಮಣಿದ ಸರ್ಕಾರ : ಪಟಾಕಿ ಸಿಡಿಸಿ ರೈತರು ಸಂಭ್ರಮಾಚರಣೆ

Farmers Protest : ಕೊನೆಗೂ ಪಟ್ಟು ಹಿಡಿದು ಹೋರಾಟಕ್ಕೆ ನಿಂತ ರೈತರಿಗೆ ನ್ಯಾಯ ದೊರಕಿದೆ. ಸರಕಾರವು ತನ್ನ ಸುದೀರ್ಘ ಸಭೆಯಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದ್ದು, 3300 ರೂಪಾಯಿಯನ್ನು ದರ ನಿಗದಿಸಿದ್ದು, ಪ್ರತ್ಯೇಕ 100 ರೂ. ಹೆಚ್ಚುವರಿಯಾಗಿ ಅಂದರೆ, ಸರ್ಕಾರದಿಂದ 50 ರೂ. ಹಾಗೂ ಸಕ್ಕರೆ ಕಾರ್ಖಾನೆಯಿಂದ 50 ರೂ. ಹೆಚ್ಚುವರಿ ನೀಡಲಾಗುವುದು ಎಂದು ಘೋಷಿಸಲಾಗಿದೆ.

ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು ಕೊನೆಗೂ ರೈತರ ಕಷ್ಟವನ್ನು ಅರಿತು ನ್ಯಾಯಯುತ ತೀರ್ಮಾನಕ್ಕೆ ಬಂದಿರುತ್ತದೆ. ಈ ಸುದ್ದಿ ತಿಳಿದ ತಕ್ಷಣ ಗುರ್ಲಾಪುರದಲ್ಲಿ ರೈತರ ಸಂಭ್ರಮಾಚರಣೆ, ಪಟಾಕಿ ಸಿಡಿಸುವುದರೊಂದಿಗೆ ಖುಷಿಯಿಂದ ಎಲ್ಲರೂ ಸಮಾಧಾನಗೊಂಡಿರುವುದು ಕಂಡು ಬಂದಿದೆ. ಸಕ್ಕರೆ ಕಾರ್ಖಾನೆಯ ಜೊತೆ ಸಮಿತಿಯಲ್ಲಿ ಸಭೆ ನಡೆಸಿದ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಒಂದು ಟನ್ ಕಬ್ಬಿನ ದರಕ್ಕೆ 100 ರೂಪಾಯಿ ಹೆಚ್ಚುವರಿಯಾಗಿ ಅಧಿಕೃತ ಘೋಷಣೆ ಮಾಡಿರುತ್ತದೆ. ಕಬ್ಬು ಬೆಳೆಗಾರರ ಹಿತಾಸಕ್ತಿಯ ಮೇರೆಗೆ ಈ‌ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿಕೆ ನೀಡಿರುತ್ತಾರೆ. ಅಲ್ಲದೇ ಬೆಳಗಾಂನ ರೈತರಿಗೆ ಹಾಗೂ ಮಾಲೀಕರಿಗೆ ಈ ಹೋರಾಟವನ್ನು ಇಲ್ಲಿಗೇ ಕೈ ಬಿಡಬೇಕೆಂದು ಮನವಿಯನ್ನೂ ಮಾಡಿಕೊಂಡಿರುತ್ತಾರೆ.

ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಯೂನಿಟ್ ಗೆ 60 ಪೈಸೆ ತೆರಿಗೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಮರು ಪರಿಶೀಲಿಸಬೇಕೆಂದು ಕಾರ್ಖಾನೆ ಮಾಲೀಕರು ಮನವಿ ಮಾಡಿದ್ದು, ಈ ಬಗ್ಗೆ ಮರು ಪರಿಶೀಲನೆ ನಡೆಸಲಾಗುವುದು ಹಾಗೂ ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳು ಅದೇ ರೀತಿ ರೈತರು ಸಕ್ಕರೆ ಕಾರ್ಖಾನೆಗಳಿಂದ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಸಮಾಲೋಚನೆಯನ್ನು ನಡೆಸಿ ಪರಿಹಾರ ಒದಗಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುತ್ತಾರೆ. ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ಜೊತೆ ಸಭೆ ನಡೆಸಿದ್ದ ಸಿಎಂ ಸಿದ್ಧರಾಮಯ್ಯ ಎಲ್ಲಾ ರೀತಿಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿಕೆ ನೀಡಿರುವುದು ವರದಿಯಾಗಿದೆ.

ಇದನ್ನೂ ಓದಿ : Airport : ಏರ್ಪೋರ್ಟ್ ನಲ್ಲಿ ಪ್ರಯಾಣಿಕರ ಪರದಾಟ : ವಿಮಾನ ನಿರ್ಗಮನದಲ್ಲಿ ವ್ಯತ್ಯಯ

……….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/AYP_nK8o1Rw?si=6gOb6xoMtg9GLTeu

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page