RBI : ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಸ್ಥಳೀಯ ಬ್ಯಾಂಕುಗಳನ್ನು ಅವಲಂಬಿತರಾಗಿರುತ್ತಾರೆ. ಎಷ್ಟೋ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಸಾಮಾನ್ಯ ಜನರು ಕೂಡ ಪ್ರತಿ ಸಲ ಬ್ಯಾಂಕ್ ಗಳಿಗೆ ಹೋಗಬೇಕಾಗುತ್ತದೆ ಈ ಸಂದರ್ಭ ಕೆಲವೊಮ್ಮೆ ವಿಪರ್ಯಾಸವೆಂಬಂತೆ ಸ್ಥಳೀಯ ಭಾಷೆಗಳಿಗೆ ಬ್ಯಾಂಕಿನ ಕೆಲವೊಂದು ವ್ಯವಹಾರದ ಸಂದರ್ಭದಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡುವುದು ಅಥವಾ ವಿಷಯವನ್ನು ಸಂಗ್ರಹಿಸುವುದು ಕಷ್ಟಕರವಾಗಿರುತ್ತದೆ. ಎಲ್ಲಾ ವರ್ಗದ ಜನರಿಗೆ ಬ್ಯಾಂಕಿನ ಸೌಲಭ್ಯ ಲಭ್ಯವಿರುವುದರಿಂದ ಆರ್.ಬಿ.ಐ ಸರ್ಕಾರವು ಸ್ಥಳೀಯ ಭಾಷೆಗಳನ್ನು ಗ್ರಾಹಕರ ಸೇವೆಯಲ್ಲಿ ಸುಲಭಗೊಳಿಸುವುದು ಮತ್ತು ಎಲ್ಲಾ ಬ್ಯಾಂಕಿಂಗ್ ಸೌಲಭ್ಯಗಳನ್ನು ಲಭ್ಯವಾಗಿಸುವಂತೆ ಮಾಡುವುದು ಮೂಲ ಉದ್ದೇಶವಾಗಿದೆ.
ಬ್ಯಾಂಕುಗಳು ಸ್ಥಳೀಯ ಭಾಷೆ ಬಲ್ಲವರನ್ನು ನೇಮಕ ಮಾಡಿಕೊಳ್ಳಬೇಕು. ಅವರ ಸ್ಥಳೀಯ ಭಾಷೆ ಜ್ಞಾನದ ಆಧಾರದ ಮೇಲೆ ಅವರ ವೃತ್ತಿಪರತೆಯನ್ನು ನಿಗದಿಪಡಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹೇಳಿದ್ದು ಈ ಸಂಬಂಧ ನೇಮಕಾತಿ ಮತ್ತು ಮಾನವ ಸಂಪನ್ಮೂಲ ನೀತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. 12ನೇ ಎಸ್ ಬಿ ಐ ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರದ ಸಮಾವೇಶದಲ್ಲಿ ಮಾತನಾಡಿದ ಅವರು ಪ್ರತಿಯೊಂದು ಶಾಖೆಯಲ್ಲಿ ನೇಮಿಸಲಾದ ಎಲ್ಲಾ ಸಿಬ್ಬಂದಿಗೆ ಅಲ್ಲಿನ ಜನ ಮತ್ತು ಅವರು ಮಾತನಾಡುವ ಸ್ಥಳೀಯ ಭಾಷೆಯನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರಬೇಕು ಎಂದು ಹೇಳಲಾಗಿದೆ.
ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆಯ ಬಳಕೆಗಳು ಉದಾಹರಣೆಗೆ ಬ್ಯಾಂಕ್ ಶಾಖೆಗಳಲ್ಲಿ ಸೂಚನೆ ಬೋರ್ಡುಗಳು ಇಂಗ್ಲೀಷ್, ಹಿಂದಿ ಮತ್ತು ಸ್ಥಳೀಯ ಭಾಷೆಗಳಲ್ಲಿ ಇರಬೇಕು. ಕರ್ನಾಟಕದಲ್ಲಿ ಕನ್ನಡದಲ್ಲಿ ಬೋರ್ಡ್ ಗಳು ಇರಬೇಕು. ಇದಕ್ಕೆ ಆರ್ ಬಿ ಐ ಪ್ರೋತ್ಸಾಹಿಸುತ್ತದೆ. ಠೇವಣಿ ಹಣಕಾಸು ಮತ್ತು ಅರ್ಜಿ ಮುಂತಾದ ಪ್ರಮುಖ ಫಾರ್ಮುಗಳು ಕೂಡ ಸ್ಥಳೀಯ ಭಾಷೆಯಲ್ಲಿಯೂ ಇರತಕ್ಕದ್ದು ಹಾಗೆ ಕೌಂಟರ್ ನಲ್ಲಿ ಸೇವೆ ನೀಡುವ ಸಿಬ್ಬಂದಿಗಳು, ಕನಿಷ್ಟ ಒಬ್ಬರು ಸ್ಥಳೀಯ ಭಾಷೆ ಬಲ್ಲವರಾಗಿರಲೇಬೇಕು ಅಲ್ಲದೇ ಗ್ರಾಹಕ ಆಹ್ವಾನಗಳು ಮತ್ತು ವಿಚಾರಣೆಗಳು ಸ್ಥಳೀಯ ಭಾಷೆಯಲ್ಲಿ ಸ್ವೀಕರಿಸಬೇಕು. ಈ ಪ್ರಕಾರ ಎಲ್ಲಾ ರಾಷ್ಟ್ರಮಟ್ಟದ ಬ್ಯಾಂಕ್ ಗಳು ರಾಜ್ಯದ ಅಧಿಕೃತ ಸ್ಥಳೀಯ ಭಾಷೆ ಬಳಕೆಯನ್ನು ಉತ್ತೇಜಿಸಬೇಕು ಎಂದು ಆರ್ ಬಿ ಐ ತಿಳಿಸುತ್ತದೆ. ಆದರೆ ಈಗ ಕೆಲವೊಂದು ಸಂದರ್ಭ ಸ್ಥಳೀಯ ಭಾಷಿಕರಿಗೆ ಬ್ಯಾಂಕ್ ವ್ಯವಹಾರ ಕಷ್ಟಕರವಾಗಿರುವುದರಿಂದ ನಿರ್ಮಲಾ ಸೀತಾರಾಮನ್ ತಿಳಿಸಿರುವಂತೆ ಬ್ಯಾಂಕುಗಳಲ್ಲಿ ಸ್ಥಳೀಯ ಭಾಷಿಕರಿಗೆ ಉದ್ಯೋಗ ಕಲ್ಪಿಸುವುದು ಉತ್ತಮ ಎಂದು ವರದಿಯಾಗಿರುತ್ತದೆ.
ಇದನ್ನೂ ಓದಿ :kadaba: ಒಂಭತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/2NUxdpIvL2A?si=fWmoMsoNw25i7mH_











