Protest : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಬ್ಬಿನ ಬೆಳೆಗಾರರ ಪ್ರತಿಭಟನೆಯ ಜೊತೆ ಸೇರಿಕೊಂಡಿದ್ದು, ಕಬ್ಬಿನ ಬಾಕಿ ಪಾವತಿ ಹಾಗೂ ಬೆಲೆನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿಕ್ಕೋಡಿಯ ಗುರ್ಲಾಪುರ ಕ್ರಾಸ್ ನಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿರುವುದು ಇದೀಗ ತೀವ್ರ ಸ್ವರೂಪಕ್ಕೆ ಬಂದಿದೆ ವಿಪಕ್ಷಗಳು ಸಹ ಸರ್ಕಾರದ ವಿರುದ್ಧ ಈ ಕುರಿತು ಮೇಲಿಂದ ಮೇಲೆ ಆಪಾದನೆಗಳನ್ನು ಹೇರುತ್ತಲೇ ಇವೆ.
ನಿಲ್ಲದ ಪ್ರತಿಭಟನೆಯ ಜೊತೆ ವಿಪಕ್ಷಗಳ ಬೆಂಬಲ ;
ರೈತರ ಸಮಸ್ಯೆಗಳಿಗೆ ಪರಿಹಾರ ಘೋಷಣೆ ಮಾಡುವ ಅಥವಾ ಇನ್ಯಾವುದೋ ರೀತಿಯಲ್ಲಿ ಕ್ರಮವನ್ನು ಕೈಗೊಳ್ಳುವ ಅಧಿಕಾರವನ್ನು ಇಂದು ಸಚಿವ ಸಂಪುಟ ಸಭೆಯಲ್ಲಿ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು. ಹಾಗಾಗಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿಗಳು ಸುದ್ದಿಗೋಷ್ಠಿಯನ್ನು ನಡೆಸಿ ಬೆಲೆ ನಿಗದಿ ಬಗ್ಗೆ ಅಂತಿಮ ಘೋಷಣೆಯನ್ನು ತಿಳಿಸುವ ಸಾಧ್ಯತೆಯೂ ಇದೆ. ಈ ಮಧ್ಯೆ ನಿನ್ನೆ ಸಚಿವ ಹೆಚ್ ಕೆ ಪಾಟೀಲ್ ನಡೆಸಿದ ಸಂಧಾನ ಸಭೆಯು ವಿಫಲವಾಗಿದ್ದು ಇದರ ನಡುವೆ ವಿಜಯೇಂದ್ರ ಮೇಲೆ ಸಿಎಂ ಗರಂ ಆಗಿದ್ದಾರೆ ಎಂದು ವರದಿಯಾಗಿದೆ ಚಿಕ್ಕೋಡಿಯ ಗುರ್ಲಾಪುರ ಕ್ರಾಸ್ ನಲ್ಲಿ ಪ್ರತಿಭಟನೆ ಮುಂದುವರೆಯುತ್ತಿರುವಾಗ ರೈತರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಗರಂ ಆಗಿದ್ದಾರೆ ಎಂದು ಕೂಡ ಹೇಳಲಾಗಿದೆ.
ಇಂದು ಅಂತಿಮ ಘೋಷಣೆಯಾಗಲಿದೆ ಕಬ್ಬಿನ ಬೆಲೆ ;
ಜೊತೆಗೆ ಇಂದು ಮುಖ್ಯಮಂತ್ರಿಗಳು ಕಬ್ಬಿನ ಬೆಲೆಯ ಘೋಷಣೆಯನ್ನು ಮಾಡಿದ ನಂತರ ನಾಳೆ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆಯನ್ನು ನಡೆಸಿ ಮಾತುಕತೆಯನ್ನು ಮುಂದುವರೆಸಿ, ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ತೀರ್ಮಾನವನ್ನು ಮಾಡಲಿದ್ದಾರೆ ಎಂದು ಕೂಡ ವರದಿಯಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ರಾಯಭಾಗ ಚಿಕ್ಕೋಡಿ ಸೇರಿದಂತೆ ಹಲವು ಭಾಗಗಳಲ್ಲಿ ಹಗಲು ರಾತ್ರಿ ಎನ್ನದೆ ಪ್ರತಿಭಟನೆಗಳು ತೀವ್ರಗೊಳ್ಳುತ್ತಲೇ ಇವೆ ರಾತ್ರಿಯ ಸಮಯ ಪ್ರತಿಭಟನೆ ನಡೆಸುವ ಸ್ಥಳದಲ್ಲಿ ಅನ್ನವನ್ನು ಬೇಯಿಸಿ ಅಲ್ಲೇ ಊಟ ಮಾಡುವುದನ್ನು ಕೂಡ ಕೆಲವೊಂದು ವಿಡಿಯೋದಲ್ಲಿ ನಾವು ಕಾಣುತ್ತೇವೆ. ಇಲ್ಲಿ ಯಾರೇ ಬಂದು ಸಂಧಾನಕ್ಕೆ ನಿಂತರೂ ಕೂಡ ಇವರು ಹೋದವರು ವಿಫಲಗೊಂಡು ಮತ್ತೆ ಹಿಂತಿರುಗುತ್ತಾರೆ. ಯಾವುದೇ ಸಂಧಾನ ಕ್ಕೂ ರೈತರು ಒಪ್ಪುತ್ತಿಲ್ಲ ಅವರು ತಿಳಿಸಿದಂತೆ, ಕಬ್ಬಿನ ತೆರಿಗೆ ಹಣದಲ್ಲಿ ರೈತರಿಗೆ ಒಂದು ಸಾವಿರ ರೂ ನೀಡಬೇಕು ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿರುವುದು ನಿಲ್ಲಬೇಕು. ಪ್ರತೀ ಟನ್ ಗೆ 3500ರೂ. ನಿಗದಿಪಡಿಸಿ ಸರ್ಕಾರವೇ ಸಕ್ಕರೆ ಕಾರ್ಖಾನೆ ಬಳಿ ತೂಕದ ಮೆಷಿನ್ ಅನ್ನು ಇಡಬೇಕು ಜೊತೆಗೆ ತೂಕ ಸೇರಿ ಪ್ರತಿಯೊಂದು ಮಾಹಿತಿ ಕೂಡ ಡಿಜಿಟಲ್ ಮಾಡಬೇಕು. ಸಕ್ಕರೆ ಆಯುಕ್ತರ ಕಚೇರಿಗೆ ಅಂದಾಜು ನೂರು ಸಿಬ್ಬಂದಿ ನೇಮಕವನ್ನು ಮಾಡಲೇಬೇಕೆಂದು ಬೇಡಿಕೆಗಳನ್ನು ರೈತರು ಇದೀಗ ತಮ್ಮ ಬೇಡಿಕೆಯನ್ನು ಅಂತಿಮವಾಗಿ ಸರ್ಕಾರಕ್ಕೆ ಒಪ್ಪಿಸಿರುತ್ತಾರೆ.
ಇದನ್ನೂ ಓದಿ : Harish Roy Life Story: ಉಡುಪಿ ಭಟ್ಟರ ಮಗ..ಊರಿಂದ ಮುಂಬೈಗೆ ಓಡಿ ಹೋಗಿದ್ರು! ಭೂಗತಲೋಕ To ಬಣ್ಣದ ಲೋಕ!
……..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/rHNt-vvvD9o?si=ouBPhn5iTQwNIPSm











