ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

Harish Roy Life Story: ಉಡುಪಿ ಭಟ್ಟರ ಮಗ..ಊರಿಂದ ಮುಂಬೈಗೆ ಓಡಿ ಹೋಗಿದ್ರು! ಭೂಗತಲೋಕ To ಬಣ್ಣದ ಲೋಕ!

Harish Roy Life Story: ಸ್ಯಾಂಡಲ್‌ ವುಡ್‌ ನ ಖ್ಯಾತ ನಟ ಹರೀಶ್‌ ರಾಯ್ ಬಹುದಿನಗಳಿಂದ ಕ್ಯಾನ್ಸರ್‌ ನಿಂದ ಬಳಲಿ, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಅಷ್ಟಕ್ಕೂ ನಟ ಹರೀಶ್‌ ರಾಯ್ ಅವರ ಹಿನ್ನೆಲೆ ನೀವು ಕೇಳಿದ್ರೆ ಖಂಡಿತಾ ಅಚ್ಚರಿ ಪಡುತ್ತೀರಿ..

ಇದನ್ನೂ ಓದಿ: KGF ಚಾಚಾ..ನಟ ಹರೀಶ್ ರಾಯ್ ಇನ್ನಿಲ್ಲ..!

ಹರೀಶ್‌ ರಾಯ್‌ ಉಡುಪಿಯಿಂದ ಮುಂಬೈಗೆ ಓಡಿ ಹೋಗಿದ್ದೇಕೆ..?

ಹೌದು, 10ನೇ ತರಗತಿವರೆಗೆ ಮಾತ್ರ ಓದಿದ್ದ ಹರೀಶ್‌ ರಾಯ್‌, ಮೂಲತಃ ಉಡುಪಿಯವರು. ಶಾಲೆಯಲ್ಲಿ ತಪ್ಪು ಮಾಡಿರುವ ಕಾರಣ ಒಂದು ದಿನ ಅಪ್ಪನ ಕರೆದುಕೊಂಡು ಬನ್ನಿ ಎಂದಾಗ, ಭಯದಿಂದ ಸ್ಕೂಲ್ ಬಿಟ್ಟು ಮುಂಬೈಗೆ ಓಡಿ ಹೋದ ಇವರು, 2 ವರ್ಷ ಅಲ್ಲೇ ಇರುತ್ತಾರೆ. ಆಗ, ಹರೀಶ್‌ ರಾಯ್‌ ಉಡುಪಿ ಭಟ್ಟರ ಮಗ ಎಂದು ಅಲ್ಲಿ ತಿಳಿದಾಗ, ಅಲ್ಲಿಂದ ಅವರನ್ನು ಮತ್ತೆ ಮರಳಿ ಕಳುಹಿಸುತ್ತಾರೆ ಎಂದು ಈ ಹಿಂದೆ ನಟ ಹರೀಶ್‌ ರಾಯ್‌ ಬಾಲ್ಯದ ದಿನಗಳನ್ನು ಮಾಧ್ಯಮಗಳಿಗೆ ಹೇಳಿಕೊಂಡಿದ್ದರು.

ಭೂಗತ ಲೋಕದಿಂದ ಬಣ್ಣದ ಲೋಕಕ್ಕೆ ಎಂಟ್ರಿ..!

ಕೆಲವು ವರುಷಗಳ ಹಿಂದೆ ಮುಂಬೈಯಲ್ಲಿ ಹರೀಶ್‌ ರಾಯ್‌ ಮೇಲೆ ಕೆಲವು ಕೇಸ್ಗಳು ಇದ್ದವು. ಅಲ್ಲಿ ಕೆಲವು ರೌಡಿಗಳನ್ನು ಎದುರು ಹಾಕಿಕೊಂಡಿದ್ದ ಇವರು, ಭೂಗತ ಜಗತ್ತಿಗೆ ಎಂಟ್ರಿ ಕೂಡ ಕೊಟ್ಟಿದ್ದರು. ಅದಾದ ಬಳಿಕ ಇದು ಬೇಡ..ನಮಗಲ್ಲ ಎಂದು ಅಂದುಕೊಂಡು, 1994ರಲ್ಲಿ ಬೆಂಗಳೂರಿಗೆ ಬಂದು ಸಿಲಿಕಾನ್‌ ಸಿಟಿಯಲ್ಲಿ ಕೆಲಸ ಮಾಡಲು ಶುರು ಮಾಡುತ್ತಾರೆ. ಬಳಿಕ ನಟನೆ ಮಾಡಬೇಕು ಎಂದು ಚಿತ್ರರಂಗಕ್ಕೆ ಎಂಟ್ರಿಯಾಗಿ ತನ್ನ ಜೀವನವನ್ನು ಬಣ್ಣದ ಲೋಕದಲ್ಲೇ ಕಂಡುಕೊಂಡರು.

ಉಡುಪಿಯಲ್ಲಿ ಚಿನ್ನದ ಅಂಗಡಿ.. ನಾಗರ ಬೆತ್ತದಿಂದ ಅಪ್ಪನ ಏಟು!

ಮೂಲತಃ ಉಡುಪಿಯವರಾದ ಹರೀಶ್‌ ರಾಯ್‌ ಕುಟುಂಬದಲ್ಲಿ ಅವರ ತಾಯಿ ಕಡೆಯವರಿಗೆ ಚಿನ್ನದ ಅಂಗಡಿ ಇತ್ತು. ತಂದೆ ದೊಡ್ಡ ಜಮೀನುದಾರರು. ಸುಮಾರು ತೋಟ ಕೂಡ ಇತ್ತು. ತಾಯಿ ಪ್ರೀತಿಯೇ ಇವರಿಗೆ ಸಿಗಲಿಲ್ಲ. ಬೇರೆಯವರ ಮನೆಯಲ್ಲಿ ಹರೀಶ್‌ ರಾಯ್‌ ಬೆಳೆದಿದ್ದರು. ಒಂದನೇ ತರಗತಿವರೆಗೆ ಬೇರೆಯವರ ಮನೆಯಲ್ಲೇ ಇದ್ದರಂತೆ. ಇವರ ತಂದೆಗೆ ಕೋಪ ಜಾಸ್ತಿ ಅಂತೆ ಹಾಗಾಗಿ, ನಾಗರ ಬೆತ್ತದಿಂದ ಹೊಡೆಯುತ್ತಿದ್ದರು ಎಂದು ಈ ಹಿಂದೆ ಹರೀಶ್‌ ರಾಯ್‌ ಮಾಧ್ಯಮಗಳಿಗೆ ತನ್ನ ಕುಟುಂಬದ ಬಗ್ಗೆ ಹೇಳಿಕೊಂಡಿದ್ದರು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page