ಬ್ರೇಕಿಂಗ್ ನ್ಯೂಸ್
ಕರ್ನಾಟಕಸುಳ್ಯ

Madikeri: ಗುಡ್ಡೆಮನೆ ಅಪ್ಪಯ್ಯ ಗೌಡರ ವಿರುದ್ದ ಅವಹೇಳನಕಾರಿ ಕಾಮೆಂಟ್..! ಕೆರಳಿದ ಅರೆಭಾಷಿಕರು!

Madikeri: ಕೊಡಗಿನ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ವಿರುದ್ದ ಅವಹೇಳನಕಾರಿ ಕಮೆಂಟ್ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ಅರೆಭಾಷಿಕ ಜನಾಂಗ ಕೊಡಗು ಗೌಡ ಸಮಾಜಗಳ ಒಕ್ಕೂಟದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ !

ಸದ್ಯ ಗುಡ್ಡೆಮನೆ ಅಪ್ಪಯ್ಯ ಗೌಡರ ವಿರುದ್ದ ಅವಹೇಳನಕಾರಿ ಕಮೆಂಟ್ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೊಡಗು ಗೌಡ ಸಮಾಜಗಳ ಒಕ್ಕೂಟ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದೆ. ಕಾಮೆಂಟ್ ಮಾಡಿರುವ ವ್ಯಕ್ತಿಗೆ ಪೊಲೀಸರು ನೋಟಿಸ್ ಕೂಡ ಜಾರಿ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಕೂಡ ಕೊಡಗು ಜಿಲ್ಲೆಯ ಪ್ರಮುಖ ಎರಡು ಜನಾಂಗಗಳ ನಡುವೆ ಶಾಂತಿ ಕದಡಿ ವಿಕೋಪಕ್ಕೆ ತಿರುಗಿ ಸದ್ಯ ಶಾಂತವಾಗಿತ್ತು. ಇದೀಗ ಮತ್ತೆ ಸುಬೆದಾರ್ ಗುಡ್ಡೆ ಮನೆ ಅಪ್ಪಯ್ಯ ಗೌಡರ ವಿಚಾರದಲ್ಲಿ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ರೀತಿಯಲ್ಲಿ ಕಮೆಂಟ್ ಹಾಕಿದ್ದಾರೆ.

ಅವಹೇಳನಕಾರಿ ಪೋಸ್ಟ್‌ ನಲ್ಲಿ ಏನಿತ್ತು..?

ಕೊಡಗನ್ನು ಆಳಿದ ಲಿಂಗಾಯಿತ ರಾಜರ ಬಗ್ಗೆಯೂ ಕೀಳುಮಟ್ಟದ ಪದಗಳನ್ನು ಬಳಸಲಾಗಿದೆ. ಗುಡ್ಡಮನೆ ಅಪ್ಪಯ್ಯಗೌಡರ ಪ್ರತಿಮೆಗೆ ಚಪ್ಪಲಿ ಹಾರ ಹಾಕಬೇಕು ಅಂತ ಬರೆಯಲಾಗಿದೆ. ಇದನ್ನು ಖಂಡಿಸಿರುವ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ತಪ್ಪಿತಸ್ಥರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದಲ್ಲಿ ಉಗ್ರ ಹೋರಾಟ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭ ಕೊಡಗು ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೆರಿಯನ ಉದಯ್, ಕಜಾಂಜಿ ಅಂಬೆಕಲ್ ನವೀನ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಕಾನೂನು ಸಲಹೆಗಾರ ಕೊಂಬಾರನ‌ ರೋಷನ್ , ಕೊಡಗು ಗೌಡಯುವ ವೇದಿಕೆ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ಮತ್ತಿತರು ಉಪಸ್ತಿತರಿದ್ದರು.

ನಾಲ್ಕು ದಿನಗಳ ಒಳಗೆ ಹಾಜರಾಗಲು ಸೂಚನೆ..!

ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರ ಅವಹೇಳನಕ್ಕೆ ಸಂಬಂಧಿಸಿದಂತೆ ಕೊಡಗು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗೆ ಇಳಿದಿದ್ದು, ಬೇತು ಗ್ರಾಮದ ಅರೆಯಡ ಕುಟುಂಬದ ಸ್ಥಳಕ್ಕೆ ಪೊಲೀಸ್ ತಂಡ ವಿಚಾರಣೆಗೆ ತೆರಳಿದ್ದು ಸದರಿ ವ್ಯಕ್ತಿ ಅರೆಯಡ ರಾಜ ,70 ವರ್ಷ ವಯಸ್ಸಿನ ಬ್ಯಾಂಕ್ ಆಪ್ ತಿರುವಾಂಕೂರುನ ನಿವೃತ್ತ ಉದ್ಯೋಗಿಯಾಗಿದ್ದು, ಮಹಾರಾಷ್ಟ್ರದ ಮುಂಬೈ ನಿವಾಸಿಯಾಗಿದ್ದು, ಈತನ ದೂರವಾಣಿ ನಂಬರಿಗೆ ಕೊಡಗು ಪೊಲೀಸರು ನೋಟಿಸ್ ರವಾನೆ ಮಾಡಿದ್ದು ನಾಲ್ಕು ದಿನಗಳ ಒಳಗೆ ಹಾಜರಾಗಲು ತಾಕೀತು ಮಾಡಿದ್ದಾರೆ. ಹಾಜರಾಗದಿದ್ದಲ್ಲಿ ಒಂದು ತಂಡ ಮುಂಬೈಗೆ ತೆರಳಿ ಆತನನ್ನು ಕರೆ ತರುವ ಕಾರ್ಯ ಮಾಡಲಿದೆ ಎನ್ನಲಾಗಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 180

You cannot copy content of this page