Bengaluru: ಬೆಂಗಳೂರು ನಗರದ ಅಭಿವೃದ್ಧಿ ವಿರೋಧಿಗಳು ಹಾಗೂ ಸುರಂಗ ಮಾರ್ಗದ ಬಗ್ಗೆ ಸುಳ್ಳಿನ ಹೇಳಿಕೆಗಳನ್ನು ನೀಡಿ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಪಕ್ಷದ ನಾಯಕರ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ಪಕ್ಷ ಪತ್ರಿಕಾಗೋಷ್ಠಿ ನಡೆಸಿದೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆ ಬಳಿ ಇರುವ ಮೌರ್ಯ ಹೋಟೆಲ್ ಸಭಾಂಗಣದಲ್ಲಿ, ಬೆಂಗಳೂರುನಗರ ಅಭಿವೃದ್ದಿ ಕೆಲಸಗಳಿಗೆ ವಿರೋಧಿಸುತ್ತಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ತೇಜಸ್ವಿಸೂರ್ಯ ನಡೆಯನ್ನು ಖಂಡಿಸಿ ಕೆಪಿಸಿಸಿ ಮಾಧ್ಯಮ ವಕ್ತಾರರಾದ ಎಂ. ಲಕ್ಷ್ಮಣ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಈ ವೇಳೆ ಎಂ.ಲಕ್ಷ್ಮಣ್, ಮಾತನಾಡಿ, ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ಟನಲ್ ಮಾಡುವುದಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯುತ್ತದೆ, ಇದರಲ್ಲಿ ಏನು ಸಿಗುವುದಿಲ್ಲ ಎಂದು ಅಶೋಕ್, ತೇಜಸ್ವಿಸೂರ್ಯ ಕೊರಗುತ್ತಿದ್ದಾರೆ. ನಮ್ಮ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತಿದೆ. ಬಗರ್ ಹುಕುಂ ಸರ್ಕಾರಿ ಭೂಮಿಯನ್ನು ಆರ್.ಅಶೋಕ್ ರವರು ತನ್ನ ಹಿಂಬಾಲಕರಿಗೆ ಜಮೀನು ಮಂಜೂರು ಮಾಡಿ ಭೂ ಹಗರಣವನ್ನು ಮಾಡಿ ಸಿಲುಕಿದ್ದಾರೆ. ವಿಶ್ವದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ನಗರ ಮೊದಲನೇ ಸ್ಥಾನದಲ್ಲಿದೆ ರಾಜ್ಯದಲ್ಲಿ 4 ಲಕ್ಕಕ್ಕೂ ಹೆಚ್ಚು ಕೋಟಿ ಹಣ ತೆರಿಗೆ ಸಂಗ್ರಹವಾಗುತ್ತಿದೆ ಅದರಲ್ಲಿ ಶೇಕಡ 50 ಪರ್ಸೆಂಟ್ ಬೆಂಗಳೂರು ನಗರದಿಂದ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ಮೆಟ್ರೋ ರೈಲು ಯೋಜನೆಗೆ ರಾಜ್ಯ ಸರ್ಕಾರ ಶೇಕಡ 85ರಷ್ಟು ಹಣ ನೀಡುತ್ತಿದೆ ವಾಹನಗಳು ಬೀದಿಯಲ್ಲಿ ನಿಲ್ಲಿಸಿದರೆ ಪಾರ್ಕಿಂಗ್ ಫೀಸ್ ಕೊಡಬೇಕು ಅಂತಾರೆ ಬಿಜೆಪಿಯವರು ತೇಜಸ್ವಿಸೂರ್ಯ ಮನೆಯಲ್ಲಿ ಆರು ಕಾರುಗಳು ಇದೆ , ಅವರು ಎಲ್ಲಿ ವಾಹನವನ್ನು ನಿಲ್ಲಿಸುತ್ತಾರೆ ಎಂದು ತಿಳಿಸಲಿ ಎಂದರು.
2014 ರ ವರೆಗೂ ಈ ದೇಶದ ಸಾಲ 53 ಲಕ್ಷ ಕೋಟಿ ಸಾಲವಿತ್ತು , ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ , ಈಗ 150 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ ,ಈಗ ಪ್ರತಿ ವ್ಯಕ್ತಿಯ ಮೇಲೆ 4.8 ಲಕ್ಷ ದಷ್ಟು ಸಾಲವಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸುರಂಗ ಮಾರ್ಗದ ಯೋಜನೆಗೆ ಚಾಲನೆ ನೀಡಿ ಅನೇಕ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದಾರೆ , ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ರವರು ಸುರಂಗ ಮಾರ್ಗವೇ ಬೆಂಗಳೂರು ಅಭಿವೃದ್ಧಿಗೆ ಪರ್ಯಾಯ ಎಂಬುದಾಗಿ ಹೇಳಿ ಸಂಚಾರಿ ದಟ್ಟಣೆಯನ್ನು ನಿಯಂತ್ರಿಸಬೇಕಾದರೆ ಸುರಂಗ ಮಾರ್ಗ ಅಗತ್ಯವೆಂದು ತಿಳಿಸಿದ್ದಾರೆ.
ಬಿಜೆಪಿಯ ಭ್ರಷ್ಟ ನಾಯಕರು ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಮರೆಮಾಚಲು ಹಾಗೂ ಪ್ರಾಮಾಣಿಕತೆಯಿಂದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ರಾಜ್ಯದ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು, ಸುಳ್ಳಿನ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅದಕ್ಕೆ ಇಂದು ತಕ್ಕ ಉತ್ತರವನ್ನು ನೀಡುವ ಮೂಲಕ ಬಿಜೆಪಿಯ ನೀತಿಯನ್ನು ಖಂಡಿಸಲಾಯಿತು. ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ಜನತೆಗೆ ಸೂಕ್ತ ಮಾಹಿತಿಯನ್ನು ನೀಡುವ ಮೂಲಕ ಬಿಜೆಪಿಯ ಸುಳ್ಳು ಅಪಪ್ರಚಾರವನ್ನು ತಡೆಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರು ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಇಐ ಅಧ್ಯಕ್ಷರಾದ ಎಸ್.ಮನೋಹರ್ ಹಾಗೂ ಕಾಂಗ್ರೆಸ್ ಮುಖಂಡರುಗಳಾದ ಎ.ಆನಂದ್,ಸುಧಾಕರ್ ರಾವ್,ಪ್ರಕಾಶ್,ಕುಶಾಲ್ ಹರುವೇಗೌಡ, ಚಂದ್ರಶೇಖರ,ಸುಂಕದಕಟ್ಟೆ ನವೀನ್,ಉಮೇಶ್,ಪುಟ್ಟರಾಜು,ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











