ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

Mangaluru Crime: ಸೂಸೈಡ್‌ ಗೆ ಯತ್ನಿಸುತ್ತಿದ್ದ ತಂದೆ ಮಗಳ ರಕ್ಷಿಸಿದ ಪಣಂಬೂರು ಪೊಲೀಸರು!

Mangaluru Crime: ಮಡದಿಯೊಂದಿಗೆ ಜಗಳ, ವೈಮನಸ್ಸಿನಿಂದ ವಿವಾಹಿತ ವ್ಯಕ್ತಿಯೊಬ್ಬತನ್ನ 4 ವರ್ಷದ ಮಗಳ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದು, ಪಣಂಬೂರು ಪೊಲೀಸರು ಇಬ್ಬರನ್ನು ರಕ್ಷಿಸಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಅಕ್ರಮವಾಗಿ ತಲೆಎತ್ತಿರುವ ರೆಸಾರ್ಟ್ ಗಳು : ‘ಸೇವ್ ಕಬಿನಿ’ ತಂಡದಿಂದ ಅಕ್ರಮ ರೆಸಾರ್ಟ್ ಗಳ ಪಟ್ಟಿ ಬಿಡುಗಡೆ

ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನು..?

ಕಾವೂರು ಅಂಬಿಕಾ ನಗರದ ರಾಜೇಶ್(35) ಹೆಂಡತಿ ಜೊತೆ ಜಗಳದಿಂದ ಬೇಸತ್ತು, ತನ್ನ ಮಗಳನ್ನು ತಣ್ಣೀರುಬಾವಿ ಬೀಚ್ ಗೆ ಕರೆದುಕೊಂಡು ಹೋಗಿ, ನಾವು ಸಾಯೋಣ ಮಗಳೇ, ನಿನ್ನ ತಾಯಿ ಅವಳಿಗೆ ಬೇಕಾದ ರೀತಿ ಇರಲಿ ಎಂದು ತುಳು ಭಾಷೆಯಲ್ಲಿ ಮಾತನಾಡಿದ್ದಾನೆ. ನಿನ್ನ ತಾಯಿ ಸರಿ ಇಲ್ಲ ನಮಗೆ ಯಾರೂ ಬೇಡ ಎಂದು ಹೇಳುತ್ತಾ ಸಮುದ್ರದ ನೀರಿನ ಕಡೆ ನಡೆಯುತ್ತಾ ವಿಡಿಯೋ ಮಾಡಿದ್ದಾನೆ. ತುಳು ಭಾಷೆಯಲ್ಲಿ ಮಾತನಾಡುತ್ತಾ, ಸಮುದ್ರ ಕಡೆಗೆ ಹೋಗುವುದು ಮಾತ್ರ ಇತ್ತು. ಮಗು ಸಾಯೋದು ಬೇಡಪ್ಪಾ ಎನ್ನುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತಿದ್ದು ಮನಕಲುಕುವಂತಿತ್ತು.

ಇದನ್ನೂ ಓದಿ: ಹತ್ಯೆಗೀಡಾದವನ ಹುಟ್ಟಿದ ದಿನದಂದೇ ಹಂತಕರಿಗೆ ಜೀವಾವಧಿ ಶಿಕ್ಷೆ

ಪಕ್ಕಾಸಿಗೆ ನೇಣು ಬಿಗಿದು ಸಾಯಲು ಯತ್ನ!

ತಂದೆ ಮಗಳ ವೀಡಿಯೋ ಸೋಷಿಯಲ್‌ ಮೀಡಿಯಾದಿಂದ ಪಣಂಬೂರು ಪೊಲೀಸರಿಗೆ ತಲುಪಿದ ತಕ್ಷಣ ಪಣಂಬೂರು ಬೀಚ್ ಇರಬೇಕೆಂದು ಪೊಲೀಸರು ತಕ್ಷಣ ಅಲ್ಲಿಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ತಣ್ಣೀರುಬಾವಿ ಸಮುದ್ರ ತೀರಕ್ಕೂ ಪೊಲೀಸ್ ಸಿಬ್ಬಂದಿ ತೆರಳಿ ಹುಡುಕಿದ್ದಾರೆ. ಈ ವೇಳೆ ಮಗುವಿನ ಜೊತೆಗೆ ಒಬ್ಬಾತ ಬಂದಿದ್ದು ಗೊತ್ತಾಗಿದೆ. ತಕ್ಷಣವೇ ಯುವಕನ ವಿಳಾಸ ಪತ್ತೆ ಹಚ್ಚಿ ಕಾವೂರು ಅಂಬಿಕಾ ನಗರದಲ್ಲಿರುವ ಯುವಕನ ಮನೆ ವಿಳಾಸಕ್ಕೆ ತೆರಳಿ, ಮನೆಯ ಒಳಗೆ ನುಗ್ಗಿದ್ದಾರೆ. ಈ ವೇಳೆ ತಂದೆ ಪಕ್ಕಾಸಿಗೆ ನೇಣು ಹಗ್ಗ ಹಾಕಿ ಮಗಳ ಜೊತೆಗೆ ನೇಣಿಗೆ ಶರಣಾಗಲು ರೆಡಿಯಾಗಿದ್ದ ಎನ್ನಲಾಗಿದೆ. ಇದಾದ ಬಳಿಕ ಸಾಯುತ್ತಿದ್ದ ತಂದೆ-ಮಗಳನ್ನು ರಕ್ಷಣೆ ಮಾಡಿದ್ದಾರೆ. ಸ್ವಲ್ಪ ತಡವಾದರೂ ಇಬ್ಬರ ಪ್ರಾಣ ಹೋಗುತ್ತಿತ್ತು. ಇದೀಗ ಪೋಲೀಸರ ತುರ್ತು ಸ್ಪಂದನೆಯಿಂದ ಎರಡು ಜೀವಗಳು ಬದುಕುಳಿದಂತಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಪೊಲೀಸರ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ: ಒಂದೇ ಮನೆಯ ಮೂರು ಮಕ್ಕಳಿಗೆ ವಿಷದ ಹಾವು ಕಡಿತ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 170

You cannot copy content of this page