ಬ್ರೇಕಿಂಗ್ ನ್ಯೂಸ್
ಕಡಬಕರ್ನಾಟಕಧಾರ್ಮಿಕಸುಳ್ಯ

Kukke Subrahmanya: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪುವ ಬೆಳ್ಳಿರಥದ ವಿಶೇಷತೆಗಳೇನು ಗೊತ್ತಾ..?

Kukke Subrahmanya: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಡುಪಿಯಿಂದ ಬೆಳ್ಳಿ ರಥ ಸಮರ್ಪಣೆ ಮಾಡಲಾಗಿದೆ. ಬಹಳ ವಿಜೃಂಭನೆಯಿಂದ ಕೂಡಿದ ಬೆಳ್ಳಿಯ ರಥವನ್ನು ನೋಡಲು ಭಕ್ತರು ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ನಾಗದೋಷ ನಿವಾರಣೆ..ಕುಜದೋಷಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬನ್ನಿ..!

ಪುರಾತನ ಹಿನ್ನೆಲೆ ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಪ್ರತೀ ದಿನ ಭಕ್ತರಿಂದ ತುಂಬಿರುವ ದೇವಾಲಯ. ವಿವಿಧ ರಾಜ್ಯಗಳಿಂದ ಇಲ್ಲಿಗೆ ಬಂದು ಹರಕೆ ಸೇವೆಗಳನ್ನು ಸಲ್ಲಿಸುವ ಭಕ್ತರ ಸಂಖ್ಯೆ ಅಪಾರ. ಇದೀಗ ಕುಕ್ಕೆ ಮತ್ತೊಂದು ವಿಶೇಷ ಕ್ಷಣಕ್ಕಾಗಿ ಕಾಯುತ್ತಿದೆ. ದೇಗುಲಕ್ಕೆ ಉಡುಪಿಯಿಂದ ಬೆಳ್ಳಿಯ ರಥ ಹೊರಟಿದೆ.

ಇದನ್ನೂ ಓದಿ: ಹೆಚ್ಚಿನ ಸೆಲೆಬ್ರಿಟಿಗಳು ಈ ಬಣ್ಣದ ನೀರಿನ ಬಾಟಲಿಯನ್ನು‌ ಖರೀದಿಸುತ್ತಾರೆ…!

ಸುಳ್ಯ ಕೆವಿಜಿ ವಿದ್ಯಾಸಂಸ್ಥೆ ಈ ರಥವನ್ನು ಕುಕ್ಕೆಗೆ ಸಮರ್ಪಣೆ ಮಾಡುತ್ತಿದೆ. 110 ಕೆ.ಜಿ ತೂಕದ ಬೆಳ್ಳಿಯಿಂದ 14 ಅಡಿ ಎತ್ತರದ ರಥದ ನಿರ್ಮಾಣವನ್ನು ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜ ಗೋಪಾಲಾಚಾರ್ಯರು ಮಾಡಿದ್ದಾರೆ. ಇಂದು ಮೆರವಣಿಗೆಯ ಮೂಲಕ ರಥವನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ ತರಲಾಗುತ್ತಿದ್ದು, ಕುಂದಾಪುರ ತಾಲೂಕಿನ ಕೋಟೇಶ್ವರ ಶಿಲ್ಪಕಲಾ ಕೇಂದ್ರದಲ್ಲಿ ಬೆಳ್ಳಿ ರಥವನ್ನು ರಚಿಸಲಾಗಿದೆ.

Puttur: ಮತಧರ್ಮ ಮರೆತು ಕಂದಮ್ಮನಿಗೆ ಆಸರೆಯಾದ ಮಹಾತಾಯಿ!

ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬೆಳ್ಳಿ ರಥವನ್ನು ಬರಮಾಡಿಕೊಂಡು, ಪೂಜೆ ಸಲ್ಲಿಸಿದ ನಂತರ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸೇರಿದಂತೆ ನೂರಾರು ಭಕ್ತರು ರಥವನ್ನು ಮಂಗಳೂರಿಗೆ ಬೀಳ್ಕೊಟ್ಟರು. ಪ್ರಮುಖ ಕ್ಷೇತ್ರಗಳು, ಜಂಕ್ಷನ್‌ಗಳಲ್ಲಿ ವಿಶೇಷ ಪೂಜೆ ಮೂಲಕ ರಥಕ್ಕೆ ಸ್ವಾಗತ ಮಾಡಲಾಯಿತು.

ಬೆಳ್ಳಿ ರಥದ ವಿಶೇಷತೆಗಳೇನು ಗೊತ್ತಾ..?
ಕುಕ್ಕೆ ಸುಬ್ರಹ್ಮಣ್ಯಕ್ಕೆ ತರಲಾಗುವ ಬೆಳ್ಳಿ ರಥದ ವಿಶೇಷತೆಗಳ ಬಗ್ಗೆ ನೋಡೋದಾದ್ರೆ, ಈ ರಥದ ತೂಕವು 110 ಕೆ.ಜಿ ಶುದ್ಧ ಬೆಳ್ಳಿ, 14 ಅಡಿ ಎತ್ತರ, ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜ ಗೋಪಾಲಾಚಾರ್ಯರು ರಚಿಸಿದ್ದಾರೆ. ಇನ್ನು ಈ ಬೆಳ್ಳಿ ರಥವನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಧಾರ್ಮಿಕ ಕೈಂಕರ್ಯಗಳಲ್ಲಿ ಬಳಸಲಾಗುತ್ತದೆ. ನೋಡಲು ಅದ್ಭುತವಾಗಿ ರಚಿಸಲಾದ ಬೆಳ್ಳಿಯ ರಥ ನೋಡುಗರ ಗಮನ ಸೆಳೆಯುತ್ತಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 128

You cannot copy content of this page