
Karinja;ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾರಿಂಜ ಎಂಬಲ್ಲಿ ಶ್ರೀ ವನ ಶಾಸ್ತಾರ ವೀರಭದ್ರ ದೇವಸ್ಥಾನ ನಿರ್ಮಾಣಗೊಳ್ಳುತ್ತಿದೆ.ಇದರ ಮುಂದಿನ ಜೀರ್ಣೋದ್ದಾರ ಕಾರ್ಯಕ್ರಮಗಳ ಸಮಾಲೋಚನಾ ಸಭೆ ನಡೆಯಿತು.
ಸಮಾಲೋಚನಾ ಸಭೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ,ಧಾರ್ಮಿಕ ಮುಂದಾಳು ಕಿರಣ್ ಪುಷ್ಪಗಿರಿ,ಯೋಗೀಶ್ ಕಡ್ತಿಲ ಸುನಿಲ್ ಅನವು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ರು.
ದೇವಸ್ಥಾನದ ಕೆಲಸಗಳನ್ನು ಮುಗಿಸುವ ನಿಟ್ಟಿನಲ್ಲಿ ಜೀರ್ಣೋದ್ದಾರ ಸಮಿತಿ ರಚಿಸಲಾಯಿತು.ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಯಾಗಿದ್ದು ಇದೇ ಸಮಯದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಯಿತು.
ಪೆಬ್ರವರಿ ಕೊನೆಯವಾರ ಬ್ರಹ್ಮಕಲಶೋತ್ಸವ ನಡೆಯಲಿದ್ದು ಹಲವು ಉಪಸಮಿತಿಗಳನ್ನು ರಚಿಸಲಾಯಿತು.
ಶಾಸಕ ಹರೀಶ್ ಪೂಂಜ ಬ್ರಹ್ಮಕಲಶೋತ್ಸವ ತಯಾರಿ ಮತ್ತು ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಧಾರ್ಮಿಕ ಮುಂದಾಳು ಕಿರಣ್ ಚಂದ್ರ ಪುಷ್ಪಗಿರಿ ಬ್ರಹ್ಮಕಲಶೋತ್ಸವ ಜನರಿಗೆ ಸಂಭ್ರಮ ತುಂಬುವಂತೆ ಆಚರಣೆಯಾಗಲಿ ಎಂದು ಸಲಹೆ ನೀಡಿದರು.
ಶ್ರಿ ವನ ಶಾಸ್ತಾರ ವೀರಭದ್ರ ದೇವಸ್ಥಾನದ ಸಾನಿಧ್ಯ ಪತ್ತೆಯಾದ ಹಿನ್ನೆಲೆಯಲ್ಲಿ,ದೇವಸ್ಥಾನ ನಿರ್ಮಾಣಕ್ಕೆ ಸ್ಥಳೀಯರು ಮುಂದಾಗಿದ್ದಾರೆ.ದೇವಸ್ಥಾನ ನಿರ್ಮಾಣದ ಕೆಲಸ ಕಾರ್ಯಗಳು ಬಿಡುವಿಲ್ಲದೆ ನಡೆಯುತ್ತಿದೆ.
ಹಿಂದೆ ಇಲ್ಲಿ ವೀರಭದ್ರ ದೈವಸ್ಥಾನವಿತ್ತು.ನಂತರದಲ್ಲಿ ಪ್ರಶ್ನಾಚಿಂತನೆಯಲ್ಲಿ ಶ್ರೀ ವನ ಶಾಸ್ತಾರ ವೀರಭದ್ರ ದೇವರ ಸಾನಿಧ್ಯವಿರುವುದು ಪತ್ತೆಯಾಯಿತು,ಜ್ಯೋತಿಷಿಗಳ ಮಾರ್ಗದರ್ಶನದಂತೆ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು.ಕೆಲಸ ಕಾರ್ಯಗಳು ನಡೆಯುತ್ತಿದೆ.ಸಂಪೂರ್ಣ ಕಲ್ಲಿನಿಂದ ಈ ದೇವಸ್ಥಾನವನ್ನು ನಿರ್ಮಿಸಲಾಗ್ತಿದೆ.
ಬ್ರಹ್ಮಕಲಶೋತ್ಸವಕ್ಕೆ ಸ್ಥಳೀಯರ ಸಹಕಾರ ಕೋರಲಾಯಿತು.ವಿಜಯ್ ಕುಮಾರ್ ಕಲ್ಲಳಿಕೆ ಸ್ವಾಗತಿಸಿ,ಸತೀಶ್ ಪಿಲಿಕಲ್ಲು ದನ್ಯವಾದ ಸಮರ್ಪಿಸಿದರು.ಸುಂದರಶೆಟ್ಟಿ ಎಂಜಿರಪಲಿಕೆ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ :Kaup ಮಾರಿಗುಡಿಗೆ ಸೂರ್ಯಕುಮಾರ್ ಯಾದವ್ ಪತ್ನಿ ಭೇಟಿ
…………………………………………………………………………………………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











