ಬ್ರೇಕಿಂಗ್ ನ್ಯೂಸ್
ಸುಳ್ಯ

Sullia : ನಾಳೆ ಸುಳ್ಯಕ್ಕೆ ಬರಲಿದೆ ಕುಕ್ಕೆ ಶ್ರೀ ಸುಬ್ರಮಣ್ಯಕ್ಕೆ ಸಮರ್ಪಿಸಲಿರುವ ಬೆಳ್ಳಿರಥ

Sullia : ಸುಳ್ಯದ ಡಾ. ಕುರುಂಜಿ ವೆಂಕಟ್ರಮಣ ಗೌಡ ಮತ್ತು ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡರ ಸುಪುತ್ರ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಕಮಿಟಿ ‘ಬಿ’ಯ ಅಧ್ಯಕ್ಷರಾಗಿರುವ ಡಾ. ರೇಣುಕಾ ಪ್ರಸಾದ್ ಕೆ.ವಿ ಹಾಗೂ ಡಾ. ಜ್ಯೋತಿ ಆರ್. ಪ್ರಸಾದ್, ಪುತ್ರ ಮೌರ್ಯ ಆರ್ ಕುರುಂಜಿ, ಪುತ್ರಿ ಡಾ. ಅಭಿಜ್ಞಾ ಗೋಕುಲ್ ಮತ್ತು ಅಳಿಯ ಗೋಕುಲ್ ರವರು ಸೇರಿಕೊಂಡು ಸೇವಾ ರೂಪದಲ್ಲಿ ಶ್ರೀ ಕುಕ್ಕೆ ಸುಬ್ರಮಣ್ಯ ದೇವರಿಗೆ ಬೆಳ್ಳಿರಥವನ್ನು ಸಮರ್ಪಣೆಯನ್ನು ನ.05 ಕ್ಕೆ ಮಾಡಲಿದ್ದಾರೆ.

ಇದನ್ನೂ ಓದಿ :Nirmala Sitharaman: ತುಳು ಭಾಷೆಯ ಸಾಂಸ್ಕೃತಿಕ ವೈಭವ ಹೊಗಳಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ !

ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಕೋಟೇಶ್ವರ ಬಿ. ಲಕ್ಷ್ಮೀನಾರಾಯಣ ಮತ್ತು ಪುತ್ರ ರಾಜಗೋಪಾಲಚಾರ್ಯ ನಿರ್ಮಿಸಿದ ಬೆಳ್ಳಿರಥದ ನಿರ್ಮಾಣ ಸಂಪೂರ್ಣವಾಗಿದ್ದು ಇಂದು ರಾತ್ರಿ (ನ.03) ರಥದ ಗುತ್ತಿಪೂಜೆ ನಡೆಯಲಿದೆ. ನ.04 ಬೆಳಗ್ಗೆ 8 ಗಂಟೆಗೆ ಕೋಟೇಶ್ವರದಿಂದ ಬೆಳ್ಳಿರಥ ಯಾತ್ರೆ ಆರಂಭಗೊಳ್ಳಲಿದ್ದು ಕುಂಭಾಶಿ, ಉಡುಪಿಯಿಂದ ಸುಳ್ಯದ ತನಕ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಾಗತವನ್ನು ಸ್ವೀಕರಿಸಿ ಶ್ರೀ ಚೆನ್ನಕೇಶವ ದೇವಸ್ಥಾನ ಸುಳ್ಯಕ್ಕೆ ಬರಲಿದೆ. ನಂತರ ನ.05 ರಂದು ಸುಬ್ರಮಣ್ಯಕ್ಕೆ ತೆರಳಿರುವ ರಥಯಾತ್ರೆಗೆ ವಿವಿಧ ಭಜನಾ ತಂಡಗಳ ಭಜನೆ, ಸಾಂಸ್ಕೃತಿಕ ಮೆರವಣಿಗೆ, ಚೆಂಡೆ, ವಾದ್ಯ, ಮೇಳ, ಭಕ್ತರ ಸ್ವಾಗತದೊಂದಿಗೆ ಕ್ಷೇತ್ರಕ್ಕೆ ತಲುಪಲಿದೆ.

ವಿವಿಧ ಪೂಜೆಗಳನ್ನು ನೆರವೇರಿಸಿದ ನಂತರ, ನ.10 ರಂದು ಬೆಳ್ಳಿರಥವನ್ನು ಶ್ರೀ ಸುಬ್ರಮಣ್ಯ ದೇವರಿಗೆ ಸಮರ್ಪಿಸಲಾಗುವುದು ಎಂದು ಡಾ. ರೇಣುಕಾಪ್ರಸಾದ್ ಕೆ.ವಿ ಅವರು ತಿಳಿಸಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/FMZ3FR3jlrk?si=wTpwwQeZBjnS-vDL

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 6

You cannot copy content of this page