ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕೆಇಎ ನೇಮಕಾತಿ ಬಿಗ್ ಅಪ್ಡೇಟ್ : ಸಾವಿರಾರು ಸರ್ಕಾರಿ ಹುದ್ದೆಗಳು ಭರ್ತಿಗೆ ಸಿದ್ಧತೆ

ಬೆಂಗಳೂರು: Tulu Times l ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ರಾಜ್ಯದ 18 ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಒಟ್ಟು 11,938 ಖಾಲಿ ಹುದ್ದೆಗಳ ಭರ್ತಿಗೆ ಕೆಇಎ ಸಿದ್ಧತೆ ಆರಂಭಿಸಿದ್ದು, ನೇಮಕಾತಿ ಪ್ರಕ್ರಿಯೆಯನ್ನು ವೇಗವಾಗಿ ಹಾಗೂ ಪಾರದರ್ಶಕವಾಗಿ ಪೂರ್ಣಗೊಳಿಸುವ ಉದ್ದೇಶ ಹೊಂದಿದೆ.

ಇತ್ತೀಚಿನ ದಿನಗಳಲ್ಲಿ ಹಲವು ಸರ್ಕಾರಿ ಇಲಾಖೆಗಳು ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಲೋಕಸೇವಾ ಆಯೋಗ ಬದಲಾಗಿ ಕೆಇಎ ಮೂಲಕ ನಡೆಸಲು ಆದ್ಯತೆ ನೀಡುತ್ತಿವೆ. ಇದರಿಂದ ನೇಮಕಾತಿ ಪ್ರಕ್ರಿಯೆ ಶೀಘ್ರವಾಗಿ ಪೂರ್ಣಗೊಳ್ಳುವುದರ ಜೊತೆಗೆ ಪಾರದರ್ಶಕತೆ ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನೇಮಕಾತಿಯಲ್ಲಿ ಗೃಹ ಇಲಾಖೆ ಅತಿಹೆಚ್ಚು 7,813 ಹುದ್ದೆಗಳನ್ನು ಹೊಂದಿದೆ. ಇದರಲ್ಲಿ 3,991 ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್, 1,687 ಕೆಎಸ್‌ಆರ್‌ಪಿ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್, 1,600 ರಾಜ್ಯ ಮೀಸಲು ಪೊಲೀಸ್ ಪಡೆ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳು ಸೇರಿವೆ.

ಇದಲ್ಲದೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘನಲ್ಲಿ 1,320 ಹುದ್ದೆಗಳು ಹಾಗೂ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 706 ಹುದ್ದೆಗಳು ಭರ್ತಿಯಾಗಲಿವೆ. ಒಟ್ಟು ಹುದ್ದೆಗಳಲ್ಲಿ 9,244 ಸಾಮಾನ್ಯ ವರ್ಗದ ಹುದ್ದೆಗಳಾಗಿದ್ದು, 2,694 ಹುದ್ದೆಗಳು ಕಲ್ಯಾಣ ಕರ್ನಾಟಕ ಮೀಸಲು ವರ್ಗಕ್ಕೆ ಸೇರಿವೆ.

ಇತರೆ ಇಲಾಖೆಗಳಲ್ಲಿಯೂ ಸಾಕಷ್ಟು ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಕೃಷಿ ಇಲಾಖೆ – 945, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ – 386, ನೌಕರರ ರಾಜ್ಯ ವಿಮಾ ಯೋಜನೆ ಇಲಾಖೆ – 289, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ – 200, ಕಮಾಂಡ್ ಏರಿಯಾ ಅಭಿವೃದ್ಧಿ ಪ್ರಾಧಿಕಾರ – 112, ಕೆಆರ್‌ಐಡಿಎಲ್ – 54, ಕೆಐಎಡಿಬಿ – 44, ಕೈಮಗ್ಗ ಮತ್ತು ಜವಳಿ ಇಲಾಖೆ – 22, ಪ್ರವಾಸೋದ್ಯಮ ಇಲಾಖೆ – 18, ಅಂತರ್ಜಲ ನಿರ್ದೇಶನಾಲಯ – 17, ನೋಂದಣಿ ಇಲಾಖೆ – 10 ಹಾಗೂ ಕಾರ್ಖಾನೆ ಇಲಾಖೆ – 2 ಹುದ್ದೆಗಳು ಭರ್ತಿಯಾಗಲಿವೆ.

ರಾಜ್ಯ ಸರ್ಕಾರದ ಈ ಬೃಹತ್ ನೇಮಕಾತಿ ಅಭಿಯಾನವು ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಮಹತ್ವದ ಅವಕಾಶವಾಗಿದ್ದು, ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆಯಿದೆ. ಆಸಕ್ತ ಅಭ್ಯರ್ಥಿಗಳು ಕೆಇಎ ಪ್ರಕಟಿಸುವ ಅಧಿಕೃತ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ದಾಖಲೆಗಳು ಹಾಗೂ ಪರೀಕ್ಷಾ ಸಿದ್ಧತೆಯನ್ನು ಈಗಿನಿಂದಲೇ ಆರಂಭಿಸುವುದು ಸೂಕ್ತ.

KEA Recruitment Big Update: Thousands of government posts ready to be filled – ತುಳುಟೈಮ್ಸ್

ಇದನ್ನೂ ಓದಿ :ಅಹಂಕಾರಕ್ಕಿಂತ ಸಂಬಂಧ ದೊಡ್ಡದು: ‘ಕ್ಷಮಿಸಿ’ ಹೇಳಲು ಕಲಿಯಿರಿ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/DA3LOk_-2ik

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page