ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಇಂದು ರಾತ್ರಿಯಿಂದ ಆಧಾರ್, ಭೂಮಿ, ಆರ್‌ಟಿಒ ಸೇರಿ ಹಲವು ಸೇವೆಗಳು ಸ್ಥಗಿತ

ಬೆಂಗಳೂರು: Tulu Times l ಕರ್ನಾಟಕದ ನಾಗರಿಕರು ಬಳಸುವ ಹಲವು ಪ್ರಮುಖ ಸರ್ಕಾರಿ ಆನ್‌ಲೈನ್ ಸೇವೆಗಳು ಇಂದು (ಜೂನ್ 25) ರಾತ್ರಿ 9 ಗಂಟೆಯಿಂದ 24 ಗಂಟೆಗಳ ಕಾಲ ಲಭ್ಯವಿರುವುದಿಲ್ಲ. ರಾಜ್ಯ ಡೇಟಾ ಸೆಂಟರ್ ಮೇಲ್ದರ್ಜೆಗೇರಿಸುವ ಕಾರ್ಯದ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ಸ್ಥಗಿತ ಜಾರಿಯಾಗುತ್ತಿದೆ. ರಾಜ್ಯದ ಡಿಜಿಟಲ್ ಆಡಳಿತ ವ್ಯವಸ್ಥೆಯ ಬೆನ್ನೆಲುಬಾಗಿರುವ ರಾಜ್ಯ ಡೇಟಾ ಸೆಂಟರ್‌ನಲ್ಲಿ ಸುಮಾರು 69 ಸರ್ಕಾರಿ ಇಲಾಖೆ ಹಾಗೂ ನಿಗಮಗಳ ವೆಬ್‌ಸೈಟ್‌ಗಳು ಮತ್ತು ಆನ್‌ಲೈನ್ ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಈ ತಾಂತ್ರಿಕ ನಿರ್ವಹಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾರ್ಯದಿಂದ ಹಲವಾರು ಸಾರ್ವಜನಿಕ ಸೇವೆಗಳ ಮೇಲೆ ಪರಿಣಾಮ ಬೀಳಲಿದೆ.

24 ಗಂಟೆಗಳ ಅವಧಿಯಲ್ಲಿ ಕೆಳಕಂಡ ಸೇವೆಗಳು ಲಭ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ:
ಆಧಾರ್ ಅಪಾಯಿಂಟ್‌ಮೆಂಟ್ ಸೇವೆಗಳು
* ಭೂಮಿ
* ಮೊಬೈಲ್ ಒನ್
* ಬೆಂಗಳೂರು ಒನ್
* ಕರ್ನಾಟಕ ಒನ್
* ಸಕಾಲ
* ಇ-ಜನಸ್ಪಂದನ
* ಆರ್‌ಟಿಒ ಸಂಬಂಧಿತ ಸೇವೆಗಳು
* ಬೆಂಗಳೂರು ಟ್ರಾಫಿಕ್ ಪೊಲೀಸ್‌ರ ಆನ್‌ಲೈನ್ ದಂಡ ಪಾವತಿ ವ್ಯವಸ್ಥೆ. ಇದರ ಜೊತೆಗೆ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ.

ಮೊಹರಂ ರಜೆಯ ನಡುವೆ ಸೇವೆ ಸ್ಥಗಿತ ;
ಈ ತಾತ್ಕಾಲಿಕ ಸ್ಥಗಿತದ ವೇಳೆ ಶುಕ್ರವಾರ ಮೊಹರಂ ರಜೆ ಇರುವುದರಿಂದ ಸರ್ಕಾರಿ ಕಚೇರಿಗಳೂ ಮುಚ್ಚಿರಲಿವೆ. ಇದರಿಂದ ತುರ್ತು ಕೆಲಸಗಳಿಗಾಗಿ ಆನ್‌ಲೈನ್ ಸೇವೆಗಳನ್ನು ಬಳಸಲು ಉದ್ದೇಶಿಸಿದ್ದ ನಾಗರಿಕರಿಗೆ ಕೆಲವು ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಪ್ರಕಾರ, ಡಿಜಿಟಲ್ ಸೇವೆಗಳ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡೇಟಾ ಸೆಂಟರ್‌ನ ಸಾಮರ್ಥ್ಯ, ಭದ್ರತೆ ಮತ್ತು ಕಾರ್ಯಕ್ಷಮತೆಯನ್ನು ವೃದ್ಧಿಸಲು ಈ ಕಾರ್ಯ ಕೈಗೊಳ್ಳಲಾಗಿದೆ.
ಈ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಲ್ಲಿ:
* ತಾಂತ್ರಿಕ ನಿರ್ವಹಣೆ
* ಮೂಲಸೌಕರ್ಯ ಅಭಿವೃದ್ಧಿ
* ಸೈಬರ್ ಭದ್ರತೆ ಬಲಪಡಿಸುವುದು
* ವ್ಯವಸ್ಥೆಯ ಸಾಮರ್ಥ್ಯ ವಿಸ್ತರಣೆ. ಮುಂತಾದ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ಸರ್ಕಾರ ತುರ್ತು ಅರ್ಜಿಗಳು, ಪ್ರಮಾಣಪತ್ರಗಳು, ಭೂ ದಾಖಲೆಗಳು, ಸಾರಿಗೆ ಸೇವೆಗಳು ಹಾಗೂ ಇತರ ಆನ್‌ಲೈನ್ ವ್ಯವಹಾರಗಳನ್ನು ಇಂದು ರಾತ್ರಿ 9 ಗಂಟೆಯೊಳಗೆ ಪೂರ್ಣಗೊಳಿಸುವಂತೆ ನಾಗರಿಕರಿಗೆ ಸೂಚಿಸಿದೆ. ಮೇಲ್ದರ್ಜೆಗೇರಿಸುವ ಕಾರ್ಯ ಪೂರ್ಣಗೊಂಡ ಬಳಿಕ ರಾಜ್ಯ ಡೇಟಾ ಸೆಂಟರ್ ಹೆಚ್ಚು ಸುರಕ್ಷಿತ, ವೇಗದ ಹಾಗೂ ವಿಶ್ವಾಸಾರ್ಹ ಸೇವೆಗಳನ್ನು ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Many services including Aadhaar, Bhoomi, RTO to be suspended from tonight – ತುಳು ಟೈಮ್ಸ್

ಇದನ್ನೂ ಓದಿ : 37 ವರ್ಷ ಪುರುಷನಂತೆ ಬದುಕಿದ ಮಹಿಳೆ; ಸಮಾಜಕ್ಕೆ ಕನ್ನಡಿ ಹಿಡಿದ ಕಥೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtube.com/shorts/OMCY194x_LY?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page