ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕೇರಳ ಮುಖ್ಯಮಂತ್ರಿ ಆಗಿ ವಿ.ಡಿ. ಸತೀಶನ್ ಆಯ್ಕೆ: ಕೆಸಿ ವೇಣುಗೋಪಾಲ್‌ಗೆ ಹಿನ್ನಡೆ

ರಾಜಕೀಯ : Tulu Timesl ಭಾರತೀಯ ಕಾಂಗ್ರೆಸ್ ಪಕ್ಷವು ಕೇರಳ ರಾಜ್ಯದ ಹೊಸ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿ.ಡಿ ಸತೀಶನ್ ಅವರನ್ನು ಆಯ್ಕೆ ಮಾಡಿದೆ. ಕಳೆದ 10 ದಿನಗಳಿಂದ ಮುಂದುವರಿದಿದ್ದ ಮುಖ್ಯಮಂತ್ರಿ ಆಯ್ಕೆ ಕುತೂಹಲಕ್ಕೆ ಈ ದಿನ ತೆರೆ ಬಿದ್ದಿದೆ. 61 ವರ್ಷದ ವಿ.ಡಿ. ಸತೀಶನ್ ಅವರು ಮಾಜಿ ವಿರೋಧ ಪಕ್ಷದ ನಾಯಕರಾಗಿದ್ದು, ಕೆ.ಸಿ ವೇಣುಗೋಪಾಲ್ ಮತ್ತು ರಮೇಶ್ ಅವರ ನಡುವಿನ ಸ್ಪರ್ಧೆಯಲ್ಲಿ ಅಂತಿಮವಾಗಿ ಆಯ್ಕೆಯಾಗಿದ್ದಾರೆ. ಅವರು ಇದುವರೆಗೆ ಸಚಿವ ಸ್ಥಾನ ವಹಿಸದಿದ್ದರೂ, ಪಕ್ಷದ ಕಾರ್ಯಕರ್ತರು ಮತ್ತು ಯುಡಿಎಫ್ ಮೈತ್ರಿ ನಾಯಕರ ಭಾರೀ ಬೆಂಬಲ ಪಡೆದಿರುವುದು ವರದಿಯಾಗಿದೆ.

ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮಾತನಾಡಿದ ಸತೀಶನ್, ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಯುಡಿಎಫ್ ಬೆಂಬಲದಿಂದ ಈ ಸ್ಥಾನ ನನಗೆ ದೊರಕಿದೆ ಎಂದು ಹೇಳಿದರು. ಕೆ.ಸಿ ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಸ್ಪರ್ಧಿಯಾಗಿ ಪರಿಗಣಿಸಲಾಗುತ್ತಿತ್ತು. ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಪ್ತ ಸಹೋದ್ಯೋಗಿಯೆಂದೂ ಗುರುತಿಸಿಕೊಂಡಿದ್ದಾರೆ. ಆದರೆ ಪಕ್ಷದ ಹೈಕಮಾಂಡ್ ತೀರ್ಮಾನವನ್ನು ಒಪ್ಪಿಕೊಂಡಿರುವ ವೇಣುಗೋಪಾಲ್, ನಾನು ಸಂಪೂರ್ಣ ತೃಪ್ತನಾಗಿದ್ದೇನೆ. ಪಕ್ಷದ ನಿರ್ಧಾರಕ್ಕೆ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ಸತೀಶನ್ ಅವರಿಗೆ ಅಭಿನಂದನೆ ಸಲ್ಲಿಸಿ, ಹೊಸ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಪ್ರಜಾಸತ್ತಾತ್ಮಕ ಮೈತ್ರಿಕೂಟ ಕೇರಳ ವಿಧಾನಸಭೆ ಚುನಾವಣೆಯಲ್ಲಿ 102 ಸ್ಥಾನಗಳನ್ನು ಗೆದ್ದು ಎರಡು-ಮೂರಂಚು ಬಹುಮತ ಸಾಧಿಸಿತ್ತು. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರ ಗೆಲುವು ಸಾಧಿಸಲು ವಿಫಲವಾಗಿತ್ತು. ರಾಜಕೀಯ ವಲಯದಲ್ಲಿ ಯುಡಿಎಫ್ ಗೆಲುವನ್ನು ಸತೀಶನ್ ಅವರ ವೈಯಕ್ತಿಕ ನಾಯಕತ್ವ ಮತ್ತು ಜನಪರ ಭಾಷಣ ಶೈಲಿಗೆ ಸಿಕ್ಕ ಮಾನ್ಯತೆಯೆಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ ಹಿರಿಯ ನಾಯಕರುಗಳಾದ ಎ‌ಕೆ ಆ್ಯಂಟನಿ, ವಿ.ಎಮ್ ಸುಧೀರನ್ ಹಾಗೂ ಕೆ‌ ಮುರಳೀಧರನ್ ಕೂಡ ಸಾರ್ವಜನಿಕ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಸತೀಶನ್ ಪರ ವಾದಿಸಿದ್ದರು ಎನ್ನಲಾಗಿದೆ.

ವಿ.ಡಿ. ಸತೀಶನ್ ವೃತ್ತಿಯಿಂದ ವಕೀಲರಾಗಿದ್ದು, ಕೇರಳ ಹೈಕೋರ್ಟ್‌ನಲ್ಲಿ ವಕಾಲತ್ತು ನಡೆಸಿದ್ದಾರೆ. 2001ರಲ್ಲಿ ಮೊದಲ ಬಾರಿಗೆ ಎರ್ನಾಕುಳಂ ಜಿಲ್ಲೆಯ ಉತ್ತರ ಪರವೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕಳೆದ 25 ವರ್ಷಗಳಿಂದ ನಿರಂತರವಾಗಿ ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಇದು ಅವರ ಆರನೇ ಅವಧಿಯಾಗಿದೆ. ಅವರು ವಿದ್ಯಾರ್ಥಿ‌ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದು, ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಕೇರಳ ಸ್ಟೂಡೆಂಟ್ಸ್ ಯೂನಿಯನ್‌ನಲ್ಲಿ ಪ್ರಮುಖ ಹುದ್ದೆ ವಹಿಸಿದ್ದರು ಎನ್ನಲಾಗಿದೆ.

V.D. Satheesan elected as Kerala Chief Minister: Setback for K.C. Venugopal – ತುಳುಟೈಮ್ಸ್

ಇದನ್ನೂ ಓದಿ :ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಜಾರಿ : ಅರುಣ್ ಕುಮಾರ್ ಪುತ್ತಿಲ ಖಂಡನೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=IY2bt593Gv6oPZau

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 170

You cannot copy content of this page