ಬ್ರೇಕಿಂಗ್ ನ್ಯೂಸ್
ಕರಾವಳಿಬೆಳ್ತಂಗಡಿ

Belthangady: ಕಾರು – ಬೈಕ್‌ ಭೀಕರ ಅಪಘಾತ; ಯುವಕ ಮೃತ್ಯು

Belthangady: ಕಾರು ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್‌ ಸವಾರ ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ. ಬೆಳ್ತಂಗಡಿಯ ಕನ್ಯಾಡಿ ಸೇವಾ ಧಾಮದ ಸಮೀಪದ ಅ.29ರಂದು ಬೆಳಿಗ್ಗೆ ಅಪಘಾತ ಸಂಭವಿಸಿತ್ತು. ನಾವೂರು ಗ್ರಾಮದ ಹೊಡಿಕ್ಕಾರು ಗಂಗಯ್ಯ ಎಂಬವರ ಪುತ್ರ, ಚಂದ್ರಹಾಸ (28) ಮೃತಪಟ್ಟವರು.

ಚಂದ್ರಹಾಸ ಅವರು ಸತೀಶ್ ಎಂಬವರ ಜತೆ ಸೇರಿ ಟೈಲ್ಸ್ ಹಾಕುವ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಎಂದಿನಂತೆ ಬೆಳಿಗ್ಗೆ ಧರ್ಮಸ್ಥಳ ಕಡೆ ಕೆಲಸಕ್ಕಾಗಿ ತನ್ನ ಬೈಕ್‌ನಲ್ಲಿ ಹೋಗುತ್ತಿರುವ ಸಂದರ್ಭದ ಅಪಘಾತ ನಡೆದಿದೆ.

ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಚಂದ್ರಹಾಸ್ ಅವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಿದೆ ಸಾವನ್ನಪ್ಪಿದ್ದಾರೆ.

ಚಂದ್ರಹಾಸ ಅವರ ಇಬ್ಬರು ಸಹೋದರಿಯರಿಗೆ ವಿವಾಹವಾಗಿದೆ. ಇವರ ತಂದೆ, ತಾಯಿ ವೃದ್ಧರಾಗಿದ್ದು, ಇವರ ದುಡಿಮೆಯಿಂದಲೇ ಜೀವನಕ್ಕೆ ಆಧಾರವಾಗಿತ್ತು. ಅವಿವಾಹಿತರಾಗಿದ್ದ ಚಂದ್ರಹಾಸ ಉತ್ತಮ ಕಬ್ಬಡಿ ಆಟಗಾರರಾಗಿದ್ದರು.

ಇದನ್ನೂ ಓದಿ: Uppinangady: ಕಳ್ಳತನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ – ಪ್ರಮುಖ ಸುಳಿವು ಪತ್ತೆ

========================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess  

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 39

You cannot copy content of this page