ಬ್ರೇಕಿಂಗ್ ನ್ಯೂಸ್
ಕರ್ನಾಟಕಧಾರ್ಮಿಕ

ಸಾರ್ವಜನಿಕರ ಮುಂದೆ ನಿಂತು ಮಾತನಾಡುವಾಗ ನಾಲಗೆ ಮೇಲೆ ಹತೋಟಿ ಇರಲಿ:‌ ರಣವೀರ್ ಸಿಂಗ್‌ಗೆ ಕೋರ್ಟ್‌ ವಾರ್ನಿಂಗ್!

ಕರ್ನಾಟಕ: Tulu Times | ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ದ (ಐಎಫ್‌ಎಫ್‌ಐ) ಸಮಾರೋಪ ಸಮಾರಂಭದಲ್ಲಿ ರಣವೀರ್‌ ಸಿಂಗ್‌, ‘ಕಾಂತಾರ ಚಾಪ್ಟರ್‌-1′ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ನನ್ನ ವಿರುದ್ಧ ನಗರದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದಾಖಲಾಗಿರುವ ಖಾಸಗಿ ದೂರು ಮತ್ತು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ರಣವೀರ್‌ ಸಿಂಗ್‌ (41) ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ  ರಣವೀರ್ ಸಿಂಗ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ರಣವೀರ್‌ ಸಿಂಗ್‌ ಗೆ ಕೋರ್ಟ್‌ , ನೀವು ರಣವೀರ್‌ ಸಿಂಗ್‌ ಅಥವಾ ಸೂಪರ್‌ ಸ್ಟಾರ್ ಇರಬಹುದು. ಆದರೆ, ಸಾರ್ವಜನಿಕರ ಮುಂದೆ ನಿಂತು ಮಾತನಾಡುವಾಗ ನಾಲಗೆ ಮೇಲೆ ಹತೋಟಿ ಇಟ್ಟುಕೊಂಡಿರಬೇಕು ಎಂದಿದೆ. ಜನರ ಮನಸ್ಸಿನಿಂದ ನೆನ‍ಪುಗಳನ್ನು ಅಳಿಸಬಹುದು. ಆದರೆ ಇಂಟರ್‌ನೆಟ್‌ನಿಂದ ಅಳಿಸಲಾಗದು ಎಂಬುದನ್ನು ಮರೆಯಬೇಡಿ. ನೀವು ಸೂಪರ್‌ ಸ್ಟಾರ್‌ ಆಗಿದ್ದರೇನಂತೆ? ಕಾನೂನಿಗೆ ಮಿಗಿಲಾದವರೇನೂ ಅಲ್ಲ ಎಂದಿದೆ. ಇನ್ನು ಕರಾವಳಿ ಭಾಗದ ಜನರ ಪಾಲಿನ ಪವಿತ್ರ ದೈವರಾಧನೆ. ರಿಷಬ್‌ ಅವರನ್ನು ಮೆಚ್ಚಿ ಮಾತಾಡುವ ಜೊತೆಗೆ ನೀವು ಅವರ ನಟನೆಯನ್ನು ಮಹಿಳಾ ದೆವ್ವ ಎಂದು ಅಣಕ ಮಾಡಿದ್ದೀರಿ. ಇವೆಲ್ಲಾ ನಿಮಗೆ ಗೊತ್ತಿಲ್ಲದೆ ಮಾತಾಡಿದ್ದೀರಿ ಎಂದರೂ, ಜನರ ಮೇಲೆ ಪ್ರಭಾವ ಬೀರಬಲ್ಲ ನಟ ನೀವು. ನಾನೇನೇ ಮಾತಾಡಿದರೆ ಜನರ ಮನಸ್ಸಿನಲ್ಲಿ ಬೇರೂರುತ್ತದೆ ಎಂಬುದರ ಅರಿವು ನಿಮಗಿರಬೇಕಿತ್ತು. ಎಂದಿದೆ.

ವಾದ ಆಲಿಸಿದ ನ್ಯಾಯಪೀಠ, ‘ರಣವೀರ್‌ ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿನೊಂದಿಗೆ ಮುಂದಿನ ವಿಚಾರಣೆವರೆಗೂ ಪ್ರಾಸಿಕ್ಯೂಷನ್‌ ರಣವೀರ್‌ ವಿರುದ್ಧ ಆತುರದ ಕ್ರಮಕ್ಕೆ ಮುಂದಾಗಬಾರದು’ ಎಂದು ಆದೇಶಿಸಿತು. ಧಾರ್ಮಿಕ ಸಂಗತಿಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಜನರ ಧಾರ್ಮಿಕ ಸಂವೇದನೆಗಳ ಮೇಲೆ ಸವಾರಿ ಸಲ್ಲದು ಎಂದು ಕೋರ್ಟ್‌ ತಿಳಿಸಿದೆ.

Court warns Ranveer Singh to control his tongue when speaking in public!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page