ಬ್ರೇಕಿಂಗ್ ನ್ಯೂಸ್
ಕರ್ನಾಟಕಪುತ್ತೂರು

ಪೆರಿಯಶಾಂತಿಯಲ್ಲಿ ಸಜ್ಜಾಗಿದೆ ಆನೆ ದಾಟು !

ಪೆರಿಯಶಾಂತಿ: Tulu Times | ರಾಷ್ಟ್ರೀಯ ಹೆದ್ದಾರಿ ಮಂಗಳೂರು -ಬೆಂಗಳೂರು ರಸ್ತೆಯಾದ ಪೆರಿಯಶಾಂತಿಯಲ್ಲಿ ಆನೆದಾಟು ನಿರ್ಮಾಣವಾಗಿದೆ.  ಹೆದ್ದಾರಿಯ ಮೀಸಲು ರಕ್ಷಿತಾರಣ್ಯದ ನಡುವೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಆನೆ ದಾಟಲು ಮಳೆ ನೀರು ಹರಿಯುವ ತೋಡನ್ನೇ ಆನೆ ದಾಟು ನಿರ್ಮಿಸಲಾಗಿದೆ.

ಇದನ್ನೂ ಓದಿ: ದಲಿತ ವೃದ್ಧೆಗೆ ಮನೆ ಕಟ್ಟಿಸಿದ ಸುಳ್ಯದ ಮುಸ್ಲೀಂ ಯುವಕರು !

ನೆಲ್ಯಾಡಿಯ  ಮಣ್ಣ ಗುಂಡಿಯಿ0ದ ಗುಂಡ್ಯ ತನಕ ಮಂಜೂರಾಗಿರುವ ಮೂರು ಆನೆದಾಟು ಯೋಜನೆಗಳಲ್ಲಿ ಪೆರಿಯಶಾಂತಿ ಮತ್ತು ಅಡ್ಡಹೊಳೆಯಲ್ಲಿ ಕಾಮಗಾರಿ ಕಂಪ್ಲೀಟ್‌ ಆಗಿದೆ. ಇನ್ನು ಆನೆದಾಟು ಯೋಜನೆಯನ್ನು ತೋಡಿನಲ್ಲೇ ನಿರ್ಮಿಸಲಾಗಿದೆ. ಪೆರಿಯಶಾಂತಿ ಎರಡು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕಿಸುವ ರಸ್ತೆ.ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಕವಲೊಡೆದಿರುವ ರಸ್ತೆಯ ಕೆಲವು ಮೀಟರ್‌ದೂರದಲ್ಲಿ ಹರಿಯುವ ತೋಡೇ ಆನೆ ದಾಟಲು ಬಳಕೆಯಾಗಲಿದೆ. ಇದು ಮಳೆ ನೀರು ಹರಿದು ಹೋಗುವ ಜತೆಗೆ ಕಾಡು ಪ್ರಾಣಿಗಳ ದಾಹ ನೀಗಿಸಲು, ಜತೆಗೆ ಒಂದು ಬದಿಯಿಂದ ಇನ್ನೊಂದು ಬದಿಗೆ ಕಾಡಾನೆ ಸಹಿತ ಇತರ ಪ್ರಾಣಿಗಳು ದಾಟಲು ಆನೆದಾಟು ಆಗಿಯು ಉಪ ಯೋಗಿ ಸಲಾಗಿದೆ.

ಆನೆದಾಟು 12 ಅಡಿ ಎತ್ತರ ಮತ್ತು ಸುಮಾರು 70 ಮೀ ಅಗಲವಿದೆ. 3 ಕಡೆ ಪರಸ್ಪರ 15 ಮೀ ಅಂತರದಲ್ಲಿ ಪಿಲ್ಲರ್‌ ಅಳವಡಿಸಿ ದಾಟು ನಿರ್ಮಿಸಲಾಗಿದೆ. ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಳೆಂಜ, ಶಿಶಿಲ, ರೆಖ್ಯ, ಪೋರ್ಕಳ, ಗುಂಡ್ಯ, ಶಿರಾಡಿ, ಅಡ್ಡಹೊಳೆ, ಬಂದಾರು ಪ್ರದೇಶದಲ್ಲಿ 10ಕ್ಕೂ ಅಧಿಕ ಆನೆಗಳು ಇವೆ. ಮಣ್ಣಗುಂಡಿಯಿಂದ ಅಡ್ಡಹೊಳೆ ತನಕ ರಸ್ತೆ ಇಕ್ಕೆಲೆಗಳಲ್ಲಿ ಮಂಗಗಳು ಆಹಾರಕ್ಕಾಗಿ ವಾಹನ ಸವಾರರು, ಪ್ರಯಾಣಿಕರನ್ನು ಕಾಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಪೆರಿಯಶಾಂತಿ ಬಳಿ ಹಿಂಡು ಹಿಂಡು ವಾನರ ಪಡೆ ಇದ್ದು ಪುಟ್ಟ ಪುಟ್ಟ ಮರಿ ಮಂಗಗಳ ಜತೆಗೆ ಹೆದ್ದಾರಿಗೆ ನುಗ್ಗುತ್ತಿದೆ.

The elephant crossing is ready in Periyashanti!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 156

You cannot copy content of this page