ಬ್ರೇಕಿಂಗ್ ನ್ಯೂಸ್
ದೇಶ

Shabarimala ಚಿನ್ನ ಕಳ್ಳತನ ಪ್ರಕರಣ: ಬೆಂಗಳೂರು ಮೂಲದ ಉದ್ಯಮಿ ಬಂಧನ

Shabarimala: ಶಬರಿಮಲೆ ದೇವಸ್ಥಾನದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಎಸ್‌ಐಟಿ ಬಂಧಿಸಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಶುಕ್ರವಾರ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಯನ್ನು ಬಂಧಿಸಿದೆ.

ಎಸ್‌ಐಟಿಯ ಸಿದ್ಧಪಡಿಸಿದ ಎರಡು ಎಫ್‌ಐಆರ್‌ಗಳಲ್ಲಿ ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಎ1 ಆರೋಪಿ. ಈತನನ್ನು ಎಸ್‌ಐಟಿ ಅಧಿಕಾರಿಗಳು ಸ್ವಗೃಹದಲ್ಲಿ ಬಂಧಿಸಿದ್ದಾರೆ. ಅಲ್ಲಿಂದ ತಿರುವನಂತಪುರದ ಅಪರಾಧ ಶಾಖೆಯ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆಯನ್ನು ನಡೆಸಿದ್ದಾರೆ.

ವಿಚಾರಣೆ ನಂತರ ಅವರನ್ನು ಪತ್ತನಂತಿಟ್ಟದ ರನ್ನಿಯಲ್ಲಿರುವ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಅಕ್ಟೋಬರ್‌ 30ರವರೆಗೆ ಕಸ್ಟಡಿಗೆ ಒಪ್ಪಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಈ ಎಸ್​​ಐಟಿ ತಂಡದ ರಚನೆ ಮಾಡಲಾಗಿದೆ. ಅಷ್ಟಲ್ಲದೆ ಎಸ್‌ಐಟಿ ಅಧಿಕಾರಿಗಳು ಸಾರ್ವಜನಿಕರಿಗೆ ಅಥವಾ ಮಾಧ್ಯಮದವರಿಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದೆ. ಹೀಗಾಗಿ ಎಸ್‌ಐಟಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ದ್ವಾರಪಾಲಕರಿಗೆ ಚಿನ್ನದ ಲೇಪನ ಮಾಯ
1999 ರಲ್ಲಿ, ಟಿಡಿಬಿ ಪ್ರವೇಶದ್ವಾರದಲ್ಲಿ ದ್ವಾರಪಾಲಕರಿಗೆ ಚಿನ್ನದ ಲೇಪನ ಮಾಡಿಸಲಾಗಿತ್ತು. ಉದ್ಯಮಿ ವಿಜಯ್ ಮಲ್ಯ 30 ಕೆಜಿ ಚಿನ್ನವನ್ನು ನೀಡಿದ್ದರು. ದ್ವಾರಪಾಲಕ ವಿಗ್ರಹಗಳನ್ನು ಮಾತ್ರ ಮುಚ್ಚಲು ಐದು ಕಿಲೋಗ್ರಾಂಗಳಷ್ಟು ಚಿನ್ನವನ್ನು ಬಳಸಲಾಯಿತು ಮತ್ತು ಉಳಿದದ್ದನ್ನು ದೇವಾಲಯದ ಇತರ ವೈಶಿಷ್ಟ್ಯಗಳನ್ನು ಲೇಪಿಸಲು ಬಳಸಲಾಗಿತ್ತು.

2019 ರಲ್ಲಿ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ದ್ವಾರಪಾಲಕರ ವಿಗ್ರಹಗಳ ಚಿನ್ನದ ಲೇಪಿತ ತಾಮ್ರದ ಫಲಕಗಳು ಮತ್ತು ಗರ್ಭಗುಡಿಯ ಬಾಗಿಲು ಚೌಕಟ್ಟುಗಳನ್ನು ಪುನಃಸ್ಥಾಪಿಸಲು ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಎಂಬಾತನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

ಅದರಂತೆ ಎಲೆಕ್ಟ್ರೋಪ್ಲೇಟಿಂಗ್‌ ಪ್ರಕ್ರಿಯೆ ಪೂರ್ಣಗೊಂಡ ಚಿನ್ನದ ಫಲಕಗಳನ್ನು ಹಿಂತಿರುಗಿಸಿದ್ದಾರೆ. ಅವುಗಳನ್ನು ಪಾಟಿಗೆ ಹಸ್ತಾಂತರಿಸಿದಾಗ ಇದ್ದ ಮೊದಲು ತೂಕಕ್ಕಿಂತ 4.54 ಕೆಜಿ ಕಡಿಮೆಯಿತ್ತು. ಈ ವ್ಯತ್ಯಾಸವನ್ನು ಟಿಡಿಬಿ ನಿರ್ಲಕ್ಷಿಸಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Udupi: ನೇಣಿಗೆ ಶರಣಾದ ಯುವ ಪ್ರೇಮಿಗಳು


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page