ಬೆಂಗಳೂರು: ಕಾಂಗ್ರೆಸ್ ಸರಕಾರ Rssban ಮಾಡಿ ಸರಕಾರಿ ಶಾಲೆಗಳಿಂದ ಸಾರ್ವಜನಿಕರನ್ನು ದೂರ ಇಡಲು ಹುನ್ನಾರ ನಡೆಸಿದೆ ಎಂದು ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿರುವ ಸರಕಾರಿ, ಅನದಾನಿತ ಶಾಲೆ ಹಾಗೂ ಇತರೆ ಸರ್ಕಾರಿ ಜಾಗಗಳಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸುವುದಕ್ಕೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನೇ ನಿರಾಕರಿಸುವುದಕ್ಕೆ ಸರ್ಕಾರ ಮುಂದಾಗಿದೆಸರ್ಕಾರಿ ಶಾಲಾ ಆವರಣದಲ್ಲಿ ಚಟುವಟಿಕೆ ನಡೆಸುವುದಕ್ಕೆ ಖಾಸಗಿ ಸಂಸ್ಥೆಗಳಿಗೆ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯ ಮಾಡಿದೆ. ಖಾಸಗಿ ವ್ಯಕ್ತಿಗಳ ಪ್ರವೇಶ ನಿರ್ಬಂಧ ಮಾಡಿರುವುದರ ಹಿಂದಿನ ಉದ್ದೇಶ ಏನು ? ಎಂದು ಅವರು ಪ್ರಶ್ನಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿನ ಸರಕಾರಿ ಶಾಲೆಗಳು ಕೇವಲ ಕಲಿಕಾ ಕೇಂದ್ರ ಅಷ್ಟೇ ಅಲ್ಲಾ. ಅಲ್ಲಿ ವಾರಾಂತ್ಯದಲ್ಲಿ ಸಂಘ- ಸಂಸ್ಥೆಗಳ ಸಭೆ ನಡೆಯುತ್ತದೆ. ಸಾಂಸ್ಕ್ರತಿಕ ಚಟುವಟಿಕೆಗಳು ನಡೆಯುತ್ತದೆ. ಕ್ರೀಡಾಕೂಟಗಳು ನಡೆಯುತ್ತದೆ. ಹಾಗಾದರೆ ಸರಕಾರ ಇದೆಲ್ಲವನ್ನೂ ಬ್ಯಾನ್ ಮಾಡುತ್ತದೆಯೇ ? ಎಂದಿದ್ದಾರೆ.ಸರಕಾರಿ ಶಾಲೆಯ ಆವರಣವನ್ನು ನಿರ್ಬಂಧಿಸುವುದು ಅಂದ್ರೆ ಸಾರ್ವಜನಿಕರಿಂದ ಅದನ್ನು ದೂರ ಇಡುವುದು. ಕಾಲಕ್ರಮೇಣ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಸರ್ಕಾರದ ಹುನ್ನಾರ ಎಂದು ಅನಿಸುತ್ತಿದೆ. ಇದು ಸರಕಾರದ ಬಾಲಿಶ ನಿರ್ಧಾರ ಅಲ್ಲದೇ ಮತ್ತೇನು ಅಲ್ಲ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ:Mangaluru: ಅವ್ಯವಹಾರದ ಕೂಪವಾಯಿತೇ ಪಿಳಿಕುಳ ನಿಸರ್ಗಧಾಮ? ಲೋಕಾಯುಕ್ತ ದಾಳಿ\
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











