ಬ್ರೇಕಿಂಗ್ ನ್ಯೂಸ್
ತುಳು ಟಾಕೀಸ್

kanthara chapter1 ನೋಡಿದವರಿಗೆ ಪ್ರತಿಕ್ರಿಯಿಸುವ ಹಕ್ಕಿರುತ್ತದೆ-ರಿಷಬ್ ಶೆಟ್ಟಿ!

Kanthara chapter1 ಸಿನಿಮಾ ರಿಲೀಸಾಗಿ ಕಲೆಕ್ಷನ್ ನಾಗಲೋಟ ಮುಂದುವರಿಸುತ್ತಿದೆ.ಇದುವರೆಗೆ ರಿಲೀಸಾಗಿರೋ ಸಿನಿಮಾ ಕಲೆಕ್ಷನ್ ದಾಖಲೆಯನ್ನು ಕಾಂತಾರ ಮುರಿಯೋ ಎಲ್ಲಾ ಲಕ್ಷಣಗಳು ಕಾಣಿಸ್ತಿದೆ.ಕೆ.ಜಿ.ಎಫ್ ಸಿನಿಮಾದ ದಾಖಲೆ ಮುರಿಯುವತ್ತ ಕಾಂತಾರ ಮುನ್ನುಗ್ತಿದೆ.ಈ ಸಿನಿಮಾ ಶೂಟಿಂಗ್ ಸಮಯದಿಂದ ಶುರುವಾಗಿ ಬಿಡುಗಡೆಯಾದ ಮೇಲೂ ಒಂದಿಲ್ಲೊಂದು ವಿವಾದಕ್ಕೆ ಸಿಗುತ್ತಿದೆ.ಚಿತ್ರ ಬಿಡುಗಡೆಯಾದ ಮೇಲೆ ಸಿನಿಮಾ ನೋಡಿದ ಮಂದಿ ದೈವದಂತೆ ನರ್ತನ ಮಾಡಿದ್ದರು.

ದೈವದ ವೇಷಭೂಷಣ ಧರಿಸಿ ಕುಣಿತ ಶುರುಮಾಡಿದ್ದರು ಇದು ತುಳುನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.ರಿಷಬ್ ಶೆಟ್ಟಿಯವರಿಂದ ತುಳುನಾಡಿನ ದೈವಗಳಿಗೆ ಅಪಚಾರವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.ದೈವವನ್ನು ಕಾಲ್ಪನಿಕ ಕತೆಯಲ್ಲಿ ತೋರಿಸಿ,ಗಂಭೀರತೆಯನ್ನು ಹಾಳು ಮಾಡಲಾಗಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

ದೈವ ಯಾವತ್ತೂ ಭಕ್ತರನ್ನು ಕಾಯುತ್ತದೆ.ಯಾವತ್ತೂ ಸಾಯಿಸುವುದಿಲ್ಲ ಆದರೆ ಕಾಂತಾರ ಚಿತ್ರದಲ್ಲಿ ದೈವವೇ ಬಂದು ಸಾಯಿಸುವಂತ ಸನ್ನಿವೇಶಗಳಿವೆ.ಈ ರೀತಿಯಾಗಿ ದೈವವನ್ನು ತೋರಿಸಿರುವ ರೀತಿ ಸರಿಯಿಲ್ಲ ಎಂಬ ಅಭಿಪ್ರಾಯಗಳನ್ನು ದೈವಾರಾಧಕರು ವ್ಯಕ್ತಪಡಿಸಿದ್ದಾರೆ.ಕಾಂತಾರ ಸಿನಿಮಾಕ್ಕೆ ದೊಡ್ಡ ಮಟ್ಟದ ಟೀಕೆ ಎದುರಾದರೂ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಕೊಟ್ಟಿರ್ಲಿಲ್ಲ.ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದರ್ಶನ ನೀಡಿದ ರಿಷಬ್ ಶೆಟ್ಟಿ ಮಾಧ್ಯಮದವರೊಂದಿಗೆ ಮಾತಾನಾಡಿದ್ರು ಸಿನಿಮಾಕ್ಕೆ ಉತ್ತಮ ಪ್ರದರ್ಶನ ಸಿಕ್ಕಿದ್ದು ತುಂಬಾನೆ ಖುಷಿಯಾಗಿದೆ ಎಂದಿದ್ದಾರೆ.ಸಿನಿಮಾದಲ್ಲಿ ದೈವವನ್ನು ತೋರಿಸಿರುವ ರೀತಿಗೆ ಟೀಕೆ ವ್ಯಕ್ತವಾಗುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ್ರು.

ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಟೀಕಿಸುವ ಹಕ್ಕಿದೆ.ಒಬ್ಬೊಬ್ಬರು ಒಂದೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು ಎಂದಿದ್ದಾರೆ.
ಸಿನಿಮಾ ರಿಲೀಸಾಗುವ ಸಮಯದಲ್ಲೇ ದೈವನರ್ತನ ಮಾಡುವುದು ಅನುಕರಣೆ ಮಾಡದಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದೆ.ಹೊಂಬಾಳೆ ಸಂಸ್ಥೆಯು ಇದರ ಬಗ್ಗೆ ಮನವಿ ಮಾಡಿತ್ತು.ಆದರೆ ಕೆಲವರು ದೈವದ ವೇಷ ಹಾಕಿ ಕಾಣಿಸ್ಕೊಂಡಿದ್ದಾರೆ.ದೈವನರ್ತನ ವನ್ನು ಅನುಕರಣೆ ಮಾಡಿದ್ದಾರೆ ಇದು ನನಗೆ ಬೇಸರ ತರಿಸಿದೆ ಎಂದಿದ್ದಾರೆ.

ದೈವರಾಧಕರು ಸಿನಿಮಾ ಮಾಡಿದ ಕ್ರಮವನ್ನು ಟೀಕಿಸುತ್ತಿದ್ದಾರೆ.ನನ್ನ ಮತ್ತು ದೈವದ ಭಕ್ತಿ ನನಗೆ ಮತ್ತು ದೈವಕ್ಕೆ ಮಾತ್ರ ಗೊತ್ತಿರಲೂ ಸಾಧ್ಯ ಎಂದಿದ್ದಾರೆ.
ಸಿನಿಮಾ ಕಲೆಕ್ಷನ್ ಬಗ್ಗೆ ಕೇಳಿದಾಗ ಅದು ನನ್ನ ವಿಷಯವಲ್ಲ ನಿರ್ಮಾಪಕರಲ್ಲಿ ಕೇಳಿ ಎಂದಿದ್ದಾರೆ.ನಮ್ಮ ತಂಡದ ಕೆಲಸವನ್ನು ಜನ ಮೆಚ್ಚಿಕೊಂಡಿದ್ದಾರೆ. ಅದೇ ಖುಷಿಯ ವಿಚಾರ ಎಂದಿದ್ದಾರೆ.
ಸಿನಿಮಾದ ಗೆಲುವಿನಲ್ಲಿ ನಿರ್ಮಾಪಕರಾದ ವಿಜಯ್ ಕಿರಗಂದೂರು ನಮ್ಮ ಶಕ್ತಿಯಾಗಿ ನಿಂತಿದ್ದಾರೆ.ಎಲ್ಲರ ತಂಡದ ಶ್ರಮವನ್ನು ಜನ ಮೆಚ್ಚಿಕೊಂಡಿದ್ದಾರೆ.ಅದುವೇ ಸಂತೋಷದ ವಿಚಾರ ಎಂದಿದ್ದಾರೆ.

ಇದನ್ನೂ ಓದಿ:ಮಧುವೇಹಿಗಳೂ ಸ್ವೀಟ್‌ ತಿನ್ನಬಹುದು.! ಹಬ್ಬದಂದು ಬಾಯಿ ಸಿಹಿ ಮಾಡಿಕೊಳ್ಳಿ..
………………………………………………………………………………………………………..
ವೀಡೀಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

You cannot copy content of this page