ಪುತ್ತೂರು : Tulu Times| ಪಠ್ಯದಲ್ಲಿ ಸಂಸ್ಕೃತ ಭಾಷೆ ಬಂದ ನಂತರ ಸಂಸ್ಕೃತ ಆಸಕ್ತ ವಿದ್ಯಾರ್ಥಿಗಳು ಕನ್ನಡ, ಹಿಂದಿಯಂತೆ ಸಂಸ್ಕೃತವನ್ನು ಆಯ್ಕೆ ಮಾಡಿ ಅದರಲ್ಲಿ ಆಳವಾದ ಅಧ್ಯಯನ ಮಾಡುತ್ತಾರೆ. ಸಂಸ್ಕೃತ ಭಾಷಾ ವಿದ್ಯಾರ್ಥಿಗಳು ಕೇವಲ ಒಂದು ಭಾಷೆಯನ್ನು ಕಲಿಯುವುದಲ್ಲದೆ, ಭಾರತದ ದಾರ್ಶನಿಕತೆ, ನೈತಿಕತೆ, ಜೀವನ ಮೌಲ್ಯಗಳು ಮತ್ತು ವೈಜ್ಞಾನಿಕ ಚಿಂತನೆಗಳನ್ನೂ ಅರ್ಥಮಾಡಿಕೊಳ್ಳುತ್ತಾರೆ. ಸಂಸ್ಕೃತ ಅಧ್ಯಯನದಿಂದ ಸ್ಮರಣಶಕ್ತಿ, ತಾರ್ಕಿಕ ಚಿಂತನೆ ಹಾಗೂ ಶುದ್ಧ ಉಚ್ಚರಣಾ ಕೌಶಲ್ಯಗಳು ವೃದ್ಧಿಯಾಗುತ್ತವೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
ಪುತ್ತೂರಿನ ಅಕ್ಷಯ ಪದವಿ ಕಾಲೇಜಿನ ಸಂಸ್ಕೃತ ಭಾಷಾ ವಿದ್ಯಾರ್ಥಿಗಳಿಗೆ ಲಭಿಸಿದ ವಿದ್ಯಾರ್ಥಿವೇತನ ;
ಕೇಂದ್ರ ಸರ್ಕಾರವು ಸಂಸ್ಕೃತ ಭಾಷಾ ಸಂವರ್ಧನೆ ಹಾಗೂ ಬೆಳವಣಿಗೆಗಾಗಿ ದೇಶದ ಆಯ್ದ ಸಂಸ್ಕೃತ ಭಾಷಾ ವಿದ್ಯಾರ್ಥಿಗಳಿಗೆ ದೆಹಲಿಯ ಸೆಂಟ್ರಲ್ ಸಂಸ್ಕೃತ ವಿಶ್ವವಿದ್ಯಾಲಯದ ಮೂಲಕ ನೀಡುವ 2024-25 ನೇ ಸಾಲಿನ ರಾಷ್ಟ್ರೀಯ ಸಂಸ್ಕೃತ ವಿದ್ಯಾರ್ಥಿವೇತನ ಬಿಡುಗಡೆಯಾಗಿದ್ದು, ಪುತ್ತೂರಿನ ಅಕ್ಷಯ ಪದವಿ ಕಾಲೇಜಿನ ನಾಲ್ಕು ಜನ ಸಂಸ್ಕೃತ ಭಾಷಾ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನವನ್ನು ಪಡೆದಿರುತ್ತಾರೆ. ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದು, ವಿದ್ಯಾರ್ಥಿ ವೇತನಕ್ಕೆ ರಕ್ಷಾ ಕೆ.ಆರ್., ಅಪೇಕ್ಷ ಕೆ. ಜೆ. ಶೆಟ್ಟಿ, ಮಮಿತಾ ಮತ್ತು ಯಶ್ವಿನಿ ಆಯ್ಕೆಯಾಗಿದ್ದು, ಇವರಿಗೆ ಒಟ್ಟು 32 ಸಾವಿರ ರೂ. ವಿದ್ಯಾರ್ಥಿ ವೇತನವು ಲಭಿಸಿವೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
Scholarships awarded to Sanskrit language students of Akshaya Degree College, Puttur -ತುಳು ಟೈಮ್ಸ್
ಇದನ್ನೂ ಓದಿ :‘ವಂದೇ ಭಾರತ್ ಎಕ್ಸ್‌ಪ್ರೆಸ್’ ಮಂಗಳೂರಿಗೆ ಬರಲಿರುವ ಯೋಜನೆ ಯಾವಾಗ ?
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Md1OEd9glA4?si=Id8I47Jb32eujgtm











