ಬ್ರೇಕಿಂಗ್ ನ್ಯೂಸ್
ಕರ್ನಾಟಕಪುತ್ತೂರು

ಪುತ್ತೂರು: ಮಗು ಆಗಿ 6 ತಿಂಗಳಾದರೂ ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲ..! ಈಕೆಯ ನೋವು ಕೇಳೋರಿಲ್ಲ

ಪುತ್ತೂರು: Tulu Times | ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ.ರಾವ್ ಯುವತಿಯೊಬ್ಬಳನ್ನು ಪ್ರೀತಿಸಿ,  ಮದುವೆಯಾಗುವೆ ಎಂದು ನಂಬಿಸಿ, ಗರ್ಭವತಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ಥೆ ಯುವತಿ ಮಗುವಿಗೆ ಜನ್ಮ ನೀಡಿ ಇದೀಗ ಅಳಲು ತೋಡಿಕೊಳ್ಳುತ್ತಿದ್ದಾಳೆ.

ಪ್ರಕರಣ ಏನು..?

ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್,  ಹಿಂದೂ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ನಂತರ ವಂಚಿಸಿದ ಆರೋಪ ಕೇಳಿಬಂದಿತ್ತು. ಗರ್ಭವತಿಯಾಗಿದ್ದ ಯುವತಿಯನ್ನು ಮದುವೆಯಾಗುವಂತೆ ಸಂಧಾನ ಮಾಡಿಸಲಾಗಿತ್ತು.ಬಿಜೆಪಿಯ ಪ್ರಮುಖ ನಾಯಕರು, ಆರ್​​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್​ ಸೇರಿ ಅನೇಕರು ಸಂಧಾನಕ್ಕೆ ಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ಡಿಎನ್​​ಎ ಟೆಸ್ಟ್ ಮಾಡಿ, ಕೃಷ್ಣ ಜೆ.ರಾವ್ ಮಗುವಿನ ತಂದೆ ಎಂಬುದು ಸಾಬೀತಾದರೂ ಆತ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.  ಇದೀಗ, ಪುತ್ತೂರಿನ ಯುವತಿಗೆ ಮಗು ಆಗಿ 6 ತಿಂಗಳಾದರೂ ನ್ಯಾಯ ಸಿಗಲಿಲ್ಲ ಎಂದು ಯುವತಿ ನೋವಿನಲ್ಲಿದ್ದಾಳೆ.

ಯುವತಿಯ ತಾಯಿ ನ್ಯಾಯಕ್ಕಾಗಿ ಕಣ್ಣೀರು!

ಮೊದಲು, ಒಪ್ಪದೆ ನಂತರ ಮದುವೆಯಾಗಲು ಒಪ್ಪಿದ್ದ, ಆದರೆ, ಆತನಿಗೆ 21 ವರ್ಷ ವಯಸ್ಸು ಪೂರ್ಣವಾಗದ ಕಾರಣ,  ನಂತರ ಮದುವೆ ಮಾಡುವುದಾಗಿ ಆತನ ತಂದೆ ಜಗನ್ನಿವಾಸ ರಾವ್ ಹೇಳಿದ್ದರು. ಮಗು ಆದ ಬಳಿಕ ಈತ ಮದುವೆಯಾಗಲ್ಲ ಎಂದು ನಿರಾಕರಣೆ ಮಾಡಿದ್ದ.  ಬಳಿಕ ಬಂಧನಕ್ಕೊಳಗಾಗಿದ್ದ ಕೃಷ್ಣ ರಾವ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನಂತರ ನಡೆದ ಡಿಎನ್‌ ಎ ಪರೀಕ್ಷೆಯ ನಂತರ, ಕೃಷ್ಣ ಜೆ.ರಾವ್ ಮಗುವಿನ ತಂದೆ ಎಂಬುದು ದೃಢಪಟ್ಟಿತ್ತು.  ಕಳೆದ ಮೂರು ತಿಂಗಳಿನಿಂದ ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಅವರ ನೇತೃತ್ವದಲ್ಲಿ  ಸಂಧಾನ ಮಾತುಕತೆ ನಡೆದಿತು. ಇದೀಗ ಯುವತಿಯ ಕುಟುಂಬ ‘ಹಣದ ಆಮಿಷ ತೋರಿಸಿದರು. ನ್ಯಾಯ ಸಿಗಲಿಲ್ಲ. ಈಗ ಕಾನೂನು ಹೋರಾಟವೇ ನಮ್ಮ ದಾರಿ’ ಎಂದು ಹೇಳಿದ್ದಾರೆ.

Puttur: Even after 6 months as a child, the victim has not received justice..! No one listens to her pain.- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess‌

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 161

You cannot copy content of this page