ಬೆಂಗಳೂರು : Tulu Times l ಜನರು ತಮ್ಮ ಜೀವನದ ಉಳಿತಾಯವನ್ನು ಸುರಕ್ಷಿತವೆಂದು ನಂಬಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡುತ್ತಾರೆ. ಆದರೆ ಕೆಲವು ಸಿಬ್ಬಂದಿ ಹಾಗೂ ಹೊರಗಿನ ಏಜೆಂಟರ ಸಂಚಿನಿಂದಾಗಿ ಈ ನಂಬಿಕೆಗೆ ಧಕ್ಕೆ ಬೀಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಎಲ್ಲಿ ನಾವು ಹಣವನ್ನು ಸೇಫ್ ಅಂತ ಭಾವಿಸಿ ಉಳಿತಾಯಕ್ಕಿಡುತ್ತೇವೆಯೋ ಅಲ್ಲಿಯೇ ಈಗ ವಂಚನೆ ಶುರುವಾಗಿದೆ.
ಬ್ಯಾಂಕ್ ಶಾಖೆಯಲ್ಲಿ ನಡೆದ ಭಾರೀ ವಂಚನೆಗಳಲ್ಲಿ ನಕಲಿ ದಾಖಲೆಗಳ ಬಳಕೆ, ಗ್ರಾಹಕರ ಸಹಿ ನಕಲು, ಖಾತೆದಾರರ ಅನುಮತಿ ಇಲ್ಲದೆ ಹಣ ವರ್ಗಾವಣೆ, ನಕಲಿ ಸಾಲ ಮಂಜೂರು ಮಾಡುವುದು ಮುಂತಾದ ಕೃತ್ಯಗಳು ಸಾಮಾನ್ಯವಾಗಿವೆ. ಕೆಲ ಪ್ರಕರಣಗಳಲ್ಲಿ ಬ್ಯಾಂಕ್ ಸಿಬ್ಬಂದಿಯೇ ಗ್ರಾಹಕರ ಪಾಸ್‌ಬುಕ್, ಚೆಕ್‌ಬುಕ್ ಮತ್ತು ಎಟಿಎಂ ವಿವರಗಳನ್ನು ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂಪಾಯಿ ಹಣವನ್ನು ತಮ್ಮ ಅಥವಾ ಇತರರ ಖಾತೆಗಳಿಗೆ ವರ್ಗಾಯಿಸುವ ಹಲವು ಪ್ರಕರಣಗಳನ್ನೂ ಕೇಳಿರುತ್ತೇವೆ.
ಹಿರಿಯ ಮ್ಯಾನೇಜರ್ ನಕಲಿ ಗೋಲ್ಡ್ ಲೋನ್ ಸೃಷ್ಟೀಕರಣ ;
ಹೀಗಿರುವಾಗ, ಕೆನರಾ ಬ್ಯಾಂಕ್ ಶಾಖೆಯಲ್ಲಿ ಭಾರೀ ವಂಚನೆ ನಡೆದಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿದೆ. ಬ್ಯಾಂಕ್‌ನ ಹಿರಿಯ ಮ್ಯಾನೇಜರ್ ನಕಲಿ ಗೋಲ್ಡ್ ಲೋನ್‌ಗಳನ್ನು ಸೃಷ್ಟಿಸಿದ ಆರೋಪ ಕೇಳಿಬಂದಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿರುವುದು ವರದಿಯಾಗಿದೆ. ಈಗಾಗಲೇ ಕೆನರಾ ಬ್ಯಾಂಕ್ 41 ಖಾತೆಗಳನ್ನು ಫ್ರೀಜ್ ಮಾಡಿದ್ದು, ಯಾವುದೇ ಚಿನ್ನವಿಲ್ಲದೇ ಗ್ರಾಹಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗ್ರಾಹಕರಿಗೆ ತಿಳಿಯದೇ ಖಾತೆಗಳಲ್ಲಿ ಗೋಲ್ಡ್ ಲೋನ್ ;
ಮಲ್ಲೇಶ್ವರಂನ 15ನೇ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಕಲಿ ಗೋಲ್ಡ್ ಲೋನ್‌ಗಳನ್ನು ಸೃಷ್ಟಿಸಿ ಕೋಟಿ ಕೋಟಿ ರೂ. ಹಣ ಲೂಟಿ ಮಾಡಿರುವ ಆರೋಪ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಎನ್. ರಘು, 2025ರ ಅಕ್ಟೋಬರ್ 4ರಿಂದ ಡಿಸೆಂಬರ್ 9ರವರೆಗೆ ಒಟ್ಟು 41 ಗ್ರಾಹಕರ ಖಾತೆಗಳಲ್ಲಿ ಚಿನ್ನವೇ ಇರದೆ ನಕಲಿ ಗೋಲ್ಡ್ ಲೋನ್‌ಗಳನ್ನು ಓಪನ್ ಮಾಡಿ, ಸುಮಾರು 3.11 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎನ್ನಲಾಗಿದೆ. ಗ್ರಾಹಕರಿಗೆ ತಿಳಿಯದೇ ಅವರ ಖಾತೆಗಳಲ್ಲಿ ಗೋಲ್ಡ್ ಲೋನ್ ತೆರೆದು ಹಣವನ್ನು ಡ್ರಾ ಮಾಡಿ ತನ್ನ ಖಾತೆಗೆ ವರ್ಗಾಯಿಸಿಕೊಂಡು ಎಸ್ಕೇಪ್ ಆಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
Massive fraud at bank branch: Creation of fake gold loan – ತುಳುಟೈಮ್ಸ್
ಇದನ್ನೂ ಓದಿ :ಕಂಬಳ ಎಂಬುದು ತುಳುನಾಡಿನ ಅಸ್ಮಿತೆ: ಬಿ.ವೈ.ವಿಜಯೇಂದ್ರ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/WV1XDWJ8920?si=uRlTKXGr3qiJenm3











