ಬೆಳ್ತಂಗಡಿ : Tulu Times | ಮ್ಯಾಥಮೆಟಿಕ್ಸ್ ಒಲಿಂಪಿಯಾಡ್ ಇವರು ಬೆಂಗಳೂರಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ರಿಷಿಕಾ ಎಂ ಉಜಿರೆ ಇವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಳ್ತಂಗಡಿ ಶಾಖೆಯ ಸಿಬ್ಬಂದಿ, ಮಾಜಿ ಯೋಧ ಮೋಹನ್ ಕೆ. ಹೆಚ್ ಇವರ ಪುತ್ರಿಯಾಗಿರುವ ರಿಷಿಕಾ, ಜವಾಹರ್ ನವೋದಯ ವಿದ್ಯಾಲಯ ಮುಡಿಪ್ಪು ಇಲ್ಲಿ 10 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ರಿಷಿಕಾ ಅವರು ಕಲಿಕೆ ಮಾತ್ರವಲ್ಲದೆ ಕಲಿಕೇತರ ವಿಷಯಗಳಲ್ಲೂ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಾರೆ.
ಮ್ಯಾಥಮೆಟಿಕ್ಸ್ ಒಲಿಂಪಿಯಾಡ್ ಎಂಬುದು ವಿದ್ಯಾರ್ಥಿಗಳ ಗಣಿತೀಯ ಚಿಂತನೆ, ತಾರ್ಕಿಕ ವಿಶ್ಲೇಷಣೆ ಹಾಗೂ ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಪರೀಕ್ಷಿಸುವ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸ್ಪರ್ಧೆಯಾಗಿದೆ. ಇದು ಕೇವಲ ಪಠ್ಯಾಧಾರಿತ ಪರೀಕ್ಷೆಯಲ್ಲ; ಬದಲಾಗಿ ವಿದ್ಯಾರ್ಥಿಗಳ ಸೃಜನಶೀಲತೆ, ಲಾಜಿಕ್ ಮತ್ತು ಆಳವಾದ ಅರ್ಥಗರ್ಭಿತ ಚಿಂತನೆಗೆ ಉತ್ತೇಜನ ನೀಡುವ ಸ್ಪರ್ಧೆಯಾಗಿದೆ.
Rishika M. selected for national level in Mathematics Olympiad exam – ತುಳು ಟೈಮ್ಸ್
ಇದನ್ನೂ ಓದಿ :ಬೆಳ್ತಂಗಡಿ: ಪತ್ನಿಯಿಂದ ಪತಿ ಹತ್ಯೆ ಪ್ರಕರಣದ ತೀರ್ಪು
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/FGONMu5gqxQ?si=_BAauBYOGu9kRvlb











