ಬೆಳ್ತಂಗಡಿ: Tulu Times | ಮಹೇಶ್ ಶೆಟ್ಟಿ ತಿಮರೋಡಿ ಅವರ ಉಜಿರೆಯಲ್ಲಿರುವ ಮನೆಗೆ ಡಿ.18 ರಂದು ಸಂಜೆ 6 ಗಂಟೆಗೆ ಬೆಳ್ತಂಗಡಿ ಪೊಲೀಸರು ತೆರಳಿ ಮನೆಯ ಗೋಡೆಗೆ ಗಡಿಪಾರು ಆದೇಶದ ಪ್ರತಿಯನ್ನು ಅಂಟಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ 16-12-2025 ರಿಂದ 16-09-2026 ರವರೆಗೆ ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಎರಡನೇ ಬಾರಿಗೆ ಡಿ.16 ರಂದು ಗಡಿಪಾರು ಮಾಡಿದ ಪ್ರಕರಣ ಸಂಬಂಧ ಎಸ್ಕೇಪ್ ಆಗಿರುವ ಮಹೇಶ್ ಶೆಟ್ಟಿಗೆ ಪೊಲೀಸರು ಆದೇಶ ನೀಡಿದ್ದರು.
ಈ ಆದೇಶದ ಬೆನ್ನಲ್ಲೇ ಗಡಿಪಾರು ಆದೇಶದ ಪ್ರತಿ ಜಾರಿ ಮಾಡಿ ತಿಮರೋಡಿಯನ್ನು ದಕ್ಷಿಣ ಕನ್ನಡದಿಂದ ಗಡಿಪಾರು ಮಾಡಲು ಡಿ.18 ರಂದು ಬೆಳಗ್ಗೆ ತೆರಳಿದಾಗ ಪೊಲೀಸರು ಬರುವ ಬಗ್ಗೆ ಮೊದಲೇ ಮಾಹಿತಿ ತಿಳಿದು ಮಹೇಶ್ ಶೆಟ್ಟಿ ಮನೆಯಿಂದ ತಲೆಮರೆಸಿಕೊಂಡು ಪರಾರಿಯಾಗಿದ್ದರು. ಇದೀಗ ಗಡಿಪಾರು ಆದೇಶವಾಗಿ ತಲೆಮರೆಸಿಕೊಂಡು ನಾಪತ್ತೆಯಾಗಿರುವ ಮಹೇಶ್ ಶೆಟ್ಟಿ ಬಗ್ಗೆ ಬೆಳ್ತಂಗಡಿ ಪೊಲೀಸರು ಡಿ.18 ರಂದು ಉಜಿರೆ ಪೇಟೆಯಲ್ಲಿ ಸಾರ್ವಜನಿಕ ಪ್ರಕಟಣೆಯನ್ನು ಮೈಕ್ ಮೂಲಕ ಜನರಿಗೆ ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ ಸಮೀಪದ ಲಾಯಿಲಾದಲ್ಲಿ ಅಪರಿಚಿತ ವ್ಯಕ್ತಿಯೋರ್ವರ ಶವ ಪತ್ತೆ!
ಬೆಳ್ತಂಗಡಿ ಸಮೀಪದ ಲಾಯಿಲಾದಲ್ಲಿ ಅಪರಿಚಿತ ವ್ಯಕ್ತಿಯೋರ್ವರ ಶವ ಪತ್ತೆಯಾಗಿದೆ. ಇಲ್ಲಿನ ಸೇತುವೆಯ ಬಳಿ ಅನಾರೋಗ್ಯದ ಕಾರಣದಿಂದನೋ ಅಥವಾ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಇನ್ನೂ ತಿಳಿದುಬಂದಿಲ್ಲ. ಅಪರಿಚಿತ ಶವ ನೋಡಿದ ಜನ ಶಾಕ್ ಆಗಿದ್ದಾರೆ.
ಅಪರಿಚಿತ ಮೃತದೇಹ ಕಂಡು ಜನ ತಕ್ಷಣವೇ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ, ಸ್ಥಳಕ್ಕೆ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಅನಂದ್.ಎಮ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ನಡೆಸಲು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹದ ಮಹಜರಿನ ಬಳಿಕ ಶವಪರೀಕ್ಷೆಗಾಗಿ ಸಾಯಿರಾಮ್ ಆಂಬುಲೆನ್ಸ್ ಮೂಲಕ ಶವವನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಚಾಲಕ ಪವನ್ ಬಂಗೇರ, ಕರುಣಾಕರ ರೆಂಕೆದಗುತ್ತು ಪೊಲೀಸರಿಗೆ ಸಹಕರಿಸಿದರು.
Police pasted a copy of the deportation order at rowdy sheeter Mahesh Shetty’s Timarodi house!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











