ಬ್ರೇಕಿಂಗ್ ನ್ಯೂಸ್
ಕರ್ನಾಟಕಪುತ್ತೂರು

ಪಂಚಾಯಿತಿ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ: ಅರುಣ್‌ ಕುಮಾರ್ ಪುತ್ತಿಲ ಆರೋಪ!

ಪುತ್ತೂರು: Tulu Times | ಪಾಣಾಜೆ ಗ್ರಾಮದ ಪಂಚಾಯಿತಿ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಮೂಲಕ ಪಂಚಾಯಿತಿಗೆ ಮೀಸಲಿಟ್ಟ ಜಾಗವನ್ನು ದಫನ ಭೂಮಿಗೆ ಕೊಡುವ ನಿರ್ಣಯ ಕೈಗೊಂಡು ಗ್ರಾಮಸ್ಥರಿಗೆ ದ್ರೋಹ ಮಾಡಿದ್ದಾರೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಅರುಣ್‌ ಕುಮಾರ್ ಪುತ್ತಿಲ ಆರೋಪ ಮಾಡಿದ್ದಾರೆ.

ಆರ್ಲಪದವಿನ ಬದ್ರಿಯಾ ಮಸೀದಿಯ ದಫನ ಭೂಮಿಗೆ ನೀಡಿರುವ ಪಂಚಾಯಿತಿ ಅಧ್ಯಕ್ಷರ ನಿರ್ಣಯ ವಿರೋಧಿಸಿ  ಪಾಣಾಜೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ನೀವು ನಿರ್ಣಯ ಮಾಡಿರಬಹುದು. ಆದರೆ ಮೇಲಾಧಿಕಾರಿಗಳಿಗೆ ದೂರು ನೀಡುವ ಕೆಲಸ ಗ್ರಾಮಸ್ಥರು ಮಾಡಲಿದ್ದಾರೆ ಎಂದರು.

ಇದನ್ನೂ ಓದಿ: ಕೇರಳದಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ! ತಿರುವನಂತಪುರಂ ಪಾಲಿಕಾ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ

ಸಂಜೀವ ಮಠಂದೂರು, ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ನಿವೃತ್ತ ಸೈನಿಕ ರಮಾನಾಥ ರೈ ಪಡ್ಯಂಬೆಟ್ಟು ಅವರು ಪಂಚಾಯಿತಿ ಆಸ್ತಿಯನ್ನು ದಫನ ಭೂಮಿಗೆ ನೀಡುವ ನಿರ್ಣಯ ಕೈಗೊಂಡ ಪಾಣಾಜೆ ಪಂಚಾಯಿತಿ ಅಧ್ಯಕ್ಷರ ನಿರ್ಧಾರವನ್ನು ಖಂಡಿಸಿದರು.

ಪೊಲೀಸ್ ಬಸ್ ನಿಲ್ಲಿಸಿ ಈ ರೀತಿಯ ಭದ್ರತೆ ಏರ್ಪಡಿಸಿ ಪ್ರತಿಭಟನೆ ನಡೆಸುವ ವಾತಾವರಣ ನಿರ್ಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಪಕ್ಷದವರು ಪಂಚಾಯಿತಿ ಅಧ್ಯಕ್ಷರಾಗಿದ್ದಾರೆ ಎನ್ನುವ ಕಾರಣಕ್ಕೆ ಸುಳ್ಳನ್ನು ಸತ್ಯ ಮಾಡುವ ಕೆಲಸ ನೀವು ಮಾಡುತ್ತಿದ್ದೀರಿ. ಪಾಣಾಜೆಯ ಪ್ರಜ್ಞಾವಂತ, ಬುದ್ಧಿವಂತ ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದಾರೆ.

ಪಾಣಾಜೆ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಪ್ರೇಮ್‌ರಾಜ್ ಆರ್ಲಪದವು, ಬಿಜೆಪಿ ಪುತ್ತೂರು ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಮಾಜಿ ಅಧ್ಯಕ್ಷ ಮಹೇಂದ್ರ ವರ್ಮ, ಸಂಘಟನಾ ಕಾರ್ಯದರ್ಶಿ ಅನಿಲ್ ತೆಂಕಿಲ, ಪಾಣಾಜೆ ಸಿಎ ಬ್ಯಾಂಕ್ ನಿರ್ದೇಶಕರಾದ ಉಮೇಶ್ ರೈ ಗಿಳಿಯಾಲು, ಹರೀಶ್ ಕಡಮಾಜೆ, ಜನಜಾಗೃತಿ ವೇದಿಕೆಯ ಸದಾಶಿವ ರೈ ಸೂರಂಬೈಲು, ಬಿಜೆಪಿ ಮುಖಂಡರಾದ ಸುರೇಶ್ ಆಳ್ವ ಸಾಂತ್ಯ, ಸುಜಿತ್ ಕಜೆ, ಉಮೇಶ್ ಬಲ್ಯಾಯ, ಸಂತೋಷ್ ರೈ ಗೋಳಿತ್ತಡಿ ಮುಂತಾದವರು ಭಾಗವಹಿಸಿದ್ದರು.

Panchayat president dictatorial attitude: Arun Kumar Puttila allegation!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 161

You cannot copy content of this page