ಬ್ರೇಕಿಂಗ್ ನ್ಯೂಸ್
ಕರ್ನಾಟಕ

‘ಐಪಿಎಲ್‌’ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವುದರಲ್ಲಿ ಸಂದೇಹವಿಲ್ಲ : ಡಿ. ಕೆ ಶಿವಕುಮಾರ್

ಬೆಂಗಳೂರು : Tulu Times | ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾರತೀಯ ಪ್ರೀಮಿಯರ್ ಲೀಗ್ ನ ಅತ್ಯಂತ ಜನಪ್ರಿಯ ಮತ್ತು ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಒಂದಾಗಿದೆ. ಇಲ್ಲಿ ತಂಡದ ಹೆಸರು, ಬಣ್ಣ, ಆಟಗಾರರು ಮತ್ತು ಅವರ ದಿಟ್ಟ ಮನೋಭಾವವೇ ಆರ್‌ಸಿಬಿಯನ್ನು ವಿಭಿನ್ನವಾಗಿ ತೋರಿಸುತ್ತವೆ. 2008ರಲ್ಲಿ ಆರಂಭವಾದ ಐಪಿಎಲ್ ನ ಮೊದಲ ಸೀಸನ್‌ನಲ್ಲೇ ಆರ್ ಸಿಬಿ ತನ್ನ ಪ್ರಯಾಣವನ್ನು ಶುರು ಮಾಡಿತು. ಆರಂಭದಲ್ಲಿ ತಂಡದ ರಚನೆ ಹೆಚ್ಚು ಪ್ರಯೋಗಾತ್ಮಕವಾಗಿದ್ದರೂ, ಬಳಿಕ ಆಟಗಾರರ ಆಯ್ಕೆ ಮತ್ತು ಸಂಯೋಜನೆಯಲ್ಲಿ ತಂಡವು ದೊಡ್ಡ ಬದಲಾವಣೆಗಳನ್ನು ಕಂಡಿದೆ.

2026 ರಲ್ಲಿ ನಡೆಯುವ ಐಪಿಎಲ್ ವಿಚಾರವಾಗಿ, ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, 2026ರ ಐಪಿಎಲ್ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ. ಯಾವುದೇ ಕಾರಣಕ್ಕೂ ಐಪಿಎಲ್ ಪಂದ್ಯಗಳು ಬೇರೆಡೆ ಶಿಫ್ಟ್ ಆಗಲು ಬಿಡುವುದಿಲ್ಲ. ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದು ನಮ್ಮ ಬೆಂಗಳೂರಿನ ಹೆಮ್ಮೆ ಎಂದು ಹೇಳಿದರು.

ಕಳೆದ ಬಾರಿ ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತ ಸಂಭವಿಸಿತ್ತು. ಅಂತಹ ಅವಗಢಗಳು ಮತ್ತೆ ಆಗದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಎಲ್ಲಾ ರೀತಿಯ ಎಚ್ಚರಿಕೆ ವಹಿಸಿಯೇ ಪಂದ್ಯ ನಡೆಸಲಾಗುವುದು ಎಂದರು. ಇನ್ಮುಂದೆ ಯಾವುದೇ ಐಪಿಎಲ್ ಪಂದ್ಯಗಳು ಬೇರೆಡೆ ಸ್ಥಳಾಂತರವಾಗಲ್ಲ. 2026ರ ಐಪಿಎಲ್ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆಯಲಿದೆ ಎಂದು ತಿಳಿಸಿದರು.

There is no doubt that the IPL will be held at Chinnaswamy Stadium: D. K. Shivakumar – ತುಳು ಟೈಮ್ಸ್

ಇದನ್ನೂ ಓದಿ :ಆದಾಯ ತೆರಿಗೆ ಪ್ರಕರಣದಲ್ಲಿ ನಟ ಯಶ್ ಗೆ ಬಿಗ್‌ ರಿಲೀಫ್..! ನೋಟಿಸ್ ರದ್ದು

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/Ydo5aphrgek?si=BeFhxecl-ym8yyIB

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 177

You cannot copy content of this page