ಬ್ರೇಕಿಂಗ್ ನ್ಯೂಸ್
ಕರ್ನಾಟಕ

ವಿಪರೀತ ಚಳಿ ಅಂತ ಅನಿಸ್ತಿದ್ಯಾ..? ಹಾಗಾದ್ರೆ ನಿಮ್ಮ ದಿನಚರಿ ಹೀಗಿರಲಿ..!

ಆರೋಗ್ಯ: Tulu Times |ಇನ್ನೇನು  ಚಳಿಗಾಲ ಶುರು.  ಹೊದ್ದುಕೊಳ್ಳಲು ಎಷ್ಟು ಬಟ್ಟೆ ಇದ್ರೂ ಕೂಡ ವಿಪರೀತ ಚಳಿ ಅಂತ ಅನಿಸುತ್ತೆ. ಕೊರೆಯುವ ಚಳಿಯಲ್ಲಿ ನಮ್ಮ ದೇಹ ಬೆಚ್ಚಗಾಗಬೇಕು ಅಂತ ನಾವು ಅಂದುಕೊಳ್ತೇವೆ. ಹಾಗಾದ್ರೆ ಚಳಿಗಾಲದಲ್ಲಿ ನಮ್ಮ ದಿನಚರಿ ಹೇಗಿರಬೇಕು ನೋಡೋಣ…

ಚಳಿಗಾಲದಲ್ಲಿ ಅನೇಕರು ಜ್ವರ, ಶೀತ ಇತ್ಯಾದಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ.  ಇಂತಹ ಸಮಸ್ಯೆಗಳು ಕಾಡಬಾರದೆಂದರೆ ನೀವು ನಿಮ್ಮ ದಿನಚರಿಯಲ್ಲಿ  ಬದಲಾವಣೆಗಳನ್ನು ಮಾಡಿಕೊಳ್ಳಬೇಕು.  ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಆಲಸ್ಯ, ಸೋಮಾರಿತನವೂ ದೇಹವನ್ನು ಆವರಿಸುತ್ತವೆ. ಈ ಸಮಯದಲ್ಲಿ ತುಟಿ ಒಡೆಯುವುದು, ಚರ್ಮದ ಶುಷ್ಕತೆ ಸೇರಿದಂತೆ ಹಲವು ತ್ವಚೆ ಸಂಬಂಧಿ ಸಮಸ್ಯೆಗಳೂ ಬಾಧಿಸುತ್ತದೆ. ಹಾಗಾಗಿ ಚಳಿಗಾಲದ ಜೀವನಶೈಲಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಕಷಾಯ ಕುಡಿಯಿರಿ..!

ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅನೇಕರು ಶೀತ ಮತ್ತು ಜ್ವರದಂತಹ ಸೋಂಕುಗಳಿಂದ ಬಳಲುತ್ತಿದ್ದಾರೆ, ಇದರಿಂದಾಗಿ ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ಈ ರೋಗಗಳು ಬಾಧಿಸದಿರಲು ಪ್ರತಿನಿತ್ಯ ಬೆಳಗ್ಗೆ ಶುಂಠಿ ಕಷಾಯ, ಕಾಳುಮೆಣಸಿನ ಕಷಾಯ, ತುಳಸಿ, ಜೀರಿಗೆ, ಈರುಳ್ಳಿ ಇತ್ಯಾದಿಗಳಿಂದ ತಯಾರಿಸಿದ ಕಷಾಯ ಕುಡಿಯಿರಿ.

ಬೆಳಗ್ಗಿನ ಬಿಸಿಲಿಗೆ ಮೈಯೊಡ್ಡಿ..!

ಈ ಋತುವಿನಲ್ಲಿ ಬೆಳಗ್ಗೆ ಕನಿಷ್ಠ 10 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ. ಇದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಸಿಗುತ್ತದೆ. ಇದು ಮೂಳೆಗಳನ್ನು ಬಲಪಡಿಸುವುದಲ್ಲದೆ ಆಲಸ್ಯವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅನೇಕರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುತ್ತಾರೆ. ಇಂತವರು ಸೂರ್ಯನ ಬೆಳಕಿಗೆ ಮೈಯೊಡ್ಡಿದರೆ ಒಳ್ಳೆಯದು.

ಯೋಗ ಶುರು ಮಾಡಿ..!

ಚಳಿಗಾಲವು ದೇಹವನ್ನು ಆಲಸ್ಯದಿಂದ ಕೂಡಿರುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿದಿನ 20–30 ನಿಮಿಷಗಳ ಲಘು ವ್ಯಾಯಾಮ ಮಾಡಿ. ಇದು ಸರಿಯಾದ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಕೆಲಸ ಮಾಡುತ್ತದೆ.

ಪರಿಶುದ್ಧ ನೀರು ಕುಡಿಯಿರಿ..!

ಚಳಿಗಾಲದಲ್ಲಿ ಅನೇಕ ಜನ ನೀರು ಕುಡಿಯೋದೆ ಇಲ್ಲ. ಬಾಯಾರಿಕೆ ಆಗೋದಿಲ್ಲ ಅಂತ ಸುಮ್ಮನಾಗುವವರೇ ಹೆಚ್ಚು. ಇಂತವರು ನೀರು ಕುಡಿಯಿರಿ. ಸಾಕಷ್ಟು ನೀರು ಕುಡಿಯಬೇಕು ಮತ್ತು ನಿಮ್ಮ ದೇಹವನ್ನು ನಿರ್ಜಲೀಕರಣದಿಂದ ಕಾಪಾಡಿಕೊಳ್ಳಬೇಕು. ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ.

Don’t you feel like it’s too cold? Then let your daily routine be like this! – ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page