ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನೀವು ಎಲ್ಲರಿಗಿಂತ ಡಿಫ್ರೆಂಟ್ ಆಗಿ ಕಾಣಿಸಬೇಕಾ? ಹಾಗಾದ್ರೆ ನಿಮ್ಮ ವ್ಯಕ್ತಿತ್ವ ಹೀಗಿದ್ದರೆ ಚಂದ!

ಲೈಫ್‌ ಸ್ಟೈಲ್:‌ Tulu Times | ಪ್ರತಿಯೊಬ್ಬರಿಗೂ ನಾನು ಎಲ್ಲರಿಗಿಂತ ಡಿಫ್ರೆಂಟ್ ಆಗಿ ಕಾಣಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಹಾಗಾಗಿ ತಾನು ಯೋಚಿಸುವ ಪರಿಯನ್ನೇ ಹಲವಾರು ಜನ ಬದಲಾವಣೆ ಮಾಡಿಕೊಂಡಿರುತ್ತಾರೆ. ಹಾಗಾದ್ರೆ ನಿಜಕ್ಕೂ ನಮ್ಮ ವ್ಯಕ್ತಿತ್ವದಲ್ಲಿ ನಾವು ಮಾಡಬೇಕಾದಂತ ಬದಲಾವಣೆಗಳು ಏನು ನೋಡೋಣ ಈ ಸ್ಟೋರಿಯಲ್ಲಿ..

ನಮ್ಮಲ್ಲಿ ಬಹುತೇಕ ಜನ ಯಾವುದಾದರೂ ಕಾರ್ಯಕ್ರಮಗಳಿಗೆ ಭೇಟಿ ನೀಡಿದಾಗ ಅಥವಾ ಎಲ್ಲಾದರೂ ಒಟ್ಟಿಗೆ ಎಲ್ಲರೂ ಕೂಡ ಗೆಟ್‌ ಟು ಗೇದರ್ ಸೇರಿದಾಗ ನಾವು ಎಲ್ಲರಿಗಿಂತ ಡಿಫ್ರೆಂಟ್ ಆಗಿ ಕಾಣಿಸಬೇಕು ಎನ್ನುವಂತಹ ಯೋಚನೆಯನ್ನು ಇಟ್ಟುಕೊಂಡಿರುತ್ತಾರೆ. ಅಂತವರು ಕೆಲವೊಂದು ಟಿಪ್ಸ್ ಗಳನ್ನು  ಫಾಲೋ ಮಾಡಲೇಬೇಕು ಹಾಗಾದ್ರೆ ಆ ಟಿಪ್ಸ್ ಗಳೇನು..ನೋಡೋದಾದ್ರೆ..

ನೀವು ನೀವಾಗಿರಿ ಆಟಿಟ್ಯೂಡ್ ಬೇಡ..!

ಸಾಕಷ್ಟು ಜನ ತಮ್ಮ ಲೈಫ್ ಸ್ಟೈಲ್ ಅನ್ನು ಕಷ್ಟಪಟ್ಟುಕೊಂಡು ಇನ್ನೊಂದು ರೀತಿಯಾಗಿ ಬದಲಾವಣೆಯನ್ನು ಮಾಡಿಕೊಂಡಿರುತ್ತಾರೆ. ತನಗೆ ಎಲ್ಲಾ ಗೊತ್ತು ಅಥವಾ ತನ್ನತ್ರ ಎಲ್ಲರೂ ಬಂದು ಮಾತನಾಡಿಸಬೇಕು ಎನ್ನುವಂತಹ ಆಟಿಟ್ಯೂಡ್ ಇಟ್ಟುಕೊಂಡಿರುತ್ತಾರೆ. ಅದು ಅವರು ಮನಸಾರೆ ಆ ರೀತಿಯಾದಂತಹ ಭಾವನೆಯನ್ನು ಇಟ್ಕೊಂಡಿರುವುದಿಲ್ಲ ಆದರೆ ನಾಲ್ಕು ಜನ ನೋಡಿ ಏನನ್ನುತ್ತಾರೋ ಅನ್ನುವಂತಹ ಒಂದೇ ಒಂದು ವಿಚಾರಕ್ಕೆ ಸಾರ್ವಜನಿಕವಾಗಿ ಅಥವಾ ದೊಡ್ಡ ಕಾರ್ಯಕ್ರಮಗಳಲ್ಲಿ ತನ್ನ ಗಾಂಭೀರ್ಯತೆಯನ್ನು ಎಲ್ಲರೆದುರು ವ್ಯಕ್ತಪಡಿಸುತ್ತಾ ಇರುತ್ತಾರೆ. ಇದರಿಂದ ತಾನು ಎಲ್ಲರ ದೃಷ್ಠಿಯಲ್ಲಿ ಸ್ಟ್ಯಾಂಡರ್ಡ್ ಆಗಿ ಇದ್ದೀನಿ ಅನ್ನುವಂತಹ ಮನಸ್ಥಿತಿಯನ್ನು ಇಟ್ಟುಕೊಂಡಿರುತ್ತಾರೆ. ಇಂಥವರು ತನ್ನ ಗಾಂಭೀರ್ಯದ ಮನಸ್ಥಿತಿಯನ್ನು ಕೊಂಚ ಬದಿಗಿಟ್ಟು ಎಲ್ಲರ ಎದುರು ಮಾತನಾಡುವಂತಹ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ಇದರಿಂದ ನಿಮ್ಮ ವ್ಯಕ್ತಿತ್ವ ಇನ್ನೊಬ್ಬರಿಗೆ ಹಿತ ನೀಡುತ್ತದೆ.

ಜೊತೆಗೆ ಎಲ್ಲರೂ ಕೂಡ ನಿಮ್ಮ ಜೊತೆಗೆ ಮಾತನಾಡಲು ಹಂಬಲಿಸುತ್ತಿರುತ್ತಾರೆ. ಮನುಷ್ಯ ಯಾವತ್ತೂ ಓಪನ್ ಆಗಿ ಸೋಶಿಯಲ್ ಆಗಿ ಜನರ ಜೊತೆ ಮಾತನಾಡುತ್ತಾ ಇರಬೇಕು, ಇದರಿಂದ ನಿಮ್ಮ ವ್ಯಕ್ತಿತ್ವ ಜೊತೆಗೆ ನಿಮ್ಮಲ್ಲಿರುವಂತಹ ಕೆಟ್ಟ ಭಾವನೆಗಳು ದೂರವಾಗುತ್ತಾ ಹೋಗುತ್ತದೆ. ಇದರಿಂದ ನಿಮ್ಮ ವ್ಯಕ್ತಿತ್ವ ಸಾರ್ವಜನಿಕವಾಗಿ ಪಾಸಿಟಿವ್ ಆಗಿ ಪರಿವರ್ತನೆಗೊಳ್ಳುತ್ತದೆ. ಇನ್ನು ಕೆಲವರು ತಾನಾಯ್ತು ತನ್ನ ವ್ಯಕ್ತಿತ್ವವಾಯಿತು ಅಂತ ಸಪರೇಟ್ ಆಗಿ ಇರುತ್ತಾರೆ, ಮಾತನಾಡುವುದಕ್ಕೆ ಮುಂದೆ ಬರುವುದಿಲ್ಲ. ಹೀಗಾಗಿ ಇಂತಹ ಮನಸ್ಥಿತಿಯವರು ಸಾರ್ವಜನಿಕವಾಗಿ ಓಪನ್ ಆಗದೆ ತನ್ನ ಮನೆಯಲ್ಲಿ ಜೋರಾಗಿ ಕೂಗಾಡುತ್ತಾ ಇರುತ್ತಾರೆ. ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಸಣ್ಣಪುಟ್ಟ ಗೊಂದಲಗಳು ಉಂಟಾಗಲು ಶುರುವಾಗುತ್ತದೆ. ಜೊತೆಗೆ ಎರಡು ರೀತಿಯಾದಂತಹ ಪರ್ಸನಾಲಿಟಿ ನಿಮ್ಮಲ್ಲಿ ಡೆವಲಪ್ ಆಗುತ್ತಾ ಇರುತ್ತದೆ. ಇಂತಹ ಮನಸ್ಥಿತಿಯುಳ್ಳವರು ಈ ಮೇಲಿನ ವಿಚಾರಗಳನ್ನು ಫಾಲೋ ಮಾಡಲೇಬೇಕು.

ನಿಮ್ಮನ್ನು ಯಾರೂ ಮಾತನಾಡಿಸೋಕೆ ಬರುವುದಿಲ್ಲ.. ನೀವಾಗಿಯೇ ಮುಂದೆ ಬನ್ನಿ!

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಥವಾ ಯಾವುದಾದರು ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ನೀವು ಭಾಗಿಯಾಗುವಿರಿ ಅಂದಾಗ ನೀವು ಮುಂಚೆ ಪ್ರಿಪೇರ್ ಆಗಿರಬೇಕು. ಯಾಕೆಂದರೆ, ನೀವು ನಿಮ್ಮ ವ್ಯಕ್ತಿತ್ವವನ್ನು ಕೆಳಗೆಟ್ಟು ಮಾತನಾಡುವುದು ತಪ್ಪು. ಜೊತೆಗೆ ಎಲ್ಲರೂ ಅವರಾಗಿಯೇ ಬಂದು ಮಾತನಾಡಿಸಲಿ ಅಂತ ಕಾಯುವುದು ಕೂಡ ತಪ್ಪು. ನೀವಾಗಿಯೇ ಹೋಗಿ ಹಿರಿಯರ ಹತ್ತಿರ ಅಥವಾ ನಿಮ್ಮ ವಯಸ್ಸಿನ ಸನಿಹದಲ್ಲಿರುವಂತಹ ವ್ಯಕ್ತಿಗಳನ್ನು ಖುದ್ದಾಗಿ ಮಾತನಾಡಿದರೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ. ಕೆಲವರು ಕೇವಲ ಬಾಯಿ ಮಾತಿನಲ್ಲಿ ಮಾತ್ರ ತಾನು ಹಾಗೆ, ತಾನು ಹೀಗೆ ಅಂತ ಹೇಳಿಕೊಂಡು ಇರುತ್ತಾರೆ. ಇಂಥವರು ಸಾರ್ವಜನಿಕವಾಗಿ ಬಾಯಿಯನ್ನು ಮುಚ್ಚಿಕೊಂಡು ಇರುತ್ತಾರೆ. ಎಲ್ಲಾ ಕಡೆ ಒಂದೇ ರೀತಿಯಾದಂತಹ ಮನಸ್ಥಿತಿ ಇದ್ದರೆ ನಿಮ್ಮ ಮೇಲಿರುವಂತಹ ಅಭಿಪ್ರಾಯ ಖಂಡಿತವಾಗಲೂ ಬದಲಾಗುತ್ತದೆ.

ಡೀಸೆಂಟ್ ಆದಂತಹ ಬಟ್ಟೆಗಳನ್ನು ಧರಿಸಿ..!

ನಾವು ಜೀವನದಲ್ಲಿ ಒಳ್ಳೆಯ ವ್ಯಕ್ತಿತ್ವ ಹೊಂದಿದವರು ಎಂದು ತಿಳಿಯಲು ಕೇವಲ ನಮ್ಮ ಮನಸ್ಥಿತಿ ಮಾತ್ರವಲ್ಲ, ನಾವು ಧರಿಸುವಂತಹ ಉಡುಪುಗಳು ಕೂಡ ಅರ್ಥವನ್ನು ನೀಡುತ್ತವೆ. ಸಣ್ಣ ಕಾರ್ಯಕ್ರಮ ಆಗಿರಲಿ ಅಥವಾ ದೊಡ್ಡ ಮಟ್ಟದ ಕಾರ್ಯಕ್ರಮ ಆಗಿರಲಿ ಆ ಒಂದು ಕಾರ್ಯಕ್ರಮಕ್ಕೆ ಸರಿಹೊಂದುವಂತಹ ಬಟ್ಟೆಗಳನ್ನು ಧರಿಸುವುದು ಮುಖ್ಯ. ನಿಮ್ಮ ದೇಹಕ್ಕೆ ಆ ಬಟ್ಟೆ ಸೂಕ್ತವಾಗಿ ಮ್ಯಾಚ್ ಆಗುತ್ತಿದೆಯಾ ಅಂತ ನೀವೇ ನಿರ್ಧಾರ ಮಾಡಿಕೊಳ್ಳಿ. ಪಾರ್ಟಿ ಗಳಿಗೆ ಯಾವ ಬಟ್ಟೆ ಧರಿಸಬೇಕು ಅಥವಾ ಕಾರ್ಯಕ್ರಮಗಳಿಗೆ ಯಾವ ಬಟ್ಟೆಗಳನ್ನು ಧರಿಸಬೇಕು ಕುಟುಂಬ ಕಾರ್ಯಕ್ರಮಗಳಿಗೆ ಎಂತಹ ಬಟ್ಟೆಗಳು ಚಂದ ಎನ್ನುವುದನ್ನು ನೀವೇ ನಿರ್ಧಾರ ಮಾಡಿಕೊಳ್ಳಬೇಕು. ಇದರ ಬಗ್ಗೆ ಒಂದಿಷ್ಟು ತಿಳುವಳಿಕೆ ಜ್ಞಾನ ಕೂಡ ನಿಮ್ಮಲ್ಲಿರಬೇಕು, ಹೀಗಿದ್ದರೆ ವ್ಯಕ್ತಿಗಳನ್ನು ಹೆಚ್ಚಾಗಿ ತಾವು ಧರಿಸುವಂತಹ ಉಡುಪುಗಳಿಂದ ಅಳೆಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ನೀವು ಧರಿಸುವಂತಹ ಬಟ್ಟೆಗಳೇ ನಿಮ್ಮ ನಡತೆ ನಿಮ್ಮ ಜೀವನ ಶೈಲಿಯನ್ನು ತೋರಿಸುತ್ತದೆ. ಹೀಗಾಗಿ ನೀವು ಎಲ್ಲರಿಗಿಂತ ಡಿಫ್ರೆಂಟ್ ಆಗಿ ಕಾಣಬೇಕು ಅಂತ ಹೇಳಿದ್ರೆ ನೀವು ಧರಿಸುವಂತಹ ಬಟ್ಟೆಗಳು ಜೊತೆಗೆ ನಿಮ್ಮ ವ್ಯಕ್ತಿತ್ವ ಬಹಳ ದೊಡ್ಡ ವಿಷಯ ಆಗುತ್ತದೆ.

If you want to look different from everyone else, then it’s great if your personality is like this..! – ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page