Puttur: ನ. 29 ಮತ್ತ 30 ರಂದು ಪುತ್ತಿಲ ಪರಿವಾರ ಟ್ರಸ್ಟ್‌ನ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಕಿಡಿಗೇಡಿಗಳು ಕಾರ್ಯಕ್ರಮದ ಬ್ಯಾನರ್ ಹರಿದು ವಿಕೃತಿ ಮೆರೆದಿದ್ದಾರೆ.
ಬಲ್ನಾಡು ಎಂಬಲ್ಲಿ ಹಾಕಿದ್ದ ಬ್ಯಾನರ್ ಅನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪುತ್ತಿಲ ಅಭಿಮಾನಿಗಳು ಕಾನೂನಿನ ಮೊರೆ ಹೋಗುವ ಸಾಧ್ಯತೆ ಇದೆ.
ನ. 29 ಮತ್ತು 30 ರಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಮತ್ತು ಹಿಂದವೀ ಸಾಮ್ರಾಜ್ಯೋತ್ಸವ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ನಗರದ ಹಲವು ಕಡೆಗಳಲ್ಲಿ ಬ್ಯಾನರ್ ಹಾಕಲಾಗಿದೆ. ನ. 19 ರಂದು ಪುತ್ತೂರಿನಲ್ಲಿ ಬಿಜೆಪಿ ನೇತೃತ್ವದ ಅಟಲ್ ವಿರಾಸತ್ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಅರುಣ್ ಪುತ್ತಿಲ ಹಾಗೂ ಬಿಜೆಪಿ ನಡುವಿನ ಅಸಮಧಾನ ಎದ್ದು ಕಂಡಿತ್ತು. ಬಿಜೆಪಿ ಮತ್ತು ಅರುಣ್ ಪುತ್ತಿಲ ನಡುವೆ ಸರಿಯಿಲ್ಲ ಅನ್ನುವುದು ದೃಢವಾಗಿತ್ತು.
ಅಟಲ್ ವಿರಾಸತ್ ಕಾರ್ಯಕ್ರಮಕ್ಕೆ ಅರುಣ್ ಪುತ್ತಿಲ ಗೈರಾಗಿದ್ದರು. ಪುತ್ತಿಲ ಬೆಂಬಲಿಗರು ಸಹ ಈ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಬಿಜೆಪಿ ಸ್ಥಾನಮಾನ ನೀಡಿಲ್ಲ ಎಂಬ ಅಸಮಧಾನ ಸ್ಪಷ್ಟವಾಗಿತ್ತು. ಈ ನಡುವೆ ಫೇಸ್‌ಬುಕ್‌ನಲ್ಲಿ ಪುತ್ತಿಲ ಫಾರ್ ಪುತ್ತೂರು, 2028 ವಿಧಾನಸಭೆಗೆ ಪುತ್ತಿಲ ಅನ್ನುವ ಪೋಸ್ಟರ್‌ಗಳು ಸದ್ದು ಮಾಡಿದೆ.
ಈ ನಡುವೆ ಬ್ಯಾನರ್ ಹರಿದು ಹಾಕಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಂಟಾದ ಬಿಕ್ಕಟ್ಟು, ರಾಜಕೀಯ ಒಳಜಗಳಗಳು ಪುತ್ತೂರಿನಲ್ಲಿ ಮತ್ತೆ ಪುತ್ತಿಲ V/S ಬಿಜೆಪಿ ಅನ್ನುವ ಹಂತಕ್ಕೆ ತಲುವಿದೆ.
ಬ್ಯಾನರ್ ಹರಿದು ಹಾಕಿದ್ದು ಯಾರೆಂಬುವುದು ಸ್ಪಷ್ಟವಾಗಿಲ್ಲ. ಪುತ್ತಿಲ ಪರಿವಾರ ಕಾನೂನಿನ ಮೊರೆ ಹೋಗುವ ಸಾಧ್ಯತೆ ಇದೆ.
ಇದನ್ನೂ ಓದಿ: Temple: ಕೊಟ್ಟಿಯೂರು ಶಿವ ಪವಾಡದ ಬಗ್ಗೆ ನಿಮಗೆಷ್ಟು ಗೊತ್ತು..?
=========================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











